National Teachers Awards 2021 : ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ 44 ಶಿಕ್ಷಕರ ಪಟ್ಟಿ

ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಸಕ್ತ ಸಾಲಿನಲ್ಲಿ 44 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್ 5ರ ಶಿಕ್ಷಕರ ದಿನದಂದು ರಾಷ್ಟ್ರಪತಿಗಳು ಪ್ರಶಸ್ತಿ ನೀಡಲಿದ್ದಾರೆ.

44 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆ

ಈ ವರ್ಷದ ರಾಷ್ಟ್ರಪ್ರಶಸ್ತಿ ವಿಜೇತರು ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರ ಪ್ರದೇಶ, ಛತ್ತೀಸ್‌ಗರ್, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ಸಿಕ್ಕಿಂ, ಮಿಜೋರಾಂ, ತ್ರಿಪುರ, ಅಸ್ಸಾಂ, ಜಾರ್ಖಂಡ್, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪುದುಚೇರಿಯಿಂದ ಆಯ್ಕೆಯಾಗಿದ್ದಾರೆ. ಈ ವರ್ಷ ಪ್ರಶಸ್ತಿ ಪಡೆದವರಲ್ಲಿ ಒಂಬತ್ತು ಮಂದಿ ಮಹಿಳೆಯರು ಇದ್ದಾರೆ.

ಪ್ರಮುಖವಾಗಿ ಕರ್ನಾಟಕ ರಾಜ್ಯದ ಓರ್ವ ಶಿಕ್ಷಕರು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬಾನಹಳ್ಳಿ ಗ್ರಾಮದ ದೊಡ್ಡಬಾನಹಳ್ಳಿ ಪ್ರೌಢ ಶಾಲೆ ಶಿಕ್ಷಕ ಸಿ.ಎನ್ ನಾಗರಾಜ್ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ಸರ್ಕಾರದ ಪ್ರಕಾರ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡುವ ಉದ್ದೇಶವೆಂದರೆ ದೇಶದ ಕೆಲವು ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆಯನ್ನು ಗುರುತಿಸಿ ಅವರ ಬದ್ಧತೆ ಮತ್ತು ಕರ್ತವ್ಯದ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿದ್ದಲ್ಲದೆ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದ ಶಿಕ್ಷಕರನ್ನು ಗೌರವಿಸುವುದು. 1958ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಶಿಕ್ಷಕರು ತಮ್ಮನ್ನು ಜೂನ್ 1 ರಿಂದ ಜುಲೈ 10 ರವರೆಗೆ ಸ್ವಯಂ-ನಾಮನಿರ್ದೇಶನ ಮಾಡಿಕೊಂಡರು, ತೀರ್ಪುಗಾರರು ಆಗಸ್ಟ್ 10 ರಂದು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದರು.

ಪ್ರಶಸ್ತಿ ಪುರಸ್ಕೃತರ ಆಯ್ಕೆಯನ್ನು ರಾಜ್ಯ ಮಟ್ಟದ ಆಯ್ಕೆ ಸಮಿತಿ/ಕೇಂದ್ರ ಪ್ರಶಸ್ತಿ ಸಮಿತಿಯು ಶಿಕ್ಷಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ಮಾಡುತ್ತದೆ. ಸಮಿತಿಯು ಶಿಫಾರಸು ಮಾಡಿದ ಶಿಕ್ಷಕರ ಹೆಸರನ್ನು ರಾಜ್ಯ ಸರ್ಕಾರವು ರವಾನಿಸುತ್ತದೆ ಮತ್ತು ಭಾರತ ಸರ್ಕಾರವು ಅರ್ಹತೆಗಳ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಪದಕ, ಪ್ರಮಾಣಪತ್ರ ಮತ್ತು 50,000/-ರೂ ನಗದನ್ನು ನೀಡಿ ಗೌರವಿಸಲಾಗುತ್ತದೆ. ಈ ಭಾರಿ ಪ್ರಶಸ್ತಿಗೆ ಆಯ್ಕೆಯಾದ 44 ಶಿಕ್ಷಕರ ಹೆಸರು ಮತ್ತು ರಾಜ್ಯದ ಹೆಸರುಗಳನ್ನು ಇಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ 44 ಶಿಕ್ಷಕರ ಸಂಪೂರ್ಣ ಪಟ್ಟಿ ಇಲ್ಲಿದೆ :

