ವಡೋದರಾದಲ್ಲಿ ದೇಶದ ಮೊದಲ 'ರಾಷ್ಟ್ರೀಯ ರೈಲು ಮತ್ತು ಸಾಗಣೆ ವಿಶ್ವವಿದ್ಯಾಲಯ'

Posted By:

ದೇಶದ ಮೊದಲ 'ರಾಷ್ಟ್ರೀಯ ರೈಲು ಮತ್ತು ಸಾಗಣೆ ವಿಶ್ವವಿದ್ಯಾಲಯ' (ಎನ್‌ಆರ್‌ಟಿಯು) ಸ್ಥಾಪಿಸುವ ರೈಲ್ವೆ ಸಚಿವಾಲಯದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ವಿದೇಶದಲ್ಲಿ ಐಐಎಂ ಶಿಕ್ಷಣ ನೀಡುವ ವಿದೇಯಕಕ್ಕೆ ಗ್ರೀನ್ ಸಿಗ್ನಲ್

ವಡೋದರಾದಲ್ಲಿ ದೇಶದ ಮೊದಲ ರೈಲ್ವೆ ವಿವಿ ತಲೆಯೆತ್ತಲಿದ್ದು, ಮಾನವ ಸಂಪನ್ಮೂಲಗಳಿಗೆ ಅಗತ್ಯವಾದ ಕೌಶಲ ಒದಗಿಸುವ ಉದ್ದೇಶದಿಂದ ರೈಲ್ವೆ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ.

ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ರೈಲ್ವೆ ವಿವಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ನಿಯಂತ್ರಣ ನಿಯಮಗಳು-2016ರ ಅಡಿಯಲ್ಲಿ ಡೀಮ್ಡ್‌ ವಿವಿಯಾಗಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೊಳ್ಳಲಿದೆ. 2018ರ ಏಪ್ರಿಲ್‌ ಒಳಗಾಗಿ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆದು ಜುಲೈನಲ್ಲಿ ಮೊದಲ ಶೈಕ್ಷಣಿಕ ಕೋರ್ಸ್‌ ಆರಂಭಿಸಲು ಸಚಿವಾಲಯ ಯೋಚಿಸಿದೆ.

ರೈಲ್ವೆ ಇಲಾಖೆಯ ಎಲ್ಲಾ ವಿಭಾಗಗಳ ಬಗ್ಗೆ ಸಿಬ್ಬಂದಿಗಳಿಗೆ ತರಬೇತಿಯನ್ನು ರೈಲ್ವೆ ವಿಶ್ವವಿದ್ಯಾನಿಲಯದಲ್ಲಿ ನೀಡಲಾಗುವುದು.

ರೈಲ್ವೆ ವಿವಿ ಸ್ಥಾಪನೆಯಿಂದ ರೈಲ್ವೆಗೆ ಸಂಬಂಧಿಸಿದ ತರಬೇತಿ ಮತ್ತು ಶಿಕ್ಷಣ ಸಿಗುವುದರ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೈಲ್ವೆ ವಿವಿ ಬಗ್ಗೆ ಕಾಳಜಿ ವಹಿಸಿದ್ದು, ಜೂನ್ 2018 ರ ಹೊತ್ತಿಗೆ ಮೂರು ಸಾವಿರ ವಿದ್ಯಾರ್ಥಿಗಳನ್ನೊಳಗೊಂಡ ವಿವಿಯು ತಲೆಯೆತ್ತಲಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕಾಗಿ ಅತ್ಯುನ್ನತ ಸಾಮಗ್ರಿ ಮತ್ತು ತರಬೇತಿಗೆ ಬೇಕಾದ ಅಗತ್ಯ ತಾಂತ್ರಿಕ ಉಪಕರಣಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಚೀನಾ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಈ ರೀತಿಯ ವಿಶ್ವವಿದ್ಯಾನಿಲಯಗಳಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಭಾರತ ಹೆಸರು ಕೂಡ ಆ ಪಟ್ಟಿಯಲ್ಲಿ ಸೇರಲಿದೆ.

English summary
he Indian Railways with the Cabinet approving the setting up of the first National Rail and Transport University (NRTU). The premier institution will be set up in Vadodara.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia