Newsreader Nagesh Shanbog : 50 ವರ್ಷಗಳಿಂದ ಮಕ್ಕಳಿಗೆ ಉಚಿತ ಗಣಿತ ಪಾಠ ಮಾಡುತ್ತಿರುವ ಸುದ್ದಿ ಓದುಗ

ಭಾರತದಾದ್ಯಂತ ಡಿಸೆಂಬರ್ 22ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುತ್ತೇವೆ. ಆದರೆ ಧಾರವಾಡದ 73 ವರ್ಷದ ನಾಗೇಶ್ ಶ್ಯಾನ್‌ಬೋಗ್ ಪ್ರತಿದಿನವೂ ಗಣಿತ ದಿನವನ್ನಾಗಿ ಪರಿಗಣಿಸಿದ್ದಾರೆ.

 
ಕಳೆದ ಐವತ್ತು ವರ್ಷಗಳಿಂದ ಉಚಿತ ಗಣಿತ ಪಾಠ ಮಾಡುತ್ತಿರುವ ನಾಗೇಶ್ ಶ್ಯಾನ್‌ಬೋಗ್

ನಾಗೇಶ್ ಶ್ಯಾನ್‌ಬೋಗ್ ಅವರು ಕಳೆದ 50 ವರ್ಷಗಳಿಂದ ಪ್ರಾಢಶಾಲೆಯ ವಿದ್ಯಾರ್ಥಿಗಳಿಗೆ ಗಣಿತವನ್ನು ಪಾಠ ಮಾಡುತ್ತಿದ್ದಾರೆ. ಅಗತ್ಯವಿರುವ ಬಡ ಮಕ್ಕಳಿಗೆ ಉಚಿತವಾಗಿ ಮತ್ತು ಇತರೆ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ಪಡೆಯುವುದರೊಂದಿಗೆ ಗಣಿತವನ್ನು ಹೇಳಿ ಕೊಡುತ್ತಿದ್ದಾರೆ.

ಡಿಸೆಂಬರ್ 22ರಂದು ಗಣಿತದ ಮೇಧಾವಿ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾಗೇಶ್ ಶ್ಯಾನ್‌ಬೋಗ್ ಅವರ ಕಾರ್ಯವನ್ನು ಉಲ್ಲೇಖಿಸುವುದು ಉತ್ತಮ.

ಶ್ಯಾನ್‌ಬೋಗ್ ಅವರು ಆಲ್ ಇಂಡಿಯಾ ರೇಡಿಯಾದಲ್ಲಿ ಓರ್ವ ಸುದ್ದಿ ಓದುಗರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಗಣಿತವನ್ನು ಕಲಿಸುತ್ತಿದ್ದಾರೆ. ಅವರು ಗಣಿತ ಶಿಕ್ಷಣವನ್ನು ಎಲ್ಲಿಯೂ ಪಡೆದವರಲ್ಲ ಆದರೂ ಇಂದು ಅವರ ವಿದ್ಯಾರ್ಥಿಗಳು ಎಲ್ಲೆಡೆಯೂ ಇದ್ದಾರೆ.

ಶ್ಯಾನ್‌ಬೋಗ್ ಅವರು ಹೇಳುವಂತೆ ಕಾಲೇಜು ದಿನಗಳಲ್ಲಲಿ ಗಣಿತ ಪಾಠ ಮಾಡುವುದು ಅವರ ಹವ್ಯಾಸವಾಗಿತ್ತು, ಆಲ್‌ ಇಂಡಿಯಾ ರೇಡಿಯೋ ದಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೂ ಈ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದೇನೆ. ಮೊದಲೆಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದೆ, ಆದರೆ ಈಗ ವಯಸ್ಸಾಗಿರುವ ಕಾರಣ ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪಾಠ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದಿದ್ದಾರೆ.

ಅನೇಕ ವಿದ್ಯಾರ್ಥಿಗಳು ಗಣಿತವನ್ನು ಕಬ್ಬಿಣದ ಕಡಲೆ ಎಂದು ಪರಿಗಣಿಸುತ್ತಾರೆ. ಆದರೆ ಗಣಿತ ಒಂದು ಆಸಕ್ತಿದಾಯಕ ವಿಷಯ ಹಾಗಾಗಿ ಅದರ ಕಲಿಕೆಗೆ ಒಂದು ಭದ್ರ ಬುನಾದಿ ಹಾಕಿಕೊಳ್ಳಲು ನಾನು ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿದ್ದೇನೆ ಎಂದು ನಾಗೇಶ್ ಹೇಳುತ್ತಾರೆ.

 

ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಕೂಡ ಹಣವಿಲ್ಲದೆ ಇದ್ದಾರೆ. ಇಂತಹ ಪರಿಸ್ಥಿತಿಯನ್ನು ನಾನು ಕೂಡ ಎದುರಿಸಿದ್ದೇನೆ ಹಾಗಾಗಿ ಯಾವ ಪೋಷಕರು ಅವರಾಗಿಯೇ ಶುಲ್ಕ ನೀಡುತ್ತಾರೋ ಅಂತಹವರ ಬಳಿ ಮಾತ್ರ ನಾನು ನನ್ನ 42ನೇ ವಯಸ್ಸಿನ ನಂತರದಿಂದ ಶುಲ್ಕ ತೆಗೆದುಕೊಳ್ಳುತ್ತಿದ್ದೇನೆ. ಆ ಹಣವನ್ನು ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೀಡುತ್ತೇನೆ ಎಂದಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
AIR newsreader nagesh shanbog taking free maths classes for free for over 50 years.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X