ನೀಟ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭ: ಅರ್ಜಿ ಸಲ್ಲಿಕೆಗೆ ಏನೆಲ್ಲಾ ದಾಖಲೆಗಳು ಬೇಕು ಗೊತ್ತಾ?

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೀಗ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಂಸ್ ಟೆಸ್ಟ್ ನ ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ನೀಟ್ ಪರೀಕ್ಷೆ ಪಾಸಾಗುವ ಅಭ್ಯರ್ಥಿಗಳು ಎಂಬಿಬಿಎಸ್/ ಬಿಡಿಎಸ್ ಕೋರ್ಸ್ ಗೆ ಸೀಟು ಪಡೆಯುವರ

By Nishmitha Bekal

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೀಗ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಂಸ್ ಟೆಸ್ಟ್ ನ ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ನೀಟ್ ಪರೀಕ್ಷೆ ಪಾಸಾಗುವ ಅಭ್ಯರ್ಥಿಗಳು ಎಂಬಿಬಿಎಸ್/ ಬಿಡಿಎಸ್ ಕೋರ್ಸ್ ಗೆ ಸೀಟು ಪಡೆಯುವರು. ಇನ್ನು ಈ ಪರೀಕ್ಷೆಯು 11 ಭಾಷೆಗಳಲ್ಲಿ ನಡೆಯಲಿದ್ದು, ಅವುಗಳು ಹೀಗಿವೆ. ಇಂಗ್ಲೀಷ್, ಹಿಂದಿ, ಅಸ್ಸಾಂ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು.

ನೀಟ್ ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭ: ಅರ್ಜಿ ಸಲ್ಲಿಕೆಗೆ ಏನೆಲ್ಲಾ ದಾಖಲೆಗಳು ಬೇಕು ಗೊತ್ತಾ?

2018 ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ 13 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು, ಇನ್ನು ಈ ವರ್ಷ 2019ರಲ್ಲೂ ಸುಮಾರು ಅಷ್ಟೇ ಮಂದಿ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗೂ ಈ ಪರೀಕ್ಷೆಯು ಪೆನ್ -ಪೇಪರ್ ಮಾದರಿಯಲ್ಲಿ ನಡೆಯಲಿದೆ.

ನೀಟ್ ಪರೀಕ್ಷೆಯ ರಿಜಿಸ್ಟ್ರೇಶನ್ ಪ್ರಕ್ರಿಯೆಯು ನವಂಬರ್ 30, 2018 ರಂದು ಕೊನೆಗೊಳ್ಳಲಿದೆ. ಎಪ್ರಿಲ್ 15, 2019 ರಂದು ಪ್ರವೇಶ ಪತ್ರ ದೊರೆಯಲಿದ್ದು, ಮೇ 5 ರಂದು ಪರೀಕ್ಷೆ ನಡೆಯಲಿದೆ.

ನೀಟ್ 2019: ಅರ್ಹತೆಗಳು

  • ನೀಟ್ ಪರೀಕ್ಷೆಯ ಬರೆಯಲಿರುವ ಅಭ್ಯರ್ಥಿಗಳಿಗೆ ಕನಿಷ್ಟ 17 ವರ್ಷ ಹಾಗೂ ಗರಿಷ್ಟ 25 ವರ್ಷ ಆಗಿರಬೇಕು
  • ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು
  • ಫಿಸಿಕ್ಸ್, ಕೆಮೆಸ್ಟ್ರಿ, ಬಯಾಲಾಜಿ, ಬಯೋ ಟೆಕ್ನಾಲಾಜಿ, ಮ್ಯಾಥಮ್ಯಾಟಿಕ್ಸ್ ಹಾಗೂ ಇಂಗ್ಲೀಷ್ ಸಬ್‌ಜೆಕ್ಟ್ ನಲ್ಲಿ 12ನೇ ತರಗತಿ ಪಾಸುಮಾಡಿರಬೇಕು
  • 12ನೇ ತರಗತಿಯಲ್ಲಿ ಶೇ 50 ರಷ್ಟು ಅಂಕ ಸ್ಕೋರ್ ಮಾಡಿರಬೇಕು, ಮೀಸಲಾತಿ ವರ್ಗದವರು ಶೇ.40 ಅಂಕ ಸ್ಕೋರ್ ಮಾಡಿರಬೇಕು

ನೀಟ್ 2019 ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ : ನವಂಬರ್ 1 ರಿಂದ ನವಂಬರ್ 30, 2018
  • ಪ್ರವೇಶ ಪತ್ರ ಡೌನ್‌ಲೋಡ್ : ಎಪ್ರಿಲ್ 15, 2019
  • ಪರೀಕ್ಷೆ ದಿನಾಂಕ: ಮೇ 5, 2019
  • ಫಲಿತಾಂಶ ದಿನಾಂಕ : ಜೂನ್ 5, 2019

ಅರ್ಜಿ ಸಲ್ಲಿಕೆಗೆ ಬೇಕಾಗಿರುವ ಪ್ರಮಾಣ ಪತ್ರಗಳು:

  • 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ ಅಂಕಪಟ್ಟಿ
  • ಪಾಸ್‌ಪೋರ್ಟ್ ಸೈಜ್ ಫೋಟೋಗ್ರಾಫಿ ಸ್ಕ್ಯಾನ್ ಕಾಪಿ
  • ಸಹಿಯ ಸ್ಕ್ಯಾನ್ ಕಾಪಿ
  • ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಪ್ರತಿ
For Quick Alerts
ALLOW NOTIFICATIONS  
For Daily Alerts

English summary
National Testing Agency, the conducting body of the National Eligibility cum Entrance Test (NEET), will kick-start the registrations for the exam on November 1. Candidates who are aiming to become a doctor can start registration for the exam through NTA's official website until November 30, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X