ಪಿಎಚ್.ಡಿ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದ ಯುಜಿಸಿ

Posted By:

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪಿಎಚ್.ಡಿ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಸಂಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದು, ಸುಲಭವಾಗಿ ಪಿಎಚ್.ಡಿ ಪೂರ್ಣಗಳಿಸಬಹುದು ಎಂದು ಭಾವಿಸಿದ್ದವರಿಗೆ ಬಿಸಿ ಮುಟ್ಟಿಸಿದೆ.

ವಿದ್ಯಾರ್ಥಿಗಳು ಹಿಂದಿನ ಹಾಗೆ ಸುಲಭವಾಗಿ ಪಿಎಚ್.ಡಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಶೈಕ್ಷಣಿಕವಾಗಿ ಅತ್ಯುನ್ನತ ಪದವಿಯಾಗಿರುವ ಪಿಎಚ್.ಡಿ ಪಡೆಯುವ ಮುನ್ನ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಅಥವಾ ಎಸ್ಎಲ್ಇಟಿ/ಎಸ್ಇಟಿ ಪೂರ್ಣಗೊಳಿಸುವುದು ಕಡ್ಡಾಯ ಎಂದು ಯುಜಿಸಿ ಹೇಳಿದೆ.

ಹೊಸ ನಿಯಮದ ಪ್ರಕಾರ 'ಕೆಟಗರಿ-III' ಕ್ಕೆ ಸೇರುವ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಪದವಿ ಪಡೆಯಬೇಕೆಂದರೆ ಎನ್ಇಟಿ/ಎಸ್ಎಲ್ಇಟಿ ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು ಎಂದು ಯುಜಿಸಿ ಹೇಳಿದೆ.

ಈಗ ಪಿಎಚ್.ಡಿ ಸುಲಭವಲ್ಲ

ನ್ಯಾಕ್ ಸಮಿತಿಯಿಂದ 3.5 ಕ್ಕೂ ಹೆಚ್ಚು ಅಂಕಗಳಿಸಿದ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು 'ಕೆಟಗರಿ-I'ಸೇರುತ್ತವೆ. 3.0 ರಿಂದ 3.49 ಅಂಕಗಳಿಸಿರುವ ವಿಶ್ವವಿದ್ಯಾಲಯಗಳು 'ಕೆಟಗರಿ-II' ಕ್ಕೆ ಸೇರುತ್ತವೆ. ಮೂರಕ್ಕಿಂತ ಕಡಿಮಿ ಅಂಕ ಪಡೆದ ವಿವಿಗಳು 'ಕೆಟಗರಿ-III'ಗೆ ಸೇರಲ್ಪಡುತ್ತವೆ.

ಈ ಹಿಂದೆ ಪಿಎಚ್.ಡಿ ನೋಂದಣಿ ಮಾಡಿಸಲು ವಿಶ್ವವಿದ್ಯಾಲಯಗಳು ನೀಡುವ ಪ್ರವೇಶ ಪರೀಕ್ಷೆ ಬರೆದರೆ ಸಾಕಾಗಿತ್ತು. ವಿ.ವಿ. ನಿಗದಿಪಡಿಸಿದಷ್ಟು ಅಂಕವನ್ನು ಪಡೆದು, ಆ ನಂತರ ಕಲೋಕ್ವಿಯಮ್ (ಅರ್ಹ ಪ್ರೊಫೆಸರ್‌ಗಳನ್ನು ಒಳಗೊಂಡ ತಂಡ) ಎದುರು ಸಂಶೋಧನಾ ವಿಷಯದ ಸಾರಾಂಶವನ್ನು (ಸಿನಾಪ್ಸಿಸ್) ಮಂಡಿಸಿ ಕೋರ್ಸ್ ವರ್ಕ್ ನಲ್ಲಿ ಭಾಗವಹಿಸಿ ನಂತರ ಪಿಎಚ್.ಡಿ ಪೂರ್ಣಗೊಳಿಸಬೇಕಿತ್ತು.

ರಾಷ್ಟ್ರೀಯ ಮಾನ್ಯತಾ ಪರೀಕ್ಷೆ (ಎನ್‌ಇಟಿ), ರಾಜ್ಯ ಮಾನ್ಯತಾ ಪರೀಕ್ಷೆ (ಎಸ್‌ಎಲ್‌ಇಟಿ) ಮತ್ತು ಎಂ.ಫಿಲ್ ಪೂರೈಸಿದವರಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಇದ್ದು ಅವರು ನೇರವಾಗಿ ನೋಂದಣಿ ಮಾಡಿಸಬಹುದಾಗಿತ್ತು. ಆದರೆ ಈಗ ಎನ್ಇಟಿ ಮತ್ತು ಎಸ್ಎಲ್ಇಟಿ ಕಡ್ಡಾಯ ಎಂದು ಘೋಷಿಸಿದೆ.

ಎನ್‌ಇಟಿ/ಎಸ್‌ಎಲ್‌ಇಟಿ

ಸರ್ಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತಾ ಪರೀಕ್ಷೆ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ತೇರ್ಗಡೆಯಾಗಿರಬೇಕು. ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮೂಲಕ ವರ್ಷಕ್ಕೆ ಎರಡು ಬಾರಿ ಎನ್‌ಇಟಿ ನಡೆಯುತ್ತದೆ. ಅಲ್ಲದೆ ಕೆಲ ರಾಜ್ಯಗಳು ವರ್ಷ, ಎರಡು ವರ್ಷಕ್ಕೊಮ್ಮೆ ಎಸ್‌ಎಲ್‌ಇಟಿ (ಸ್ಲೆಟ್‌) ನಡೆಸುತ್ತವೆ. ಆರು ತಿಂಗಳಿಗೊಮ್ಮೆ ನಡೆಯುವ ಎನ್‌ಇಟಿಯನ್ನು ದೇಶದಾದ್ಯಂತ ಸರಾಸರಿ 7 ಲಕ್ಷ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಸ್ಲೆಟ್‌ ಪರೀಕ್ಷೆಗೂ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ.

English summary
According to the new draft regulations by University Grants Commission (UGC), institutions which come under "Category III", would enroll only those candidates who have qualified the NET or SLET or SET examinations for their Ph.D. courses only.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia