Indian freedom struggle quiz : ಈ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮಕ್ಕೆ ಮಾ.31ರೊಳಗೆ ಪಾಲ್ಗೊಳ್ಳಿ

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಶಿಕ್ಷಣ ಸಚಿವಾಲಯ ಮತ್ತು MyGov India ಸಹಯೋಗದೊಂದಿಗೆ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮಕ್ಕೆ ಆಕಸ್ತ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಪಾಲ್ಗೊಳ್ಳಬಹುದು.

ಭಾರತೀಯ ಸ್ವಾತಂತ್ರ್ಯ ಹೋರಾಟದ ವೀರರ ಕುರಿತು ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮ ಆರಂಭ

ಆನ್‌ಲೈನ್ ರಸಪ್ರಶ್ನೆಯು 'ಭಾರತೀಯ ಸ್ವಾತಂತ್ರ್ಯ ಹೋರಾಟದ ವೀರರು' ಎಂಬ ವಿಷಯದ ಮೇಲೆ ಆಧಾರಿತವಾಗಿದೆ. ವಿದ್ಯಾರ್ಥಿಗಳು NCERT ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲು ಅಧಿಕೃತ ವೆಬ್‌ಸೈಟ್ - quiz.mygov.in ಗೆ ಭೇಟಿ ನೀಡುವ ಮೂಲಕ ಮಾರ್ಚ್ 31,2022ರೊಳಗೆ ಭಾಗವಹಿಸಬಹುದು.

"NCERT @eduminofindia ಮತ್ತು @mygovindia ಸಹಯೋಗದೊಂದಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದಂದು "ಭಾರತೀಯ ಸ್ವಾತಂತ್ರ್ಯ ಹೋರಾಟದ ವೀರರು" ಆನ್‌ಲೈನ್ ರಸಪ್ರಶ್ನೆಯನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ಮಾರ್ಚ್ 31,2022ರೊಳಗೆ ಪ್ರಶ್ನೆಗಳಿಗೆ ಉತ್ತರಿಸಿ ನಿಮ್ಮ ಜ್ಞಾನವನ್ನು ಪರಿಶೀಲಿಸಿಕೊಳ್ಳಬಹುದು," ಎಂದು NCERT ಟ್ವೀಟ್ ಮಾಡಿದೆ.

ಭಾರತದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳ ಜ್ಞಾನ ಮತ್ತು ತಿಳುವಳಿಕೆಯನ್ನು ನಿರ್ಣಯಿಸಲು ರಸ ಪ್ರಶ್ನೆಗಳನ್ನು ವಿನ್ಯಾಸಗೊಳಿಸಲಾಗಿದೆ. ರಸಪ್ರಶ್ನೆಯು ಬಹು ಆಯ್ಕೆಯ ಪ್ರಶ್ನೆಗಳನ್ನು (MCQ ಗಳು) ಆಧರಿಸಿದೆ, ಪ್ರತಿ ಪ್ರಶ್ನೆಯು ಒಂದು ಅಂಕವನ್ನು ಹೊಂದಿರುತ್ತದೆ ಮತ್ತು ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ. ವಿದ್ಯಾರ್ಥಿಗಳು ಒಟ್ಟು 20 ಪ್ರಶ್ನೆಗಳನ್ನು ಉತ್ತರಿಸುವ ಅಗತ್ಯವಿರುತ್ತದೆ.

ರಸ ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆ ಎರಡರಲ್ಲೂ ಲಭ್ಯವಿರುತ್ತದೆ. ಭಾಗವಹಿಸುವವರು ಒಮ್ಮೆ ಮಾತ್ರ ಪ್ರಶ್ನೆಗಳನ್ನು ಉತ್ತರಿಸಲು ಅನುಮತಿಸಲಾಗಿದೆ ಮತ್ತು ಪ್ರತಿ ಪ್ರಶ್ನೆಗೆ ಒಂದು ಪ್ರತಿಕ್ರಿಯೆಯನ್ನು ಮಾತ್ರ ಸ್ವೀಕರಿಸಲಾಗುತ್ತದೆ.

ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಅಭ್ಯರ್ಥಿಗಳು ಅಂತಿಮ ಸಲ್ಲಿಕೆ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ಅಂತಿಮ ಸಲ್ಲಿಕೆಯ ನಂತರ ಯಾವುದೇ ಬದಲಾವಣೆಗಳನ್ನು ಮಾಡಲು ಅವಕಾಶವಿರುವುದಿಲ್ಲ ಎಂದು ಅಭ್ಯರ್ಥಿಗಳು ಗಮನಿಸಬೇಕು.

For Quick Alerts
ALLOW NOTIFICATIONS  
For Daily Alerts

English summary
NCERT launched online quiz for students to know about the knowledge of students of heroes of indian freedom struggle.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X