NEET Exam 2020 Covid 19 Instructions: ಸೆ.13ರಂದು ನಡೆಯಲಿರುವ ನೀಟ್ ಪರೀಕ್ಷೆಗೆ ಕೋವಿಡ್ 19 ಮಾರ್ಗಸೂಚಿ ಪಾಲಿಸಿ

ನೀಟ್ ಪರೀಕ್ಷೆಗೆ ನೀವು ಹಾಜರಾಗ್ತಿದ್ದೀರಾ? ಈ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) 2020 ರ ಆಗಸ್ಟ್ 26 ರಂದು ನೀಟ್ 2020 ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದ್ದು, ಪರೀಕ್ಷೆಯು ಸೆ.13ರಂದು ನಡೆಯಲಿದೆ. ಪ್ರವೇಶ ಪತ್ರದಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ. ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ನೀಡಲಾಗಿದೆ ಎಂದು ಇಲ್ಲಿ ತಿಳಿಯಿರಿ.

ಪರೀಕ್ಷಾ ಕೇಂದ್ರದಲ್ಲಿರುವ ಮುಂಜಾಗ್ರತೆ ಕ್ರಮ:

ಪರೀಕ್ಷಾ ಕೇಂದ್ರದಲ್ಲಿರುವ ಮುಂಜಾಗ್ರತೆ ಕ್ರಮ:

ಎಲ್ಲಾ ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ. ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಬಳಸಲು ಪ್ರತ್ಯೇಕ ಹ್ಯಾಂಡ್ ಸ್ಯಾನಿಟೈಸರ್ ಲಭ್ಯವಿರುತ್ತದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಉಷ್ಣತೆಯನ್ನು ಪರೀಕ್ಷಿಸಲು ಥರ್ಮೋಗನ್ ಗಳು ಲಭ್ಯವಿರುತ್ತವೆ.

ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಲಹೆ:

ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಲಹೆ:

ಪ್ರವೇಶ ಪತ್ರದಲ್ಲಿ ನಮೂದಿಸಿರುವ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಹಾಜರಿರಬೇಕು. ಅಭ್ಯರ್ಥಿಗಳು ಕೇಂದ್ರದಲ್ಲಿ ಕನಿಷ್ಟ 6 ಮೀಟರ್ ಅಂತ ಕಾಯ್ದುಕೊಳ್ಳಬೇಕು. ಕೇಂದ್ರಕ್ಕೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳು ಹ್ಯಾಂಡ್ ಸ್ಯಾನಿಟೈಜರ್ ನಿಂದ ಕೈಗಳನ್ನು ಸ್ವಚ್ಚಗೊಳಿಸಬೇಕು.ಎಲ್ಲಾ ಅಭ್ಯರ್ಥಿಗಳು ಮಾಸ್ಕ್ ಮತ್ತು ಸ್ಯಾನಿಟೈಜರ್ ಅನ್ನು ತರಬೇಕಾಗುತ್ತದೆ. ಆದರೆ ಪರೀಕ್ಷಾ ಸಭಾಂಗಣದ ಒಳಗೆ ಅವರು ಒಂದೇ ಮಾಸ್ಕ್ ಅನ್ನು ಬಳಸಲು ಸಾಧ್ಯ, ಅದು ಅವರಿಗೆ ಅಲ್ಲಿ ಲಭ್ಯವಾಗಲಿದೆ.

ಪರೀಕ್ಷಾ ಕೆಂದ್ರಗಳಿಗೆ ಪ್ರಯಾಣ ವ್ಯಸಸ್ಥೆ:

ಪರೀಕ್ಷಾ ಕೆಂದ್ರಗಳಿಗೆ ಪ್ರಯಾಣ ವ್ಯಸಸ್ಥೆ:

ಕೋವಿಡ್ ನಡುವೆಯೂ ಸೆಪ್ಟೆಂಬರ್ ೧೩ ರಂದು ನೀಟ್ ಪರೀಕ್ಷೆ ನಡೆಯಲಿದೆ. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಕ್ಕೆ ಹೋಗುವ ಅಭ್ಯರ್ಥಿಗಳಿಗೆ
ಒರಿಸ್ಸಾ, ಮಧ್ಯಪ್ರದೇಶ ಮತ್ತುಛತ್ತೀಸ್‌ಗಢದ ಸರ್ಕಾರಗಳು ಉಚಿತ ಬಸ್‌ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 13 ರಂದು ಕೋಲ್ಕತ್ತಾದಲ್ಲಿ ವಿಶೇಷ ಮೆಟ್ರೋ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿದುಬಂದಿದೆ. ಪ್ರವೇಶ ಪತ್ರವನ್ನು ತೋರಿಸಿದ ಅಭ್ಯರ್ಥಿಗಳಿಗೆ ಮೆಟ್ರೊದಲ್ಲಿ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಅವರೊಂದಿಗೆ ಅವರ ಪೋಷಕರು ಸಹ ಮೆಟ್ರೊದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಪರೀಕ್ಷೆ ಮುಗಿದ ಬಳಿಕ ಹೀಗೆ ಮಾಡಿ:

ಪರೀಕ್ಷೆ ಮುಗಿದ ಬಳಿಕ ಹೀಗೆ ಮಾಡಿ:

ಪರೀಕ್ಷೆ ಮುಗಿದ ಬಳಿಕವೂ ಅಭ್ಯರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪರೀಕ್ಷೆ ಮುಗಿದ ಬಳಿಕ ಪ್ರವೇಶ ಪತ್ರವನ್ನು ಇನ್ವಿಜಿಲೇಟರ್ ಗೆ ಹಸ್ತಾಂತರಿಸಬೇಕು. ನಂತರ ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
Here we are giving covid 19 instructions for students who are attending neet exam 2020 on september 13
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X