ರಾಷ್ಟ್ರೀಯ ಯುವ ದಿನ: ವಿವೇಕಾನಂದರ 155ನೇ ಜನ್ಮದಿನಾಚರಣೆ

ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ. ಕಣಕಣದಲ್ಲೂ ದೇಶ ಭಕ್ತಿಯನ್ನು ತುಂಬಿಕೊಂಡಿದ್ದ ಆ ಮಹಾನ್ ಚೇತನ ಭಾರತ ದೇಶದ ವೈಶಿಷ್ಟ್ಯವನ್ನು ವಿಶ್ವಕ್ಕೆ ಪರಿಚಯಿಸಿದವರು.

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ.12ನ್ನು 'ರಾಷ್ಟ್ರೀಯ ಯುವ ದಿನ'ವಾಗಿ ಆಚರಿಸಲಾಗುತ್ತದೆ.

"ಏಳಿ ಎದ್ದೇಳಿಗುರಿ ಮುಟ್ಟುವ ತನಕ ನಿಲ್ಲದಿರಿ" ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನನಗೆ 100 ಜನ ಗಟ್ಟಿ ಮುಟ್ಟಾದ ಯುವಕರನ್ನು ಕೊಡಿ ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಸ್ವಾಮೀಜಿ.

ರಾಷ್ಟ್ರೀಯ ಯುವ ದಿನ

 

ಯುವಕರು ಹೇಡಿಗಳಾಗಬಾರದು, ನೀವೂ ಎಂದೂ ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂಬ ಸ್ವಾಮೀಜಿ ಸಂದೇಶ ಎಂದೆಂದಿಗೂ ಯುವ ಮನಸುಗಳನ್ನು ಎಚ್ಚರಿಸುವಂತದ್ದು.

1984ರಲ್ಲಿ ಭಾರತ ಸರಕಾರ ಈ ದಿನವನ್ನು ಯುವ ದಿನವಾಗಿ ಆಚರಿಸುವಂತೆ ಘೋಷಣೆ ಹೊರಡಿಸಿತು. ''ಸ್ವಾಮಿ ವಿವೇಕಾನಂದರ ತತ್ತ್ವಜ್ಞಾನ ಮತ್ತು ಅವರು ಬದುಕಿ ಬೋಧಿಸಿದ ಆದರ್ಶಗಳು ಭಾರತದ ಯುವಜನತೆಯ ದೊಡ್ಡ ಸಂಪನ್ಮೂಲ ಹಾಗೂ ಸ್ಫೂರ್ತಿಮೂಲವಾಗಿವೆ,'' ಎಂದು ಸರಕಾರ ಈ ಘೋಷಣೆಯಲ್ಲಿ ಗುರುತಿಸಿತು. 1985 ರಿಂದೀಚೆಗೆ ಪ್ರತಿವರ್ಷ ಯುವದಿನವನ್ನು ಆಚರಿಸಲಾಗುತ್ತಿದೆ.

1893ರ ಶಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ''ಅಮೆರಿಕದ ಸಹೋದರಿಯರೇ ಮತ್ತು ಸಹೋದರರೇ,'' ಎಂದು ಹೇಳುವ ಮೂಲಕ ಪಾಶ್ಚಿಮಾತ್ಯರ ಕಣ್ಣನ್ನು ತೆರೆಸಿದ ವಿವೇಕಾನಂದರು, ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಮುಂದೆ ಎತ್ತಿ ಹಿಡಿದರು.

1892 ರ ಸೆಪ್ಟೆಂಬರ್ 11 ರಂದು ಸೋಮವಾರ ಶಿಕಾಗೋ ನಗರದಲ್ಲಿ ನೆಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೇವಲ 3 ನಿಮಿಷದ ಭಾಷಣದಲ್ಲಿ ಭಾರತದ ಸನಾತನ ಧರ್ಮದ ಹಿರಿಮೆ ವಿಶ್ವಕ್ಕೆ ತಿಳಿಸಿ ವಿಶ್ವಾದ್ಯಂತ ಪ್ರಸಿದ್ಧರಾದರು.

ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೋಂಡ ಬಳಿಕ ಅಮೆರಿಕ, ಇಂಗ್ಲೆಂಡ್, ಯುರೋಪ್ ಹಾಗೂ ಭಾರತದಲ್ಲಿ ಅವರು ಮಾಡಿದ ಭಾಷಣ, ಅವರ ಪತ್ರಗಳು, ಅವರು ನೆಡೆಸಿದ ಚರ್ಚೆಗಳು ಇಂದಿಗೂ ಆಕಾರ ಗ್ರಂಥಗಳಾಗಿವೆ

ನೊಬೆಲ್ ಪುರಸ್ಕೃತ ರವೀಂದ್ರನಾಥ ಟಾಗೂರರು ವಿವೇಕಾನಂದರ ಕುರಿತು "ಭಾರತವನ್ನು ತಿಳಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿ" ಎಂದು ಹೇಳಿದ್ದಾರೆ. ಅಂದರೆ ವಿವೇಕಾನಂದರು ಭಾರತವನ್ನು ಪ್ರೀತಿಸುವುದರ ಜೊತೆಗೆ ಭಾರತವನ್ನು ಅಧ್ಯಯನ ಮಾಡಿದ್ದರು.

ಯುವದಿನದ ಆಚರಣೆ

ಯುವದಿನವನ್ನು ಈ ಮೊದಲು ವಿವೇಕಾನಂದ ಜಯಂತಿ ಎಂದು ಆಚರಿಸಲಾಗುತ್ತಿತ್ತು, ಶಾಲೆ ಹಾಗೂ ಕಾಲೇಜುಗಳಲ್ಲಿ ವಿವೇಕಾನಂದರ ಜೀವನ, ಬೋಧನೆಗಳ ಬಗ್ಗೆ ಉಪನ್ಯಾಸ, ಪ್ರವಚನ, ಸೆಮಿನಾರ್‌, ಯೋಗಾಸನಗಳು, ಸ್ಪರ್ಧೆಗಳು, ಸಂಗೀತ, ಯುವಜನೋತ್ಸವಗಳು ನಡೆಯುತ್ತವೆ.

For Quick Alerts
ALLOW NOTIFICATIONS  
For Daily Alerts

English summary
National Youth Day is celebrated in India on 12 January on the birthday of Swami Vivekananda. In 1984 the Government of India declared the day as the National Youth Day and since 1985 the event is celebrated in India every year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more