National Education Policy 2020 Highlights: ಹೊಸ ಶಿಕ್ಷಣ ನೀತಿಯಲ್ಲಿರುವ ಪ್ರಮುಖಾಂಶಗಳು

ಸುಮಾರು 34 ವರ್ಷಗಳ ಬಳಿಕ ಇನ್ನು ಮುಂದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಭಾರತದಲ್ಲಿ ಜಾರಿಯಾಗಲಿದೆ. ಈಗ ಇರುವ 10+2 ಶಿಕ್ಷಣ ವ್ಯವಸ್ಥೆ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ.

ನೂತನ ಶಿಕ್ಷಣ ನೀತಿಯಲ್ಲಿ ಏನಿದೆ ? ಇಲ್ಲಿದೆ ಹೈಲೈಟ್ಸ್

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್‌ಇಪಿಗೆ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಹೊಸ ನೀತಿಯ ವಿವರಗಳನ್ನು ನೀಡಿದರು. 2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. ಹಾಗಾದ್ರೆ ನೂತನ ಶಿಕ್ಷಣ ನೀತಿಯಲ್ಲಿ ಏನೇನಿದೆ ತಿಳಿಯಲು ಮುಂದೆ ಓದಿ.

ನೂತನ ಶಿಕ್ಷಣ ನೀತಿಯಲ್ಲಿರುವ ಪ್ರಮುಖಾಂಶಗಳು:

  • ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಇದರರ್ಥ ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ ನಾಲ್ಕು ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ. ಶಾಲೆಗಳು ಶಾಲೆಗಳು ಕಲೆ, ವಾಣಿಜ್ಯ, ವಿಜ್ಞಾನದ ಹೊಳೆಗಳ ಯಾವುದೇ ಕಟ್ಟುನಿಟ್ಟಿನ ರಚನೆಯನ್ನು ಹೊಂದಿರುವುದಿಲ್ಲ, ವಿದ್ಯಾರ್ಥಿಗಳು ತಾವು ಬಯಸುವ ಯಾವುದೇ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.
  • ವಿದ್ಯಾರ್ಥಿಗಳಿಗೆ 5ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು.
  • ವಿದ್ಯಾರ್ಥಿಗಳಿಗೆ 6ನೇ ತರಗತಿಯಿಂದಲೇ ಕೋಡಿಂಗ್‌ ಪಾಠವನ್ನು ಹೇಳಿಕೊಡಬೇಕು.
  • ಸಂಶೋಧನೆ ಸಂಬಂಧ ಇನ್ನು ಮುಂದೆ ಯಾವುದೇ ಎಂಪಿಎಲ್‌ ಇರುವುದಿಲ್ಲ.
  • ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಲಾಗಿದೆ.
  • ಬೋರ್ಡ್ ಪರೀಕ್ಷೆಗಳ ಮಹತ್ವ ಕಡಿಮೆ ಮಾಡುವುದು, ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು.
  • ಮಾರ್ಕ್ಸ್ ಕಾರ್ಡ್‌ಗಳು ಕೇವಲ ಅಂಕಗಳು ಮತ್ತು ಹೇಳಿಕೆಗಳಿಗೆ ಬದಲಾಗಿ ಕೌಶಲ್ಯ ಮತ್ತು ಸಾಮರ್ಥ್ಯಗಳ ಕುರಿತು ಸಮಗ್ರ ವರದಿ ನೀಡುವುದು.
  • ಪ್ರತಿ ವಿದ್ಯಾರ್ಥಿ ಒಂದು ಕೌಶಲ್ಯವನ್ನು ಕಲಿಯಲೇಬೇಕು.
  • ವಯಸ್ಕರಿಗೆ ಆ್ಯಪ್ ,ಆನ್ ಲೈನ್, ಟಿವಿ , ಆನ್ ಲೈನ್ ಬುಕ್ ಗಳ ಮೂಲಕ ಕಲಿಕೆಗೆ ಅವಕಾಶ ನೀಡುವುದು.
  • ಪ್ರಾದೇಶಿಕ ಭಾಷೆಗಳಲ್ಲಿ ಇ- ಕಂಟೆಂಟ್ ಪೂರೈಕೆ ಮಾಡುವುದು.
  • ಮಧ್ಯದಲ್ಲಿ ಕೋರ್ಸ್ ಬಿಡಲು ಬಯಸುವರಿಗೆ ಪ್ರವೇಶ ಮತ್ತು ನಿರ್ಗಮನ ಆಯ್ಕೆ ನೀಡಿದೆ.
  • ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕರೂಪದ ಪರೀಕ್ಷೆ ನಡೆಸಲಾಗುವುದು.
  • ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸರ್ಕಾರದಿಂದಲೇ ಶುಲ್ಕ ನಿಗದಿ ಮಾಡಲಾಗುವುದು.
For Quick Alerts
ALLOW NOTIFICATIONS  
For Daily Alerts

English summary
Here we are giving highligjts of new national education policy.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X