1. ಮಮತಾ ಪಲಿವಾಲ್- ಹರಿಯಾಣ
2. ಕಮಲ್ ಕಿಶೋರ್ ಶರ್ಮಾ- ಹಿಮಾಚಲ ಪ್ರದೇಶ
3. ಜಗ್‌ತರ್ ಸಿಂಗ್- ಪಂಜಾಬ್
4. ವಿಪಿನ್ ಕುಮಾರ್- ದೆಹಲಿ
5. ದೀಪಕ್ ಜೋಶಿ- ರಾಜಸ್ಥಾನ
6. ಜಲ್‌ಸಿಂಗ್- ರಾಜಸ್ಥಾನ
7. ವನಿತಾ ದಯಾಭಾಯ್ ರಾಥೋಡ್- ಗುಜರಾತ್
8. ಅಶೋಕ್ ಕುಮಾರ್ ಮೊಹನ್‌ಲಾಲ್ ಪಾರ್ಮರ್- ಗುಜರಾತ್
9. ಶಕ್ತಿ ಪಟೇಲ್- ಮಧ್ಯಪ್ರದೇಶ
10. ಹರಿದಾಸ್ ಶರ್ಮಾ- ಬಿಹಾರ್
11. ಚಂದನಾ ದತ್ತಾ- ಬಿಹಾರ್
12. ಅಶೋಕ್ ಕುಮಾರ್ ಸತ್ಪತಿ- ಒಡಿಶಾ
13. ಅಜಿತ್ ಕುಮಾರ್ ಸೇಥಿ- ಒಡಿಶಾ
14. ಹರಿಸ್ವಾಮಿ ದಾಸ್- ಪಶ್ಚಿಮ ಬಂಗಾಳ
15. ಸಂಜೀವ್ ಕುಮಾರ್ ಶರ್ಮಾ- ಜಮ್ಮು ಮತ್ತು ಕಾಶ್ಮೀರ
16. ಮೊಹಮ್ಮದ್ ಅಲಿ- ಲಡಾಖ್
17. ತೃಪ್ತಿ ಮಹೌರ್- ಉತ್ತರಪ್ರದೇಶ
18. ಮನೀಶ್ ಕುಮಾರ್- ಉತ್ತರಪ್ರದೇಶ
19. ಸುರುಚಿ ಗಾಂಧಿ- ಸಿಬಿಎಸ್‌ಇ
20. ಅಚಲಾ ವರ್ಮಾ- ಸಿಬಿಎಸ್‌ಇ
21. ಮ್ಯಾಥ್ಯೂ ಥಾಮಸ್- ಸೈನಿಕ ಶಾಲೆ
22. ಪ್ರಮೋದ್ ಕುಮಾರ್ ಶುಕ್ಲಾ- ಇಎಂಆರ್‌ಎಸ್- ಮೋಟಾ
23. ಫೈಸಲ್. ಎಲ್. ಎಸ್- ಕೆವಿಎಸ್
24. ದೂಡಾ ಸೋರಾ- ಅರುಣಾಚಲ ಪ್ರದೇಶ
25. ಸ್ವೇಡೆಸುನೋ ಜಾಹೋ- ನಾಗಾಲ್ಯಾಂಡ್
26. ನಿಂಗ್‌ಮರಿಯೋ ಶೀಮ್ರೆ- ಮಣಿಪುರ
27. ಪ್ರೇಮ್ ದಾಸ್ ಚೆಟ್ರಿ- ಸಿಕ್ಕಿಂ
28. ಮಿಂಗ್ಮಾ ಶೆರ್ಪಾ- ಸಿಕ್ಕಿಂ
29. ಜಸಿಂಟಾ ವನಲಂಗಜಿಮಿ- ಮೀಜೋರಾಂ
30. ಶಿವ ಶಂಕರ್ ಪಾಲ್- ತ್ರಿಪುರ
31. ಕಂಗ್‌ಕನ್ ಕಿಶೋರ್ ದತ್ತಾ- ಅಸ್ಸಾಂ
32. ಬಿನಂದಾ ಸ್ವರ್ಗೇರಿ- ಅಸ್ಸಾಂ
33. ಪ್ರಸಾದ್ ಮನಪ್ಪರಂಬಿಲ್ ಭಾಸ್ಕರನ್- ಕೇರಳ
34. ಮನೋಜ್ ಕುಮಾರ್ ಸಿಂಗ್- ಜಾರ್ಖಾಂಡ್
35. ಕೆ.ಪಿ. ಭೂಷಣ್ ಶ್ರೀಧರ್- ಆಂಧ್ರಪ್ರದೇಶ
36. ಎಸ್. ಮುನಿರೆಡ್ಡಿ- ಆಂಧ್ರಪ್ರದೇಶ
37. ರಂಗಯ್ಯ ಕಡೆರ್ಲಾ- ತೆಲಂಗಾಣ
38. ರಾಮಸ್ವಾಮಿ ಪಯ್ಯವುಲಾ- ತೆಲಂಗಾಣ
39. ನಾಗಾರಾಜ. ಸಿ.ಎಂ- ಕರ್ನಾಟಕ
40. ಆಶಾದೇವಿ .ಕೆ - ತಮಿಳುನಾಡು
41. ಲಲಿತಾ. ಡಿ- ತಮಿಳುನಾಡು
42. ಖುರ್ಷೀದ್ ಕುತ್ಬುದ್ದೀನ್ ಶೇಖ್- ಮಹಾರಾಷ್ಟ್ರ
43. ಉಮೇಶ್ ರಘುನಾಥ್ ಖೂಸೆ- ಮಹಾರಾಷ್ಟ್ರ
44. ಜಯಸುಧೀರ್. ವಿ. - ಪುದುಚೇರಿ

For Quick Alerts
ALLOW NOTIFICATIONS  
For Daily Alerts

English summary
National Teachers Awards 2021 announced; Here is the Full list of 44 teachers released by education ministry. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X