ನೀಟ್‌ 2019: ದಾಖಲಾತಿಗೆ ಜೂನ್ 24,2019 ಕೊನೆಯ ದಿನ

ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ನ ಮೊದಲನೇ ಸುತ್ತಿನ ಕೌನ್ಸಿಲಿಂಗ್ ಆಲ್‌ ಇಂಡಿಯಾ ಕೋಟಾ/ಡೀಮ್ಡ್‌/ಕೇಂದ್ರೀಯ ವಿಶ್ವವಿದ್ಯಾಲಯಗಳು/ಇಎಸ್‌ಐಸಿ & ಎಫ್‌ಎಂಸಿ ಮೆಡಿಕಲ್‌ ಕೌನ್ಸೆಲಿಂಗ್‌ ಕಮಿಟಿ (ಎಂಸಿಸಿ)ಯ ಶೇ.15ರಷ್ಟು ಸೀಟುಗಳಿಗೆ ಕೌನ್ಸೆಲಿಂಗ್‌ ಜೂನ್‌ 19 ರಿಂದ ಆರಂಭವಾಗಿದೆ.

ನೀಟ್ ಯುಜಿ 2019 ರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಮೆಡಿಕಲ್ ಕೌನ್ಸಿಲಿಂಗ್ ಕಮಿಟಿಯ ಅಧಿಕೃತ ವೆಬ್‌ಸೈಟ್ ಗೆ ಹೋಗಿ ತಮ್ಮ ಹೆಸರನ್ನು ನೊಂದಾಯಿಸಬಹುದು. ಅಭ್ಯರ್ಥಿಗಳು ಎಂಸಿಸಿಗೆ ಗೆ ದಾಖಲಾತಿ ಮಾಡಲು ಜೂನ್ 24,2019 ಕೊನೆಯ ದಿನವಾಗಿರುತ್ತದೆ. ದಾಖಲಾತಿ ಶುಲ್ಕವನ್ನು ಪಾವತಿಸಲು ಜೂನ್ 25, 2019 ಕೊನೆಯ ದಿನವಾಗಿರುತ್ತದೆ.

ನೀಟ್‌ ಹೆಸರು ನೊಂದಾಯಿಸಲು ಜೂನ್ 24  ಕೊನೆಯ ದಿನ

ಮೊದಲನೆಯ ಸುತ್ತಿನ ಸೀಟುಗಳ ಹಂಚಿಕೆಯು ಜೂನ್ 26,2019ರಂದು ನಡೆಯಲಿದೆ. ಸೀಟ್ ಹಂಚಿಕೆಯ ಫಲಿತಾಂಶವು ಜೂನ್ 27,2019 ರಂದು ಪ್ರಕಟವಾಗಲಿದೆ. ಒಂದು ವೇಳೆ ಸೀಟುಗಳು ಉಳಿದಿದ್ದಲ್ಲಿ ಎರಡನೇ ಸುತ್ತಿನ ದಾಖಲಾತಿ ಮತ್ತು ಆಯ್ಕೆ ಪ್ರಕ್ರಿಯೆಯು ಜುಲೈ 6 ರಿಂದ ಜುಲೈ 8,2019 ರ ವರೆಗೆ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಲು ಜುಲೈ 9,2019 ಕೊನೆಯ ದಿನವಾಗಿರುತ್ತದೆ.

ಎರಡನೇ ಸುತ್ತಿನ ಸೀಟು ಹಂಚಿಕೆಯ ಪ್ರಕ್ರಿಯೆಯು ಜುಲೈ 10 ಮತ್ತು 11,2019 ರಂದು ನಡೆಯಲಿದ್ದು, ಅದರ ಫಲಿತಾಂಶವು ಜುಲೈ 12,2019 ರಂದು ಹೊರಬೀಳಲಿದೆ.

ನೀಟ್ 2019: ಅರ್ಜಿ ಸಲ್ಲಿಸುವುದು ಹೇಗೆ:

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://medicalcounseling.nic.in/UGCounselling/ ಗೆ ಹೋಗಿ
ಸ್ಟೆಪ್ 2: ನಂತರ "UG medical councelling" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಭ್ಯರ್ಥಿಗಳು "New Registration" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ

ಸ್ಟೆಪ್ 5: ಅರ್ಜಿ ಶುಲ್ಕವನ್ನುಪಾವತಿಸುವ ಮೂಲಕ ಅರ್ಜಿ ಸಲ್ಲಿಸಿ

For Quick Alerts
ALLOW NOTIFICATIONS  
For Daily Alerts

English summary
NEET counselling 2019 registration process ends before 24th june. Candidates can apply soon
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X