ಡಿ.ಎಲ್, ಡಿ.ಎಡ್ ಕೋರ್ಸ್: ಸ್ವಯಂ ವೆಬ್ಸೈಟ್ ಬಳಸಲು ಸೂಚನೆ

Posted By:

ಡಿಎಲ್,ಡಿಎಡ್ ಕೋರ್ಸ್ ಗಳಿಗೆ ಸಿದ್ಧತೆ ನಡೆಸುತ್ತಿರುವವರು ತಮ್ಮ ಅಧ್ಯಯನಕ್ಕೆ ಸಹಕಾರಿಯಾಗಲು ಆನ್ಲೈನ್ ನೆರವು ಪಡೆಯಲು ರಾಷ್ಟೀಯ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆ ಸಲಹೆ ನೀಡಿದೆ.

ಕೋರ್ಸಿಗೆ ಸಂಬಂಧ ಪಟ್ಟ ಅಗತ್ಯ ಪಠ್ಯಗಳು ಆನ್ಲೈನ್ ನಲ್ಲಿ ಸಿಗುತ್ತಿದ್ದು, ಡಿಎಲ್,ಡಿಎಡ್ ಕೋರ್ಸ್ ಗಳಿಗೆ ನೋಂದಣಿಯಾಗಿರುವ ರಾಜ್ಯದ ಎಲ್ಲ ಅಭ್ಯರ್ಥಿಗಳು ಅಧ್ಯಯನ ಸಾಮಗ್ರಿಗಳನ್ನು ಸ್ವಯಂ ಜಾಲತಾಣ ಮತ್ತು dsert.kar.nic.in ನಿಂದ ಪಡೆದುಕೊಂಡು ಅಧ್ಯಯನ ಮಾಡಬಹುದಾಗಿದೆ.

ಸ್ವಯಂ ಬಳಸಲು ಸೂಚನೆ

ಇನ್ನು ಜಾಲತಾಣದಂತೆ ದೂರದರ್ಶನದಲ್ಲೂ ಕೋರ್ಸಿಗೆ ಸಂಬಂಧಪಟ್ಟ ಮಾಹಿತಿ ಲಭ್ಯವಿದ್ದು, ಅಭ್ಯರ್ಥಿಗಳು ವಿಡಿಯೋ ಉಪನ್ಯಾಸಗಳನ್ನು ಉಚಿತವಾಗಿ ದೂರದರ್ಶನದ ಸ್ವಯಂ ಚಾನೆಲ್ ಸಂಖ್ಯೆ 32 ರಲ್ಲಿ ವೀಕ್ಷಿಸಬಹುದಾಗಿದೆ.

ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ 'ಸ್ವಯಂ' ಮನೆ ಪಾಠ

ಎಲ್ಲ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ನೋಂದಾಯಿತ ಶಿಕ್ಷಕರಿಗೆ ಚಾನೆಲ್ ವೀಕ್ಷಿಸಿ ಅದರ ಪ್ರಯೋಜನ ಪಡೆಯಲು ಸೂಚಿಸಬೇಕು. ಎಲ್ಲ ನೋಂದಾಯಿತ ಅಭ್ಯರ್ಥಿಗಳಿಗೆ ಕಾಲ ಕಾಲಕ್ಕೆ ಎಸ್ ಎಂ ಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಾಂತೀಯ ನಿರ್ದೇಶಕ ಎಸ್ ಚಂದ್ರಶೇಖರ್ ತಿಳಿಸಿದ್ದಾರೆ.

ಸ್ವಯಂ

ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ನಾಲ್ಕು ಶೈಕ್ಷಣಿಕ ಟಿವಿ ವಾಹಿನಿಗಳಿಗೆ ಜುಲೈ ತಿಂಗಳಿನಲ್ಲಿ ಚಾಲನೆ ನೀಡಿತ್ತು. ಸ್ವಯಂ ಹೆಸರಿನಲ್ಲಿ ಶುರುವಾಗಿರುವ ಉಚಿತ ಆನ್-ಲೈನ್ ಶಿಕ್ಷಣ ಮೂಲಕ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪ್ರವೇಶ ಪರೀಕ್ಷೆಗೆ ಅಭ್ಯಾಸ ಮಾಡಬಹುದಾಗಿದೆ. ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ತಜ್ಞರು ವಾಹಿನಿಗಳ ಮೂಲಕ ಪರೀಕ್ಷಾ ತಯಾರಿ ಬಗ್ಗೆ ಬೋಧನೆ ಮಾಡಲಿದ್ದಾರೆ

ಸ್ವಯಂ ಪ್ರಭ ವಾಹಿನಿ

32 ಶೈಕ್ಷಣಿಕ ವಾಹಿನಿಗಳು 'ಸ್ವಯಂ ಪ್ರಭ' ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಡಿಶ್‌ ಟಿವಿಯಲ್ಲಿ ದಿನದ 24 ಗಂಟೆಗಳೂ ಪ್ರಸಾರವಾಗಲಿವೆ.

ಆನ್‌ಲೈನ್‌ ಕೋರ್ಸ್‌ಗಳ ವೇದಿಕೆ 'ಸ್ವಯಂ' ಪ್ರೌಢ ಮತ್ತು ಪಿಯುಸಿ ಮಟ್ಟದ 29 ವಿಷಯಗಳಲ್ಲಿ ವರ್ಚ್ಯುವಲ್ ತರಗತಿಗಳನ್ನು ನಡೆಸಲಿದೆ.

ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ ಮೆಂಟ್‌ ಸೇರಿದಂತೆ ವಿವಿಧ ಕ್ಷೇತ್ರಗಳ 210 ಪದವಿ ಕೋರ್ಸ್‌ಗಳು ಮತ್ತು 192 ಸ್ನಾತಕೋತ್ತರ ಪದವಿ ರ್ಸ್‌ಗಳ ಬೋಧನೆಯೂ ಸ್ವಯಂ ವಾಹಿನಿಯಲ್ಲಿ ಇರಲಿದೆ. ಇದರ ಜೊತೆಗೆ 14 ಅಲ್ಪಾವಧಿ (ಸರ್ಟಿಫಿಕೇಟ್‌) ಕೋರ್ಸ್‌ಗಳು ಮತ್ತು ಮೂರು ಡಿಪ್ಲೊಮಾ ಕೋರ್ಸ್‌ಗಳನ್ನೂ ನೀಡಲಿದೆ.

ಸ್ವಯಂ ಆನ್-ಲೈನ್ ಕೋರ್ಸ್

ಸ್ವಯಂ ಆನ್-ಲೈನ್ ಶಿಕ್ಷಣ ಮೂಲಕ ಯಾರು ಬೇಕಾದರೂ, ದೇಶದ ಯಾವ ಮೂಲೆಯಿಂದಲೂ ಆನ್‌ಲೈನ್‌ ಮೂಲಕ ಅಲ್ಪ ಖರ್ಚಿನಲ್ಲಿ ಈ ಕೋರ್ಸ್‌ಗಳನ್ನು ಮಾಡಬಹುದು.

ಸ್ವಯಂ ಆನ್-ಲೈನ್ ಶಿಕ್ಷಣ ಮೂಲಕ ಪ್ರಮಾಣ ಪತ್ರ, ಡಿಪ್ಲೊಮಾ ಮತ್ತು ಪದವಿ ಪಡೆಯಲು ಬಯಸುವವರು ಅದರ ಪೋರ್ಟಲ್‌ಗೆ ಭೇಟಿ ಕೊಟ್ಟು ನೋಂದಣಿ ಮಾಡಿಸಿಕೊಂಡು, ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕು.

ಕೋರ್ಸ್‌ ಮುಗಿದು ಪದವಿ, ಡಿಪ್ಲೊಮಾ ಪ್ರಮಾಣಪತ್ರ ನೀಡುವುದಕ್ಕೂ ಮುನ್ನ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಪಡೆದಿರುವ ಅಂಕ/ಗ್ರೇಡ್‌ಗಳನ್ನು ಆ ಅಭ್ಯರ್ಥಿಯ ಶೈಕ್ಷಣಿಕ ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ಯಾವುದಾದರೂ ವಿ.ವಿ ಮತ್ತು ಕಾಲೇಜುಗಳಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರ ಅಂಕಗಳು ಮತ್ತು ಗ್ರೇಡ್‌ಗಳನ್ನು ಅವರ ಮಾತೃ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸ್ವಯಂ: swayam.gov.in ಮತ್ತು ಸ್ವಯಂ ಪ್ರಭಾ: www.swayamprabha.gov.in ಗಮನಿಸಿ.

English summary
National Open University advised D.El, D.Ed registered candidates to utilize Swayam webportal and Swayam Prabha channel for exam preparation.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia