New Wage Code : ನೂತನ ವೇತನ ಸಂಹಿತೆ ಅಕ್ಟೋಬರ್ ನಿಂದ ಜಾರಿ, ಏನೆಲ್ಲಾ ಬದಲಾವಣೆಗಳಾಗಲಿವೆ ಇಲ್ಲಿದೆ ಮಾಹಿತಿ

ಅಕ್ಟೋಬರ್‌ ತಿಂಗಳಿನಿಂದ ಹೊಸ ವೇತನ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದ್ದು, ಸರ್ಕಾರಿ ನೌಕರರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ.

ಈ ಮೊದಲು ಹೊಸ ವೇತನ ಸಂಹಿತೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಬೇಕಿತ್ತು, ಆದರೆ ರಾಜ್ಯ ಸರ್ಕಾರಗಳಿಂದ ಕರಡು ನಿಯಮಗಳನ್ನು ಸ್ವೀಕರಿಸದ ಕಾರಣ ಅದನ್ನು ತಡೆಹಿಡಿಯಲಾಯಿತು. ಈಗ ಹೊಸ ವೇತನ ಸಂಹಿತೆಯು ಅಕ್ಟೋಬರ್‌ನಲ್ಲಿ ಜಾರಿಗೆ ಬರಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಅಕ್ಟೋಬರ್ ವೇಳೆಗೆ ಎಲ್ಲಾ ರಾಜ್ಯಗಳು ಕರಡು ನಿಯಮಗಳನ್ನು ಸಿದ್ಧಪಡಿಸುತ್ತವೆ ಎಂದು ವರದಿಯಾಗಿದೆ. ಈ ಹೊಸ ನಿಯಮದಡಿಯಲ್ಲಿ ನೌಕರರ ರಜಾದಿನಗಳು, ಸಂಬಳ, ಪಿಎಫ್, ಕೆಲಸದ ಸಮಯ ಮತ್ತು ಗ್ರ್ಯಾಚುಯಿಟಿಯಲ್ಲಿ ಏನೆಲ್ಲಾ ಹೊಸ ಬದಲಾವಣೆಗಳಾಗಲಿವೆ ಎಂಬ ಮಾಹಿತಿ ಇಲ್ಲಿದೆ.

ಕೆಲಸದ ಸಮಯ ಮತ್ತು ವಾರಾಂತ್ಯದ ರಜೆ :

ಕೆಲಸದ ಸಮಯ ಮತ್ತು ವಾರಾಂತ್ಯದ ರಜೆ :

ಹೊಸ ವೇತನ ಸಂಹಿತೆಯು ನೌಕರರ ಕೆಲಸದ ಸಮಯವನ್ನು 9 ರಿಂದ 12 ಕ್ಕೆ ಹೆಚ್ಚಿಸುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ವಾರದಲ್ಲಿ 48 ಗಂಟೆಗಳ ಕೆಲಸದ ನಿಯಮ ಜಾರಿಗೆ ಬರಲಿದೆ. ಕೆಲವು ಒಕ್ಕೂಟಗಳು 12 ಗಂಟೆಗಳ ಕೆಲಸ ಮತ್ತು ಮೂರು ದಿನಗಳ ರಜೆ ನಿಯಮವನ್ನು ಕುರಿತು ಪ್ರಶ್ನಿಸಿವೆ. ವಾರದಲ್ಲಿ ಕೇವಲ 48 ಗಂಟೆಗಳ ಕಾಲ ಕೆಲಸ ಇರುತ್ತದೆ ಯಾರಾದರೂ ದಿನಕ್ಕೆ 8 ಗಂಟೆ ಕೆಲಸ ಮಾಡಿದರೆ, ಅವರು ವಾರದಲ್ಲಿ 6 ದಿನ ಕೆಲಸ ಮಾಡಬೇಕಾಗುತ್ತದೆ ಮತ್ತು ಒಂದು ದಿನ ರಜೆ ಪಡೆಯಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. ಯಾರಾದರೂ ದಿನಕ್ಕೆ 12 ಗಂಟೆ ಕೆಲಸ ಮಾಡಿದರೆ, ಅವರಿಗೆ ಮೂರು ದಿನಗಳ ರಜೆ ಸಿಗುತ್ತದೆ.

ಹೊಸ ವೇತನ ಸಂಹಿತೆಯಲ್ಲಿ ಬಹಳಷ್ಟು ಬದಲಾವಣೆ :

ಹೊಸ ವೇತನ ಸಂಹಿತೆಯಲ್ಲಿ ಬಹಳಷ್ಟು ಬದಲಾವಣೆ :

ಹೊಸ ವೇತನ ಸಂಹಿತೆಯಲ್ಲಿ ಇಂತಹ ಅನೇಕ ನಿಬಂಧನೆಗಳನ್ನು ನೀಡಲಾಗಿದ್ದು, ಇದು ಕಚೇರಿಯಲ್ಲಿ ಕೆಲಸ ಮಾಡಿ ಸಂಬಳ ಪಡೆಯುವ ವರ್ಗದವರಿಗೆ, ಕಂಪನಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ಪರಿಣಾಮ ಬೀರುತ್ತದೆ. ನೌಕರರ ಸಂಬಳದಿಂದ ಅವರ ರಜಾದಿನಗಳು ಮತ್ತು ಕೆಲಸದ ಸಮಯವೂ ಬದಲಾಗಲಿದೆ.

