NEET 2021 Dress Code : ಸೆ.12ಕ್ಕೆ ನೀಟ್ ಪರೀಕ್ಷೆ ನಿಗದಿ, ಪರೀಕ್ಷೆಗೆ ಹೋಗುವವರು ಏನೆಲ್ಲಾ ಧರಿಸಬಾರದು ಗೊತ್ತಾ ?

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2021 ಅನ್ನು ಸೆಪ್ಟೆಂಬರ್‌ 12,2021ರಂದು ನಿಗದಿ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಏನೆಲ್ಲಾ ಧರಿಸಬಾರದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನೀಟ್ ಪರೀಕ್ಷೆಗೆ ಡ್ರೆಸ್ ಕೋಡ್ ಹೀಗಿರಲಿ

ಸೆಪ್ಟೆಂಬರ್ 12ರಂದು ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ನೀಟ್‌ ಪರೀಕ್ಷೆಯನ್ನು ಮುಂದೂಡಬೇಕು ಎಂದು ಹಲವು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದರೂ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಈ ಕುರಿತು ಯಾವುದೇ ಘೋಷಣೆಯನ್ನು ಮಾಡಿಲ್ಲ.

ಇತ್ತೀಚಿನ ವೇಳಾಪಟ್ಟಿಯ ಅನುಸಾರ ನೀಟ್ ಯುಜಿ 2021 ಅನ್ನು ಸೆಪ್ಟೆಂಬರ್ 12 ರಂದು ದೇಶಾದ್ಯಂತ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಯಾವುದೇ ಅನ್ಯಾಯದ ವಿಧಾನಗಳನ್ನು ಪಾಲಿಸಬಾರದು ಎಂದು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ನಿರ್ಧಿಷ್ಟ ಡ್ರೆಸ್ ಕೋಡ್ ಅನ್ನು ಎನ್‌ಟಿಎ ಸೂಚಿಸಿದೆ ಮತ್ತು ಅದನ್ನು ಅನುಸರಿಸದವರನ್ನು ಪರೀಕ್ಷಾ ಕೇಂದ್ರದ ಒಳಗೆ ಹಾಜರಾಗಲು ಅನುಮತಿ ಇರುವುದಿಲ್ಲ ಎಂದು ತಿಳಿಸಿದೆ.

ನೀಟ್ ಪರೀಕ್ಷೆಗೆ ಹಾಜರಾಗುವ ಮೊದಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಫ್ರಿಸ್ಕಿಂಗ್ ಪ್ರಕ್ರಿಯೆಗೆ ಒಳಗಾಗಬೇಕು. ವಿದ್ಯಾರ್ಥಿಗಳು ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ ಅಥವಾ ಯಾವುದೇ ಲೋಹದ ವಸ್ತುಗಳು ಅಥವಾ ಸಂವಹನ ಸಾಧನಗಳನ್ನು ಪರೀಕ್ಷೆಗೆ ತರದಂತೆ ನೋಡಿಕೊಳ್ಳಬೇಕು. ನೀಟ್ 2021 ಪರೀಕ್ಷೆಗೆ ಡ್ರೆಸ್ ಕೋಡ್‌ ಹೀಗಿವೆ.

ನೀಟ್ 2021 ವಿದ್ಯಾರ್ಥಿನಿಯರಿಗೆ ಡ್ರೆಸ್ ಕೋಡ್:

* ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಧರಿಸುವುದು ಕಡ್ಡಾಯ.

* ಮಹಿಳಾ ಅಭ್ಯರ್ಥಿಗಳು ಪೂರ್ಣ ತೋಳಿನ ಬಟ್ಟೆ, ವಿಸ್ತಾರವಾದ ಕಸೂತಿ, ಹೂವುಗಳು, ಬ್ರೂಚಸ್ ಅಥವಾ ದೊಡ್ಡ ಗುಂಡಿಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುವಂತಿಲ್ಲ.

* ಹೀಲ್ಸ್ ಚಪ್ಪಲಿಗಳನ್ನು, ದೊಡ್ಡ ಪಾಕೆಟ್ಸ್ ಹೊಂದಿರುವ ಜೀನ್ಸ್ ಅನ್ನು ಧರಿಸುವಂತಿಲ್ಲ.

* ಅಭ್ಯರ್ಥಿಗಳು ಕಿವಿಯೋಲೆಗಳು, ಮೂಗಿನ ಉಂಗುರಗಳು, ಉಂಗುರಗಳು, ಪೆಂಡೆಂಟ್‌ಗಳು, ನೆಕ್ಲೇಸ್‌ಗಳು, ಕಡಗಗಳು ಮತ್ತು ಪಾದಕ್ಕೆ ಯಾವುದೇ ರೀತಿಯ ಆಭರಣಗಳನ್ನು ಧರಿಸಬೇಡಿ.

ನೀಟ್ 2021 ವಿದ್ಯಾರ್ಥಿಗಳ ಡ್ರೆಸ್ ಕೋಡ್:

* ಫೇಸ್ ಮಾಸ್ಕ್ ಮತ್ತು ಗ್ಲೌಸ್ ಧರಿಸುವುದು ಕಡ್ಡಾಯ.

* ಪರೀಕ್ಷೆಗೆ ಹಾಜರಾಗುವ ಪುರುಷ ಅಭ್ಯರ್ಥಿಗಳಿಗೆ ಹಾಫ್ ಸ್ಲೀವ್ ಶರ್ಟ್, ಟೀ ಶರ್ಟ್ ಧರಿಸಲು ಅವಕಾಶವಿದೆ. ನೀಟ್ ಪರೀಕ್ಷೆಗೆ ಫುಲ್ ಸ್ಲೀವ್ ಶರ್ಟ್‌ಗಳನ್ನು ಧರಿಸುವಂತಿಲ್ಲ.

* ಪರೀಕ್ಷೆಯ ದಿನದಂದು ಹಗುರವಾದ ಬಟ್ಟೆಗಳನ್ನು ಧರಿಸಿ, ಜಿಪ್ ಪಾಕೆಟ್ಸ್, ದೊಡ್ಡ ಗುಂಡಿಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸುವಂತಿಲ್ಲ. ನೀವು ಸರಳವಾದ ಪ್ಯಾಂಟ್ ಮತ್ತು ಅಂಗಿಯನ್ನು ಧರಿಸಬಹುದು.

* ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಶೂ ಧರಿಸಬೇಡಿ. ಅಭ್ಯರ್ಥಿಗಳು ಚಪ್ಪಲಿ ಅಥವಾ ಇತರ ಸರಳ ಹಾಗೂ ತೆಳುವಾದ ಪಾದರಕ್ಷೆಗಳನ್ನು ಧರಿಸಲು ಅವಕಾಶವಿದೆ.

For Quick Alerts
ALLOW NOTIFICATIONS  
For Daily Alerts

English summary
NEET 2021 Dress Code: Exam is scheduled to be conducted on September 12. NTA specifies the dress code for NEET 2021 and also releases a list of items barred inside the examination hall for men and women. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X