NIOS Exam: 10 ಮತ್ತು 12ನೇ ತರಗತಿ ಬಾಕಿ ಉಳಿದ ಪರೀಕ್ಷೆಗಳು ರದ್ದು

ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್ (ಎನ್‌ಐಓಎಸ್ ) ಬಾಕಿ ಉಳಿದ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಜುಲೈ 17 ರಿಂದ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಎನ್‌ಐಓಎಸ್ 10 ಮತ್ತು 12ನೇ ತರಗತಿ ಬಾಕಿ ಉಳಿದ ಪರೀಕ್ಷೆಗಳು ರದ್ದು

ವಿದ್ಯಾರ್ಥಿಗಳು ಈಗಾಗಲೇ ಬರೆದಾಗಿರುವ ವಿಷಯಗಳ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಅಥವಾ ಅಸೆಸ್ಮೆಂಟ್ ಆಧಾರದ ಮೇಲೆ ಬಾಕಿ ಉಳಿದಂತಹ ವಿಷಯಗಳ ಮೌಲ್ಯಮಾಪನವನ್ನು ನಡೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸಿದ್ದಲ್ಲಿ, ಮುಂದೆ ನಡೆಸುವ ಪಬ್ಲಿಕ್ ಎಕ್ಸಾಮ್‌ಗಳಲ್ಲಿ ಬಾಕಿ ಉಳಿದ ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

ಬಾಕಿ ಉಳಿದ ವಿಷಯಗಳ ಮೌಲ್ಯಮಾಪನ ಮಾಡಲು, ಫಲಿತಾಂಶ ಸಮಿತಿಯು ನಾಲ್ಕು ಹಂತಗಳ ಸೂತ್ರಗಳನ್ನು ಸಿದ್ಧಪಡಿಸಿದೆ. ಎನ್‌ಐಓಎಸ್‌ ಬಿಡುಗಡೆ ಮಾಡಲಾದ ನೋಟಿಫಿಕೇಶನ್‌ನಲ್ಲಿ, 10ನೇ ತರಗತಿ ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಬರೆದಿರುವ ನಾಲ್ಕು ವಿಷಯಗಳ ಪರೀಕ್ಷೆಗಳಲ್ಲಿ ಪಾಸ್‌ ಆಗಿರುವವರ, ಮೂರು ವಿಷಯಗಳಲ್ಲಿ ಪಡೆದ ಗರಿಷ್ಠ ಅಂಕಗಳನ್ನು ಪರಿಗಣಿಸಿ, ಅಭ್ಯರ್ಥಿಗಳು ಇನ್ನೂ ಬರೆಯದ ವಿಷಯಗಳಿಗೆ ಅಂಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
NIOS 2020: cancelled class 10 and 12 exams due to covid 19.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X