National Teachers Awards 2022 : ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ 46 ಶಿಕ್ಷಕರ ಪಟ್ಟಿ

By Kavya L

ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಸಕ್ತ ಸಾಲಿನಲ್ಲಿ 46 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್ 5ರ ಶಿಕ್ಷಕರ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ನೀಡಲಿದ್ದಾರೆ.

 

ಈ ವರ್ಷ 46 ಶಿಕ್ಷಕರಿಗೆ ಸೆಪ್ಟೆಂಬರ್ 5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಶಿಕ್ಷಕರಿಗೆ (NAT) 2022ರ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 46 ಶಿಕ್ಷಕರಲ್ಲಿ ಒಬ್ಬರು ಉತ್ತರಾಖಂಡ್ ಮತ್ತು ಇನ್ನೊಬ್ಬರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ವಿಕಲಚೇತನ ಶಿಕ್ಷಕರಿಗೆ ವಿಶೇಷ ವರ್ಗದ ಅಡಿಯಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಶಿಕ್ಷಣ ಸಚಿವಾಲಯ ಹೊರಡಿಸಿರುವ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ರಾಜ್ಯದ ಇಬ್ಬರು ಶಿಕ್ಷಕರು ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಜಿ ಪೊನ್‌ಶಂಕರಿ ಮತ್ತು ಚಿತ್ರದುರ್ಗ ಜಿಲ್ಲೆಯ ಅಮೃತಾಪುರದ ಜಿಎಲ್‌ಪಿಎಸ್ ಶಾಲೆಯ ಶಿಕ್ಷಕ ಉಮೇಶ್ ಟಿ ಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. NAT 2022 ಅನ್ನು ಶಿಕ್ಷಣ ಸಚಿವಾಲಯದ ದೂರದರ್ಶನ ಮತ್ತು ಸ್ವಯಂ ಪ್ರಭಾ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು webcast.gov.in/moe ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

46 ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆ : ರಾಜ್ಯದ ಇಬ್ಬರಿಗೆ ರಾಷ್ಟ್ರೀಯ ಪ್ರಶಸ್ತಿ

ಸರ್ಕಾರದ ಪ್ರಕಾರ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡುವ ಉದ್ದೇಶವೆಂದರೆ ದೇಶದ ಕೆಲವು ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆಯನ್ನು ಗುರುತಿಸಿ ಅವರ ಬದ್ಧತೆ ಮತ್ತು ಕರ್ತವ್ಯದ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿದ್ದಲ್ಲದೆ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದ ಶಿಕ್ಷಕರನ್ನು ಗೌರವಿಸುವುದು. 1958ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.

 

ಪ್ರಶಸ್ತಿ ಪುರಸ್ಕೃತರ ಆಯ್ಕೆಯನ್ನು ರಾಜ್ಯ ಮಟ್ಟದ ಆಯ್ಕೆ ಸಮಿತಿ/ಕೇಂದ್ರ ಪ್ರಶಸ್ತಿ ಸಮಿತಿಯು ಶಿಕ್ಷಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ಮಾಡುತ್ತದೆ. ಸಮಿತಿಯು ಶಿಫಾರಸು ಮಾಡಿದ ಶಿಕ್ಷಕರ ಹೆಸರನ್ನು ರಾಜ್ಯ ಸರ್ಕಾರವು ರವಾನಿಸುತ್ತದೆ ಮತ್ತು ಭಾರತ ಸರ್ಕಾರವು ಅರ್ಹತೆಗಳ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಪದಕ, ಪ್ರಮಾಣಪತ್ರ ಮತ್ತು 50,000/-ರೂ ನಗದನ್ನು ನೀಡಿ ಗೌರವಿಸಲಾಗುತ್ತದೆ. ಈ ಭಾರಿ ಪ್ರಶಸ್ತಿಗೆ ಆಯ್ಕೆಯಾದ 4೬ ಶಿಕ್ಷಕರ ಹೆಸರು ಮತ್ತು ರಾಜ್ಯದ ಹೆಸರುಗಳನ್ನು ಇಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ 46 ಶಿಕ್ಷಕರ ಸಂಪೂರ್ಣ ಪಟ್ಟಿ ಇಲ್ಲಿದೆ 1. ಅಂಜು ದಹಿಯಾ- ಹರಿಯಾಣ

