NEET Result 2020 Date: ನೀಟ್ ಪರೀಕ್ಷೆ ಫಲಿತಾಂಶ ಅ.16ಕ್ಕೆ ಪ್ರಕಟ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನೀಟ್ ಯುಜಿ 2020ರ ಫಲಿತಾಂಶವನ್ನು ಅಕ್ಟೋಬರ್ 16ರಂದು ಪ್ರಕಟಿಸುವಂತೆ ಸುಪ್ರೀಂ ಆದೇಶ ಹೊರಡಿಸಿದೆ. ರಾಷ್ಟ್ರದಾದ್ಯಂತ ಕೋವಿಡ್ ಸಮಸ್ಯೆಯಿಂದಾಗಿ ಕಂಟೈನ್ಮೆಂಟ್ ಜೋನ್ ನಲ್ಲಿ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯದ ಹಿನ್ನೆಲೆಯಲ್ಲಿ ಅವರಿಗಾಗಿ ಅಕ್ಟೋಬರ್ 14,2020ರಂದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನೀಟ್ ಪರೀಕ್ಷಾ ಫಲಿತಾಂಶ ಅ.16ಕ್ಕೆ ರಿಲೀಸ್

ಎನ್‌ಟಿಎ ನೀಟ್ ಪರೀಕ್ಷೆಯನ್ನು ಹಲವು ಸುರಕ್ಷತಾ ಕ್ರಮಗಳೊಂದಿಗೆ ಸೆಪ್ಟೆಂಬರ್ 13ರಂದು ನಡೆಸಿತ್ತು. ಈ ಪರೀಕ್ಷೆಗೆ 15.97 ಲಕ್ಷ ವಿದ್ಯಾರ್ಥಿಗಳು ರಿಜಿಸ್ಟ್ರೇಶನ್ ಮಾಡಿಕೊಂಡಿದ್ದರ ಪೈಕಿ ಶೇ.85.90ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಕೋವಿಡ್ ಸೋಂಕು ಇರುವ ಮತ್ತು ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವಂಚಿತರಾಗಿದ್ದರು. ಹಾಗಾಗಿ ಅವರಿಗೆ ಅಕ್ಟೋಬರ್ 14ರಂದು ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಗಿದೆ.

ನೀಟ್ ಪರೀಕ್ಷಾ ಫಲಿತಾಂಶ ಅ.16ಕ್ಕೆ ರಿಲೀಸ್

ನೀಟ್ ಫಲಿತಾಂಶ ವೀಕ್ಷಿಸುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://nta.ac.in/ ಗೆ ಭೇಟಿ ಕೊಡಿ
ಸ್ಟೆಪ್ 2: ನಂತರ "NEET UG Result 2020" ಎಂಬುದರ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ಅಭ್ಯರ್ಥಿಗಳು ನಿಮ್ಮ ಅಪ್ಲಿಕೇಷನ್ ನಂಬರ್, ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕ ಸೇರಿದಂತೆ ಪ್ರಮುಖ ಅಂಶಗಳನ್ನು ದಾಖಲಿಸಿ.
ಸ್ಟೆಪ್ 4: ನಿಮ್ಮ ಸ್ಕ್ರೀನ್ ಮೇಲೆ ಬರುವ ಫಲಿತಾಂಶವನ್ನು ವೀಕ್ಷಿಸಿ, ಸೇವ್ ಮಾಡಿಕೊಳ್ಳಿ ಹಾಗೂ ಪ್ರಿಂಟ್ ಔಟ್ ತೆಗೆದುಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
nta neet ug 2020 result will release on october 16. Special exam to be held on Oct 14.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X