ನವೆಂಬರ್ 5 ರಂದು ಯಾವ ಪರೀಕ್ಷೆ ಬರೆಯುವುದು?

Posted By:

ಸಿಬಿಎಸ್ಇ ನಡೆಸುವ ರಾಷ್ಟ್ರೀಯ ಅರ್ಹತಾ (ಎನ್ಇಟಿ) ಪರೀಕ್ಷೆ ಮತ್ತು ರಾಜ್ಯ ಸರ್ಕಾರದ ಶಿಕ್ಷಕರ ನೇಮಕ ಪರೀಕ್ಷೆ ಒಂದೇ ದಿನ ನಿಗದಿಯಾಗಿದ್ದು, ವಿದ್ಯಾರ್ಥಿಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ್ಲಕ್ಕೀಡಾಗಿದ್ದಾರೆ.

ನವೆಂಬರ್ 5 ರಂದು ಈ ಎರಡೂ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ರಾಜ್ಯದ ಸಾವಿರಾರು ಅಭ್ಯರ್ಥಿಗಳು ಈ ಎರಡೂ ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಈಗ ಪರೀಕ್ಷೆಗೆ ಒಂದೇ ದಿನಾಂಕ ಬಂದಿರುವುದರಿಂದ ಯಾವುದನ್ನು ಬರೆಯಬೇಕು ಎಂದು ಚಿಂತಿಸುತ್ತಿದ್ದಾರೆ.

ಒಂದೇ ದಿನ ಎರಡು ಪರೀಕ್ಷೆ

ರಾಜ್ಯ ಸರ್ಕಾರ 6 ಮತ್ತು 8 ನೇ ತರಗತಿಗೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಇತ್ತೀಚೆಗಷ್ಟೇ ಅರ್ಜಿ ಆಹ್ವಾನಿಸಿತ್ತು. ಪದವೀಧರರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ ಮುಗಿಸಿರುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಎನ್ಇಟಿ ಬರೆದು ಪದವಿ ಕಾಲೇಜುಗಳಲ್ಲಿ ಉಪಸ್ಯಾಸಕರಾಗಬೇಕೆಂಬ ಕನಸನ್ನು ಹೊತ್ತಿರುವ ಸ್ನಾತಕೋತ್ತರ ಪದವೀಧರರು ಉಪನ್ಯಾಸಕರಾಗಬೇಕೋ ಅಥವಾ ಪ್ರಾಥಮಿಕ ಶಾಲಾ ಶಿಕ್ಷಕರಾಗಬೇಕೋ ಎಂದು ತಮ್ಮಲ್ಲಿಯೇ ಚಿಂತಿಸುತ್ತಿದ್ದಾರೆ.

ಎರಡೂ ಪರೀಕ್ಷೆಗಳು ಕೂಡ ಜೀವನವನ್ನೇ ಬದಲಿಸುವಂತದ್ದು, ಹಾಗಾಗಿ ಎರಡೂ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಭ್ಯರ್ಥಿಗಳಿಗೆ ಈಗ ದಿಕ್ಕು ತೋಚದಂತಾಗಿದೆ.

ಎನ್ಇಟಿ ಪರೀಕ್ಷೆಯು ದೇಶಾದ್ಯಂತ ನಡೆಯಲಿದ್ದು ಅದರ ದಿನಾಂಕ ಬದಲಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಶಿಕ್ಷಕರ ನೇಮಕಾತಿ ಪರೀಕ್ಷೆ ದಿನಾಂಕವನ್ನು ಬದಲಿಸಬಹುದು. ರಾಜ್ಯ ಸರ್ಕಾರ ಈ ಬಗ್ಗೆ ಪರಿಶೀಲಿಸಿ ಪರೀಕ್ಷಾರ್ಥಿಗಳಿಗೆ ಅನಕೂಲ ಕಲ್ಪಿಸಬೇಕು ಎಂದು ಪರೀಕ್ಷಾರ್ಥಿಗಳು ಹೇಳಿದ್ದಾರೆ.

ಅಲ್ಲದೇ ಎನ್ಇಟಿ ಪರೀಕ್ಷೆ ವರ್ಷಕ್ಕೆ ಎರಡು ಬಾರಿ ನಡೆಯುವುದರಿಂದ ಅದನ್ನು ಮುಂದಿನ ಬಾರಿಯು ಬರೆಯಬಹುದು, ಆದರೆ ಉದ್ಯೋಗಾವಕಾಶ ಹೆಚ್ಚಾಗಿ ಇರುವುದು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಹಾಗಾಗಿ ಎನ್ಇಟಿ ಬರೆಯದಿದ್ದರು ನಡೆಯುತ್ತದೆ ಎನ್ನುವುದು ಕೆಲವರ ಮಾತು.

ಇನ್ನು ಈ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತ ಪ್ರೌಢಶಿಕ್ಷಣ ಸಚಿವರು " ಎನ್ಇಟಿ ಮತ್ತು ಶಿಕ್ಷಕರ ನೇಮಕಾತಿ ಪರೀಕ್ಷೆ ಎರಡೂ ಒಂದೇ ದಿನ ಇರುವುದನ್ನು ಗಮನಿಸಿದ್ದೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಮುಂದೂಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

English summary
The CBSE-run National Eligibility Test (NET) examination and the state government's teachers' examination is scheduled for the same day and students are confused about what to choose

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia