ದೇಶದೆಲ್ಲೆಡೆ ಕೊರೋನಾ ಸಮಸ್ಯೆಯಿಂದಾಗಿ ಜನಜೀವನದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತನ್ನ ನೌಕರರನ್ನು ವಜಾಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಮಾನ ಹಾರಾಟ ಸಿಬ್ಬಂದಿಗೆ ಗಂಟೆಗಳ ಅನುಗುಣವಾಗಿ ಪಾವತಿಸಲಾಗುವುದು ಎಂದು ತಿಳಿಸಿದೆ. ಆದರೆ ತಿಂಗಳ ವೇತನ ಭತ್ಯೆ 25,000ಕ್ಕಿಂತ ಹೆಚ್ಚು ಇರುವವರಿಗೆ ಶೇಕಡಾ 50ರಷ್ಟು ಕಡಿಮೆ ಮಾಡಿದೆ. "ಸಾಮಾನ್ಯ ವರ್ಗದ ಅಧಿಕಾರಿಗಳಿಗೆ", ಇತರ ಎಲ್ಲ ಭತ್ಯೆಗಳನ್ನು ಶೇ. 50ರಷ್ಟು ಕಡಿಮೆಗೊಳಿಸಲಾಗುವುದು ಎಂದು ಆಂತರಿಕ ಆದೇಶದಲ್ಲಿ ತಿಳಿಸಲಾಗಿದೆ.
"ಸಾಮಾನ್ಯ ವರ್ಗದ ಸಿಬ್ಬಂದಿ" ಮತ್ತು "ನಿರ್ವಾಹಕರು" ಇತರ ಎಲ್ಲ ಭತ್ಯೆಗಳನ್ನು ಶೇ. 30ರಷ್ಟು ಕಡಿಮೆಗೊಳಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕ್ಯಾಬಿನ್ ಸಿಬ್ಬಂದಿ ಸದಸ್ಯರ ತಮ್ಮ ಇತರ ಭತ್ಯೆಗಳಾದ ಚೆಕ್ ಭತ್ಯೆ, ಹಾರುವ ಭತ್ಯೆ ಮತ್ತು ತ್ವರಿತ ರಿಟರ್ನ್ ಭತ್ಯೆಯನ್ನು ಶೇ. 20ರಷ್ಟು ಕಡಿಮೆಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಏರ್ ಇಂಡಿಯಾದ ಆರ್ಥಿಕ ಸ್ಥಿತಿ ಸುಧಾರಿಸಿದಂತೆ, ಭತ್ಯೆಗಳ ತರ್ಕಬದ್ಧತೆಯನ್ನು ಪರಿಶೀಲಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ.