NEET PG Counselling : ನೀಟ್ ಪಿಜಿ ಕೌನ್ಸೆಲಿಂಗ್ ನೊಂದಣಿ ಪ್ರಕ್ರಿಯೆ ಆರಂಭ

NEET PG ಕೌನ್ಸೆಲಿಂಗ್ ಪ್ರಕ್ರಿಯೆ : ವೈದ್ಯಕೀಯ ಸಮಾಲೋಚನೆ ಸಮಿತಿಯು NEET PG ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಸೆ.೨೦ರಿಂದ ಪ್ರಾರಂಭಿಸಿದೆ. AIQ ಅಥವಾ ರಾಜ್ಯ-ಆಧಾರಿತ ಕೋಟಾದಲ್ಲಿ ಪ್ರವೇಶ ಪಡೆಯಲು ಆಯ್ಕೆ ಮಾಡುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ mcc.nic ನಲ್ಲಿ ಕೌನ್ಸೆಲಿಂಗ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸೆಪ್ಟೆಂಬರ್ 23, 2022ರೊಳಗೆ ನೊಂದಣಿ ಮಾಡಿಕೊಳ್ಳಬಹುದು.

ನೀಟ್ ಪಿಜಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ನೊಂದಣಿ ಪ್ರಕ್ರಿಯೆ ಆರಂಭ

ಕೌನ್ಸೆಲಿಂಗ್ ಪ್ರಕ್ರಿಯೆ ಮೂಲಕ ಸುಮಾರು 26,168 ಡಾಕ್ಟರ್ ಆಫ್ ಮೆಡಿಸಿನ್ (MD), 13,649 ಮಾಸ್ಟರ್ ಆಫ್ ಸರ್ಜರಿ (MS), 1,338 DNB CET ಮತ್ತು 922 PG ಡಿಪ್ಲೋಮಾ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ವರದಿಗಳು ಸೂಚಿಸುತ್ತಿವೆ.

NEET PG ಕೌನ್ಸೆಲಿಂಗ್‌ಗಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 23,2022. NEET PG ಯ ಫಲಿತಾಂಶವನ್ನು ಸೆಪ್ಟೆಂಬರ್ 28, 2022 ರಂದು ಬಿಡುಗಡೆ ಮಾಡಲಾಗುತ್ತದೆ. ಯಶಸ್ವಿ ಅಭ್ಯರ್ಥಿಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 04,2022 ರವರೆಗೆ ಸಂಬಂಧಿತ ಸಂಸ್ಥೆಗೆ ವರದಿ ಮಾಡಿಕೊಳ್ಳಬೇಕಿರುತ್ತದೆ.

ನೀಟ್ ಪಿಜಿ ಕೌನ್ಸೆಲಿಂಗ್ ನೋಂದಣಿ ಶುಲ್ಕ :

ನೀಟ್ ಪಿಜಿ ಕೌನ್ಸೆಲಿಂಗ್ ಫಾರ್ಮ್ ಅನ್ನು ಭರ್ತಿ ಮಾಡುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ಶುಲ್ಕವನ್ನು ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ. ಅರ್ಜಿ ಶುಲ್ಕದ ವಿವರ ಕೆಳಗಿನಂತಿವೆ.
AIQ (ಅಖಿಲ ಭಾರತ ಕೋಟಾ) ಅಭ್ಯರ್ಥಿಗಳು- 1000/-ರೂ
SC/ ST/ OBC/ PwD ವರ್ಗದ ಅಭ್ಯರ್ಥಿಗಳು- 500/-ರೂ
ಡೀಮ್ಡ್ ವಿಶ್ವವಿದ್ಯಾಲಯದ ಅಭ್ಯರ್ಥಿಗಳು- 5000/-ರೂ

NEET PG ಕೌನ್ಸೆಲಿಂಗ್ ನೋಂದಣಿ ಅರ್ಜಿಯನ್ನು ಭರ್ತಿ ಮಾಡುವುದು ಹೇಗೆ? :

ಹಂತ 1: MCC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಅಲ್ಲಿ ಕೇಳಿದ ವಿವರಗಳೊಂದಿಗೆ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು NEET PG ಕೌನ್ಸೆಲಿಂಗ್ ರುಜುವಾತುಗಳನ್ನು ಗಮನಿಸಿ.
ಹಂತ 3: ಕೌನ್ಸೆಲಿಂಗ್‌ಗಾಗಿ ಸೂಚಿಸಲಾದ ವರ್ಗವಾರು ಅರ್ಜಿ ಶುಲ್ಕದ ನಂತರ ಭದ್ರತಾ ಠೇವಣಿ ಪಾವತಿಸಿ.
ಹಂತ 4: ಮುಂದೆ ರಚಿಸಿದ ರುಜುವಾತುಗಳೊಂದಿಗೆ ಲಾಗ್ ಇನ್ ಮಾಡಿ, ಕೋರ್ಸ್ ಮತ್ತು ಕಾಲೇಜು ಆದ್ಯತೆಯನ್ನು ಆಯ್ಕೆಮಾಡಿ.
ಹಂತ 5: ನೀಟ್ ಪಿಜಿ ಕೌನ್ಸೆಲಿಂಗ್‌ಗಾಗಿ ಆಯ್ಕೆಯ ಭರ್ತಿಯನ್ನು ಸಲ್ಲಿಸಿ ಮತ್ತು ಡ್ಯಾಶ್‌ಬೋರ್ಡ್‌ನಿಂದ ಲಾಗ್ ಔಟ್ ಮಾಡಿ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೇರವಾಗಿ ನೊಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
NEET PG counselling process begins from september 20. Here is how to register for the counselling process.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X