2. ಯುಧವೀರ್ - ಹಿಮಾಚಲ ಪ್ರದೇಶ

3. ವೀರೇಂದ್ರ ಕುಮಾರ್ - ಹಿಮಾಚಲ ಪ್ರದೇಶ

4. ಹರಪ್ರೀತ್ ಸಿಂಗ್ - ಪಂಜಾಬ್

5. ಅರುಣ್ ಕುಮಾರ್ ಗಾರ್ಗ್ - ಪಂಜಾಬ್

6. ರಜನಿ ಶರ್ಮಾ- ದೆಹಲಿ

7. ಕೌಸ್ತುಭ್ ಚಂದ್ರ ಜೋಶಿ - ಉತ್ತರಾಖಂಡ

8. ಸೀಮಾ ರಾಣಿ - ಚಂಡೀಗಢ

9. ಸುನೀತಾ - ರಾಜಸ್ಥಾನ

10. ದುರ್ಗಾ ರಾಮ್ ಮುವಾಲ್- ರಾಜಸ್ಥಾನ

11. ಮರಿಯಾ ಮುರೇನಾ ಮಿರಾಂಡಾ - ಗೋವಾ

12. ಉಮೇಶ್ ಭಾರತಭಾಯ್ ವಾಲಾ -ಗುಜರಾತ್

13. ನೀರಜ್ ಸಕ್ಸೇನಾ - ಮಧ್ಯಪ್ರದೇಶ

14. ಓಂ ಪ್ರಕಾಶ್ ಪಾಟಿದಾರ್ - ಮಧ್ಯಪ್ರದೇಶ

15. ಮಮತಾ ಅಹರ್ - ಛತ್ತೀಸ್‌ಗಢ

16. ಕವಿತಾ ಸಾಂಘ್ವಿ - ಮುಂಬೈ

17. ಈಶ್ವರಚಂದ್ರ ನಾಯಕ್ - ಒಡಿಶಾ

18. ಬುದ್ಧದೇವ್ ದತ್ತಾ - ಪಶ್ಚಿಮ ಬಂಗಾಳ

19. ಜಾವಿದ್ ಅಹ್ಮದ್ ರಾಥರ್ - ಜಮ್ಮು ಮತ್ತು ಕಾಶ್ಮೀರ

20. ಮೊಹಮ್ಮದ್ ಜಬೀರ್ - ಲಡಾಖ್

21. ಖುರ್ಷೀದ್ ಅಹ್ಮದ್ - ಉತ್ತರ ಪ್ರದೇಶ

22. ಸೌರಭ್ ಸುಮನ್ - ಬಿಹಾರ

23. ನಿಶಿ ಕುಮಾರಿ, ಶಿಕ್ಷಕಿ - ಬಿಹಾರ

24. ಅಮಿತ್ ಕುಮಾರ್ - ಶಿಮ್ಲಾ

25. ಸಿದ್ಧಾರ್ಥ್ ಯೋನ್ಜೋನ್ - ಗ್ಯಾಲ್ಶಿಂಗ್

26. ಜೈನಸ್ ಜೇಕಬ್ - ತ್ರಿಶೂರ್

27. ಜಿ ಪೊನ್‌ಶಂಕರಿ - ಕರ್ನಾಟಕ

28. ಉಮೇಶ್ ಟಿ ಪಿ, - ಕರ್ನಾಟಕ

29. ಮಿಮಿ ಯೋಶಿ, - ನಾಗಾಲ್ಯಾಂಡ್

30. ನೊಂಗ್ಮೈಥೆಮ್ ಗೌತಮ್ ಸಿಂಗ್ - ಮಣಿಪುರ

31. ಮಾಲಾ ಜಿಗ್ದಾಲ್ ದೋರ್ಜಿ - ಸಿಕ್ಕಿಂ

32. ಗಮ್ಚಿ ಟಿಮ್ರೆ ಆರ್. ಮಾರಾಕ್ - ಮೇಘಾಲಯ

33. ಸಂತೋಷ್ ನಾಥ್ - ತ್ರಿಪುರಾ

34. ಮೀನಾಕ್ಷಿ ಗೋಸ್ವಾಮಿ - ಅಸ್ಸಾಂ

35. ಶಿಪ್ರಾ - ಜಾರ್ಖಂಡ್

36. ಡಾ ರವಿ ಅರುಣ - ಆಂಧ್ರಪ್ರದೇಶ

37. ಟಿ ಎನ್ ಶ್ರೀಧರ್ - ತೆಲಂಗಾಣ

38. ಕಂದಲ ರಾಮಯ್ಯ - ತೆಲಂಗಾಣ

39. ಸುನೀತಾ ರಾವ್ - ತೆಲಂಗಾಣ

40. ವಂದನಾ ಶಾಹಿ - ಪಂಜಾಬ್

41. ರಾಮಚಂದ್ರನ್ ಕೆ, - ತಮಿಳುನಾಡು

42. ಶಶಿಕಾಂತ ಸಂಭಾಜಿರಾವ್ ಕುಳ್ತೆ - ಮಹಾರಾಷ್ಟ್ರ

43. ಸೋಮನಾಥ ವಾಮನ್ ವಾಳ್ಕೆ - ಮಹಾರಾಷ್ಟ್ರ

44. ಅರವಿಂದರಾಜ ಡಿ, - ಪುದುಚೇರಿ

45. ಪ್ರದೀಪ್ ನೇಗಿ - ಉತ್ತರಾಖಂಡ

46. ರಂಜನ್ ಕುಮಾರ್ ಬಿಸ್ವಾಸ್ - ದಕ್ಷಿಣ ಅಂಡಮಾನ್

For Quick Alerts
ALLOW NOTIFICATIONS  
For Daily Alerts

English summary
National Teachers Award 2022 announced, Here is the Full list of 46 teachers in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X