ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಲ್ಲ ಶಿಕ್ಷಣ ಇಲಾಖೆ ಸ್ಪಷ್ಟನೆ

ಪಿಯುಸಿ ವಿದ್ಯಾರ್ಥಿಗಳ ಸಮವಸ್ತ್ರದ ಗೊಂದಲಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಕೆಲ ಖಾಸಗಿ ಕಾಲೇಜುಗಲ್ಲಿ ಸಮವಸ್ತ್ರದ ನೆಪದಲ್ಲಿ ಒತ್ತಡ ಹೇರುವುದನ್ನು ಗಮನಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

ಪಿಯುಸಿ ವಿದ್ಯಾರ್ಥಿಗಳ ಸಮವಸ್ತ್ರದ ಗೊಂದಲಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಕೆಲ ಖಾಸಗಿ ಕಾಲೇಜುಗಲ್ಲಿ ಸಮವಸ್ತ್ರದ ನೆಪದಲ್ಲಿ ಒತ್ತಡ ಹೇರುವುದನ್ನು ಗಮನಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

ಶಾಲಾದಿನಗಳಲ್ಲಿ ಪ್ರತಿ ದಿನವೂ ಸಮವಸ್ತ್ರ ಧರಿಸಿ ಬೇಸರಗೊಂಡಿರುವ ವಿದ್ಯಾರ್ಥಿಗಳು ಕಾಲೇಜಿನಲ್ಲೂ ಸಮವಸ್ತ್ರ ಧರಿಸುವುದು ಸೂಕ್ತವಲ್ಲ ಎಂದು ಇಲಾಖೆಯು ತಿಳಿಸಿದೆ.

ಪ್ರತ್ಯೇಕ ಡ್ರೆಸ್​ಕೋಡ್ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳ ಮೇಲೆ ಸಮವಸ್ತ್ರ ನೀತಿಯನ್ನು ಹೇರುವ ಕಾಲೇಜುಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಹೇಳಿದೆ.

ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಲ್ಲ

ಪದವಿಪೂರ್ವ ವಿದ್ಯಾರ್ಥಿ ಗಳಿಗೆ ಸಮವಸ್ತ್ರ ಕಡ್ಡಾಯ ಎಂದು ಶಿಕ್ಷಣ ಕಾಯ್ದೆ ಹೇಳಿಲ್ಲ. ಆದರೂ ಕೆಲ ಕಾಲೇಜುಗಳು ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಪ್ರತ್ಯೇಕ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಸಮವಸ್ತ್ರ ನೀತಿ ಜಾರಿ ಮಾಡಬಾರದು. ಒಂದೊಮ್ಮೆ ನಿಯಮ ಮೀರಿದಲ್ಲಿ ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಕಾಲೇಜುಗಳಿಗೂ ಸೂಚನೆ ನೀಡಿದೆ.

ರಾಜ್ಯದ ಬಹುತೇಕ ಪ್ರತಿಷ್ಠಿತ ಕಾಲೇಜುಗಳು ಹಲವು ವರ್ಷಗಳಿಂದ ಸಮವಸ್ತ್ರವನ್ನು ಕಡ್ಡಾಯಗೊಳಿಸಿವೆ. ಈ ವರ್ಷವೂ ಕೆಲವು ಪ್ರಮುಖ ಕಾಲೇಜುಗಳು ಪಿಯು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಮವಸ್ತ್ರ ಆಯ್ಕೆ ಮಾಡಿ ಕಡ್ಡಾಯಗೊಳಿಸಲು ತೀರ್ವನಿಸಿದ್ದವು. ಇದೀಗ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿಗಳಿಂದ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

ಸಮವಸ್ತ್ರಕ್ಕೆ ವಿರೋಧ

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕೆಂದು ಬಹುತೇಕ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕ ಪಾವತಿಸಿ ದಾಖಲಾತಿ ಪಡೆದಿರುತ್ತಾರೆ. ಆದರೆ, ಕಾಲೇಜಿನ ಆಡಳಿತ ಮಂಡಳಿ ಸಮವಸ್ತ್ರ ಕಡ್ಡಾಯಗೊಳಿಸಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತವೆ. ಇದು ತಪ್ಪು. ಅಲ್ಲದೆ, ಶಾಲಾ ಹಂತದಲ್ಲಿ ಸಮವಸ್ತ್ರ ತೊಟ್ಟು ಬೇಸರಗೊಂಡಿರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇಷ್ಟದ ಬಟ್ಟೆ ಧರಿಸಲು ಆಸೆ ಪಡುತ್ತಾರೆ. ಇದರಿಂದಾಗಿ ಸಮವಸ್ತ್ರ ಜಾರಿಗೆ ತರುವುದು ಸೂಕ್ತವಲ್ಲವೆಂಬುದು ಒಂದು ವರ್ಗದ ಕಾಲೇಜು ಆಡಳಿತ ಮಂಡಳಿಯ ಅಭಿಪ್ರಾಯ,

ಸಮವಸ್ತ್ರಕ್ಕೆ ಬೆಂಬಲ

ವಿದ್ಯಾರ್ಥಿಗಳಲ್ಲಿ ಸಮಾನತೆ ಹಾಗೂ ಶಿಸ್ತು ಕಲಿಸಲು ಸಮವಸ್ತ್ರ ಕಡ್ಡಾಯ ಮಾಡುವುದು ಸೂಕ್ತ. ಅಲ್ಲದೆ, ಕಾಲೇಜಿಗೆ ವಿವಿಧ ವರ್ಗದ ವಿದ್ಯಾರ್ಥಿಗಳು ಬರುತ್ತಾರೆ. ಶ್ರೀಮಂತರು ದುಬಾರಿ ಉಡುಪು ಧರಿಸಿ ಕಾಲೇಜಿಗೆ ಬಂದಾಗ ಬಡ ಮಕ್ಕಳು ಖಿನ್ನತೆ ಹಾಗೂ ಸಂಕೋಚಕ್ಕೆ ಒಳಗಾಗುವ ಸಾಧ್ಯತೆಯಿದೆ. ಅಲ್ಲದೆ, ಸಮವಸ್ತ್ರ ಇಲ್ಲದಿದ್ದರೆ ಮನಬಂದಂತೆ ಫ್ಯಾಷನ್ ಬಟ್ಟೆಗಳನ್ನು ಹಾಕಿಕೊಂಡು ಕಾಲೇಜಿಗೆ ಬರುತ್ತಾರೆ. ಇದರಿಂದ ಕಾಲೇಜಿನ ವಾತಾವರಣ ಹದಗೆಡುತ್ತದೆ. ಹೀಗಾಗಿ ಸಮವಸ್ತ್ರ ಬೇಕೇ ಬೇಕು ಎಂಬುದು ಕೆಲ ಕಾಲೇಜು ಆಡಳಿತ ಮಂಡಳಿ ಅಭಿಪ್ರಾಯವಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Department of pre university now confirmed that no dress code and uniforms to PU students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+