NEET PG 2020: ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ..ನ.21 ರೊಳಗೆ ಅರ್ಜಿ ಹಾಕಿ

2020ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಿಗೆ ನಡೆಸುವ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್‌ ಟೆಸ್ಟ್‌(NEET-PG)ಗೆ ಆನ್‌ಲೈನ್‌ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಯು ಅವಕಾಶ ನೀಡಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನ.21 ಕೊನೆಯ ದಿನವಾಗಿರುತ್ತದೆ.

ನೀಟ್ ಪಿಜಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ..ನ.21ರೊಳಗೆ ಅರ್ಜಿ ಹಾಕಿ

ಎನ್ಇಇಟಿ-ಪಿಜಿ ಅನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯಾಗಿ 5ನೇ ಜನವರಿ 2020ರಂದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದೇ ಕಾಲಾವಧಿಯಲ್ಲಿ ನಡೆಸುತ್ತದೆ.

ಎನ್ಇಇಟಿ-ಪಿಜಿ 2020ಕ್ಕೆ ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಆನ್-ಲೈನ್ ಪೋರ್ಟಲ್ ಮೂಲಕ 21ನೇ ನವೆಂಬರ್ 2019ರೊಳಗೆ ಎನ್ಇಇಟಿ-ಪಿಜಿಗೆ ನೋಂದಾಯಿಸಬಹುದು.
ಅಭ್ಯರ್ಥಿಗಳು ಆನ್-ಲೈನ್ ನೋಂದಣಿ ವ್ಯವಸ್ಥೆ ಮೂಲಕ ಮೊದಲು ಬಂದವರಿಗೆ ಆದ್ಯತೆಯ ಆಧಾರದಲ್ಲಿ ಪರೀಕ್ಷೆಯ ನಗರವನ್ನು ಆಯ್ಕೆ ಮಾಡಬಹುದು.

ಪರೀಕ್ಷಾ ಶುಲ್ಕ:

ಸಾಮಾನ್ಯ ಮತ್ತು ಓಬಿಸಿ ಅಭ್ಯರ್ತಿಗಳಿಗೆ ರೂ.3750/-ರೂ
ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.2750/- ರೂ

ಪರೀಕ್ಷಾ ಶುಲ್ಕವನ್ನು ಪೇಮೆಂಟ್ ಗೇಟ್ ವೇ ಮೂಲಕ, ಆನ್-ಲೈನ್ ಅರ್ಜಿ ಸಲ್ಲಿಸುವಾಗ, ಭಾರತದಲ್ಲಿ ಬ್ಯಾಂಕುಗಳಿಂದ ನೀಡಲ್ಪಟ್ಟ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.

ಪ್ರಮುಖ ದಿನಾಂಕಗಳು :

ಅರ್ಜಿಯ ಅನ್-ಲೈನ್ ಸಲ್ಲಿಕೆ: 1-11-2019 ರಿಂದ 21-11-2019 ರವರೆಗೆ
ಪರೀಕ್ಷೆಯ ದಿನಾಂಕ: 05-01-2020
ಫಲಿತಾಂಶ ಘೋಷಣೆಯ ದಿನಾಂಕ : 31-01-2020

ಎನ್ಇಇಟಿ-ಪಿಜಿ ವಿವಿಧ ಎಂ.ಡಿ/ಎಂಎಸ್ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳ 2020 ರ ಪ್ರವೇಶಾಧಿವೇಶನಕ್ಕೆ ಅರ್ಹತೆ ಮತ್ತು ರ್ಯಾಂಕಿಂಗ್ ಗಳ ಏಕೈಕ ಪರೀಕ್ಷೆಯಾಗಿದೆ. ಯಾವುದೇ ರಾಜ್ಯ ಅಥವಾ ಸಂಸ್ಥಾ ಮಟ್ಟದಲ್ಲಿ ಬೇರೆ ಯಾವ ಪ್ರವೇಶ ಪರೀಕ್ಷೆಯು ಎಂಡಿ/ಎಂಎಸ್/ಪಿಜಿ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಅಧಿಕೃತವಲ್ಲ.

ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಪರೀಕ್ಷೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
National Board of Examinations has released NEET PG Application Form 2020 for candidates. Candidates can apply now that the application form of NEET PG 2020 has been made available by NBE.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X