ಎನ್ ಸಿ ಇ ಆರ್ ಟಿ ಸಮೀಕ್ಷೆ: ಕಲಿಕಾ ಮಟ್ಟದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಬೆಸ್ಟ್

Posted By:

ಕಲಿಕಾ ಮಟ್ಟದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ದೇಶದಲ್ಲೇ ಉತ್ತಮ ಎಂಬ ವರದಿ ಬಹಿರಂಗವಾಗಿದೆ.

ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೇನಿಂಗ್ (ಎನ್ ಸಿಇಆರ್ ಟಿ) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದ್ದು, ಇಂಗ್ಲಿಷ್, ಸಮಾಜವಿಜ್ಞಾನ, ಗಣಿತ, ವಿಜ್ಞಾನದ ವಿಷಯದಲ್ಲಿ ಹತ್ತನೇ ತರಗತಿಯ ಕರ್ನಾಟಕದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸರಾಸರಿಗಿಂತ ಉತ್ತಮವಾಗಿದ್ದಾರೆ.

ಶಾಲೆಗಳ ನಿರ್ಲಕ್ಷ್ಯ: ಸುಮಾರು 16 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅತಂತ್ರ

ಎನ್ ಸಿ ಇ ಆರ್ ಟಿ ಕರ್ನಾಟಕದ ವಿದ್ಯಾರ್ಥಿಗಳು ಬೆಸ್ಟ್

ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರೌಢ ಶಿಕ್ಷಣ ವ್ಯವಸ್ಥೆಯ ಮೌಲ್ಯಮಾಪನ ಮಾಡಲಾಗಿತ್ತು. ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯುವ ಸಲುವಾಗಿ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ತಲಾ 358 ಶಾಲೆಗಳನ್ನು ಸ್ಯಾಂಪಲ್ ಆಗಿ ಆಯ್ಕೆ ಮಾಡಲಾಗಿತ್ತು.

ಸಮೀಕ್ಷೆ ನಡೆಸಿದ ತಂಡವು ಸಂಗ್ರಹವಾದ ದತ್ತಾಂಶವನ್ನು ಐಆರ್ ಟಿ (ಇಂಟರಿಮ್ ರೆಸ್ಪಾನ್ಸ್ ಥಿಯರಿ) ಪದ್ಧತಿಯಲ್ಲಿ ಮೌಲ್ಯಮಾಪನ ಮಾಡಿದೆ.

ರಾಷ್ಟ್ರೀಯ ಸರಾಸರಿ 250 ಪಾಯಿಂಟ್ಸ್. ಅದಕ್ಕಾಗಿ ನಿಗದಿಪಡಿಸಿದ್ದ ಮೌಲ್ಯವು 175 ರಿಂದ 350 ಪಾಯಿಂಟ್ಸ್ ಮಧ್ಯೆ ಇತ್ತು.

ಕರ್ನಾಟಕದ ಹತ್ತನೇ ತರಗತಿ ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿ 259, ಗಣಿತದಲ್ಲಿ 260, ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ 266 ಪಾಯಿಂಟ್ಸ್ ಪಡೆದಿದ್ದಾರೆ.

ವಿವಿಧ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳ ಸರಾಸರಿ ಪ್ರದರ್ಶನದಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಕಲಿಕಾ ಮಟ್ಟದ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಶೇ 50ರಷ್ಟು ವಿದ್ಯಾರ್ಥಿಗಳು ಪ್ರಗತಿ ಕಾಣಬೇಕು. ಆದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲಿ ಈ ಪ್ರಮಾಣ ಕಡಿಮೆ ಇದೆ ಎಂದು ತಿಳಿದುಬಂದಿದೆ.

ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಬಹಳ ಹಿಂದುಳಿದಿದ್ದಾರೆ.

ಇಂಗ್ಲಿಷ್ ವಿಷಯದಲ್ಲಿ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳು ಮುಂದಿದ್ದಾರೆ. ಇನ್ನುಳಿದ ಮೂರು ವಿಷಯಗಳಲ್ಲಿ ಎನ್ ಸಿಇಆರ್ ಟಿ ಸಮೀಕ್ಷೆಯಲ್ಲಿ ಹುಡುಗ ಮತ್ತು ಹುಡುಗಿಯರ ಮಧ್ಯೆ ಅಂಥ ವ್ಯತ್ಯಾಸ ಕಂಡುಬಂದಿಲ್ಲ. ಆದರೆ ನಾಲ್ಕೂ ವಿಷಯಗಳಲ್ಲಿ ಇಡೀ ದೇಶದ ವಿದ್ಯಾರ್ಥಿಗಳ ಸರಾಸರಿಗಿಂತ ಕರ್ನಾಟಕದ ಹತ್ತನೇ ತರಗತಿಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಬಹಳ ಮುಂದಿದ್ದಾರೆ ಎಂಬುದು ತಿಳಿದುಬಂದಿದೆ.

ದೇಶದಲ್ಲೇ ಅತ್ಯುತ್ತಮ ಸಾಧನೆ ಎಂದು ಕರ್ನಾಟಕದ ವಿದ್ಯಾರ್ಥಿಗಳು ಕಂಡುಬಂದರೂ ಈ ನಾಲ್ಕು ವಿಷಯದಲ್ಲಿ ಕಲಿಕಾ ಮಟ್ಟ ಇನ್ನೂ ಹೆಚ್ಚಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

English summary
NCERT survey revealed that, Karnataka class 10 students are best in the country. Students average points more than national average.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia