ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಪಟ್ಟಿ ಪ್ರಕಟ

Posted By:

ವೈದ್ಯಕೀಯ ಸೀಟುಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ವಿವಿಧ ಕೋಟಾಗಳಡಿ ಸರ್ಕಾರಿ, ಖಾಸಗಿ ಮತ್ತು ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಲಭ್ಯ ಇರುವ ಸೀಟುಗಳ ವಿವರಗಳನ್ನು ಸಹ ಪ್ರಕಟಿಸಲಾಗಿದೆ.

2017-18ನೇ ಸಾಲಿಗೆ ಲಭ್ಯವಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಆಯ್ಕೆ ದಾಖಲು (ಆಪ್ಷನ್‌ ಎಂಟ್ರಿ) ಆರಂಭವಾಗಿದೆ.

ವೈದ್ಯಕೀಯ ಸೀಟುಗಳ ಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಗುರುವಾರ ರಾತ್ರಿವರೆಗೆ 4,866 ವೈದ್ಯಕೀಯ ಸೀಟುಗಳು ಮತ್ತು 1,824 ದಂತ ವೈದ್ಯಕೀಯ ಸೀಟು ವಿವರ ಪ್ರಕಟಿಸಲಾಗಿತ್ತು. ಇದಲ್ಲದೆ, ವಿಶೇಷ ಕೆಟಗೆರಿ ವಿಭಾಗದಡಿ ವೈದ್ಯಕೀಯ, ದಂತ ವೈದ್ಯಕೀಯ ಸೇರಿ 181 ಸೀಟು ಇವೆ.

2017-18ನೇ ಸಾಲಿಗೆ ಒಟ್ಟು 8,445 ಎಂಬಿಬಿಎಸ್‌ ಸೀಟುಗಳು ಮತ್ತು 3,490 ದಂತ ವೈದ್ಯಕೀಯ ಸೀಟುಗಳು ಲಭ್ಯ ಇವೆ. ಬಾಕಿ ಸೀಟುಗಳ ವಿವರವನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲಾತಿ ಪರಿಶೀಲನೆ ಪೂರ್ಣಗೊಂಡ ಕರ್ನಾಟಕದವರು ಮತ್ತು ಕರ್ನಾಟಕೇತರ ಅಭ್ಯರ್ಥಿಗಳ ವಿವರ ಮತ್ತು ರ‍್ಯಾಂಕ್ ಪಟ್ಟಿ ಸಹ ಪ್ರಕಟಿಸಲಾಗಿದೆ.

ಶುಲ್ಕ ವಿವರ

ಸರ್ಕಾರಿ ಕಾಲೇಜುಗಳ ಶುಲ್ಕ ರೂ.16,700 ನಿಗದಿ ಮಾಡಲಾಗಿದೆ. ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ಇಎಸ್‌ಐ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೀಟಿಗೆ ರೂ.1 ಲಕ್ಷ. ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ₹ 77,೦೦೦. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸೀಟುಗಳಿಗೆ ರೂ. 6,32,500 ನಿಗದಿಯಾಗಿದೆ.

ಎನ್‌ಆರ್‌ಐ ಮತ್ತು ಆಡಳಿತ ಮಂಡಳಿ ಕೋಟಾದಡಿ ಕಾಲೇಜುವಾರು ಶುಲ್ಕಗಳು ಹಾಗೂ ಡೀಮ್ಡ್‌ ವಿವಿ ಶುಲ್ಕಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರಾಧಿಕಾರದ ವೆಬ್ಸೈಟ್ ಮೂಲಕ ಸೀಟುಗಳ ವಿವರ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ kea.kar.nic.in ಗಮನಿಸಿ

English summary
NEET-2017 Medical / Dental SEAT MATRIX & OPTION ENTRY begins. Karnataka examination authority has published the seat matrix list on Thursday.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia