NEET PG 2021 Postponed: ಕನಿಷ್ಟ 4 ತಿಂಗಳವರೆಗೆ ಪರೀಕ್ಷೆ ಮುಂದೂಡಿಕೆ

ನೀಟ್ ಪಿಜಿ 2021 ಪರೀಕ್ಷೆಯನ್ನು 4 ತಿಂಗಳವರೆಗೆ ಮುಂದೂಡಿಕೆ

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್‌ ಟೆಸ್ಟ್‌ (ನೀಟ್) ಪಿಜಿ 2021 ಪರೀಕ್ಷೆಯನ್ನು ಕನಿಷ್ಠ ನಾಲ್ಕು ತಿಂಗಳವರೆಗೆ ಮುಂದೂಡಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಆಗಸ್ಟ್‌ 31 ರವರೆಗೆ ನಡೆಸಲಾಗುವುದಿಲ್ಲ ಎಂದು ಪ್ರಧಾನ ಮಂತ್ರಿ ಕಛೇರಿಯಿಂದ ಬಿಡುಗಡೆ ಮಾಡಲಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೀಟ್ ಪಿಜಿ 2021 ಪರೀಕ್ಷೆಯನ್ನು 4 ತಿಂಗಳವರೆಗೆ ಮುಂದೂಡಿಕೆ

ನೀಟ್ ಪಿಜಿ ಪರೀಕ್ಷೆಯನ್ನು ಪ್ರಸ್ತುತದ ಕೋವಿಡ್‌ ಪ್ರಕರಣಗಳನ್ನು ನಿರ್ವಹಿಸುವ ದೃಷ್ಟಿಯಿಂದ ಮುಂದೂಡಲಾಗಿದೆ. ನಿನ್ನೆಯಷ್ಟೇ ನಡೆದ ಪಿಎಂ ನೇತೃತ್ವದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಡ್ಯೂಡಿಯಲ್ಲಿ ನೆರವಾಗಲು ಇದು ಅನುಕೂಲಕರವಾಗಲಿದೆ. ಕಾರಣ ವೈದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಲು ಕನಿಷ್ಟ 1 ತಿಂಗಳಾದರೂ ಅವಕಾಶ ಬೇಕಿರುತ್ತದೆ. ಹಾಗಾಗಿ ಇದರಿಂದ ಕೋವಿಡ್ ಡ್ಯೂಟಿ ನಿರ್ವಹಿಸಲು ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಲಭ್ಯವಾಗಲಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಮುಖವಾಗಿ ಯಾವ ವೈದ್ಯಕೀಯ ವಿದ್ಯಾರ್ಥಿಗಳು 100 ದಿನಗಳ ಕೋವಿಡ್ ಡ್ಯೂಟಿಯನ್ನು ಮುಗಿಸಲಿದ್ದಾರೋ ಅಂತಹ ಅಭ್ಯರ್ಥಿಗಳಿಗೆ ಮುಂಬರುವ ಸರ್ಕಾರಿ ನೇಮಕಾತಿಯಲ್ಲಿ ಮೊದಲ ಆಧ್ಯತೆಯನ್ನು ನೀಡಲಾಗುತ್ತದೆ. ಅಲ್ಲದೆ ಇನ್ಸುರೆನ್ಸ್‌ ಸ್ಕೀಮ್‌ ಸಹ ಅವರಿಗೆ ಅಪ್ಲೈ ಆಗಲಿದೆ. ಈ ಎಲ್ಲ ಮೆಡಿಕಲ್ ಪ್ರೊಫೇಶನಲ್‌ಗಳಿಗೆ ಲಸಿಕೆ ನೀಡಲಾಗುತ್ತದೆ. ಅಲ್ಲದೇ ಎಲ್ಲರಿಗೂ ಅಗತ್ಯ ಸೌಕರ್ಯ ಮತ್ತು ಸುರಕ್ಷತೆಯನ್ನು ಒದಗಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

For Quick Alerts
ALLOW NOTIFICATIONS  
For Daily Alerts

English summary
The national eligibility entrance test postgraduate 2021 has been postponed for atleast 4 months and it will not be held before august 31.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X