ಸಂಬಳದ ರಚನೆಯಲ್ಲಿ ಬದಲಾವಣೆ :
 

ಸಂಬಳದ ರಚನೆಯಲ್ಲಿ ಬದಲಾವಣೆ :

ಹೊಸ ವೇತನ ಸಂಹಿತೆಯಡಿ ನೌಕರರ ವೇತನ ರಚನೆಯನ್ನೂ ಬದಲಾವಣೆ ಮಾಡಲಾಗುವುದು. ಟೇಕ್-ಹೋಮ್ ಸಂಬಳವನ್ನು ಕಡಿಮೆ ಮಾಡಬಹುದು. ಏಕೆಂದರೆ ವೇತನ ಸಂಹಿತೆ 2019ರ ಪ್ರಕಾರ 'ವೇತನ' ದ ವ್ಯಾಖ್ಯಾನವು ಬದಲಾಗುತ್ತದೆ. ಸರಳವಾಗಿ ಹೇಳುವುದಾದರೆ ಹೊಸ ವ್ಯಾಖ್ಯಾನದ ಪ್ರಕಾರ ನೌಕರನ ಮೂಲ ವೇತನವು ಕಂಪನಿಯ ವೆಚ್ಚದ (CTC) 50% ಕ್ಕಿಂತ ಕಡಿಮೆಯಿರಬಾರದು. ಪ್ರಸ್ತುತ ಅನೇಕ ಕಂಪನಿಗಳು ಮೂಲ ವೇತನವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಮಾಡುತ್ತವೆ ಮತ್ತು ಹೆಚ್ಚಿನ ಭತ್ಯೆಗಳನ್ನು ನೀಡುತ್ತವೆ.

ವರ್ಷದ ರಜಾದಿನಗಳಲ್ಲಿ ಹೆಚ್ಚಳ :

ವರ್ಷದ ರಜಾದಿನಗಳಲ್ಲಿ ಹೆಚ್ಚಳ :

ನೌಕರರ ಗಳಿಕೆಯ ರಜೆ 240 ರಿಂದ 300 ಕ್ಕೆ ಏರಬಹುದು. ಕಾರ್ಮಿಕ ಸಂಹಿತೆಯ ಬದಲಾವಣೆಯ ಕುರಿತು ಕಾರ್ಮಿಕ ಸಚಿವಾಲಯ, ಕಾರ್ಮಿಕ ಸಂಘ ಮತ್ತು ಉದ್ಯಮದ ಪ್ರತಿನಿಧಿಗಳ ನಡುವೆ ಹಲವಾರು ನಿಬಂಧನೆಗಳನ್ನು ಚರ್ಚಿಸಲಾಯಿತು. ಅದರಲ್ಲಿ ನೌಕರರ ಗಳಿಕೆಯ ರಜೆ 240 ರಿಂದ 300 ಕ್ಕೆ ಹೆಚ್ಚಿಸಬೇಕೆಂದು ನೌಕರರು ಒತ್ತಾಯಿಸಿದ್ದರು.

ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಬಗ್ಗೆ :

ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಬಗ್ಗೆ :

ಮೊದಲ ಬಾರಿಗೆ ದೇಶದ ಎಲ್ಲಾ ರೀತಿಯ ಕಾರ್ಮಿಕರಿಗೆ ಕನಿಷ್ಠ ವೇತನ ಸಿಗಲಿದೆ. ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಇದಲ್ಲದೆ, ಎಲ್ಲಾ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಭವಿಷ್ಯ ನಿಧಿ ಸೌಲಭ್ಯವನ್ನು ಒದಗಿಸಲಾಗುವುದು. ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲಾ ಉದ್ಯೋಗಿಗಳಿಗೆ ನೌಕರರ ರಾಜ್ಯ ವಿಮೆ (ಇಎಸ್‌ಐ)ಸಿಗಲಿದೆ. ಇದು ಮಹಿಳೆಯರಿಗೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ರಾತ್ರಿ ಪಾಳೆಯಗಳಲ್ಲಿ ಕೂಡ ಕೆಲಸ ಮಾಡಲು ಅವಕಾಶ ನೀಡುತ್ತದೆ.

ಪಿಎಫ್,  ಗ್ರಾಚ್ಯುಟಿ ಹೆಚ್ಚಾಗಲಿದೆ :

ಪಿಎಫ್, ಗ್ರಾಚ್ಯುಟಿ ಹೆಚ್ಚಾಗಲಿದೆ :

ಮೂಲ ವೇತನ ಹೆಚ್ಚಳದಿಂದಾಗಿ ನೌಕರರ ಗ್ರ್ಯಾಚ್ಯುಟಿ ಮತ್ತು ಪಿಎಫ್ ಕೊಡುಗೆ ಹೆಚ್ಚಾಗುತ್ತದೆ. ಆದರೆ ನೌಕರರ ಟೇಕ್ ಹೋಮ್ ವೇತನವನ್ನು ಕಡಿಮೆಗೊಳಸಲಾಗುತ್ತದೆ. ಇದರಿಂದ ಉದ್ಯೋಗಿಗೆ ನಿವೃತ್ತಿ ಸಮಯದಲ್ಲಿ ಹೆಚ್ಚಿನ ಮೊತ್ತ ಸಿಗಲಿದೆ.

ಹೊಸ ವೇತನ ಸಂಹಿತೆಯು ಅಸಂಘಟಿತ ವಲಯದ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಸಂಬಳ ಮತ್ತು ಬೋನಸ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತವೆ ಮತ್ತು ಪ್ರತಿ ಉದ್ಯಮ ಹಾಗೂ ವಲಯದಲ್ಲಿ ಕೆಲಸ ಮಾಡುವ ನೌಕರರ ವೇತನವು ಸಮಾನವಾಗಿರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
The new wage code could come into effect in october and this could bring significant changes in salary, working hours, leaves and pf of government employees.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X