ಎನ್ಇಟಿ 2017: ಸಿಬಿಎಸ್ಇ ಅಧಿಸೂಚನೆಗೆ ಕಾದು ಕೂತ ಅಭ್ಯರ್ಥಿಗಳು

ಜುಲೈ 24 ರಂದು ಎನ್ಇಟಿ 2017 ರ ನವೆಂಬರ್ ತಿಂಗಳಿನ ಪರೀಕ್ಷೆಯ ಪರಿಷ್ಕೃತ ಅಧಸೂಚನೆಯನ್ನು ಹೊರಡಿಸುವುದಾಗಿ ಸಿಬಿಎಸ್ಇ ತಿಳಿಸಿತ್ತು. ಆದರೆ ಈವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಉಪನ್ಯಾಸಕರ ಅರ್ಹತಾ ಪರೀಕ್ಷೆ ಯುಜಿಸಿ ನೆಟ್-2017 ನೇ ಸಾಲಿನ ಪರೀಕ್ಷೆಗೆ ಸಂಬಂಧಿಸಿದಂತೆ ಸಿಬಿಎಸ್ಇ ನೂತನ ಅಧಿಸೂಚನೆಯನ್ನು ಹೊರಡಿಸಲು ವಿಫಲವಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಪ್ರತಿವರ್ಷದಂತೆ ಈ ವರ್ಷವು ನಡೆಸುವ ಜವಾಬ್ದಾರಿ ಹೊತ್ತಿದೆ.
ಜುಲೈ 24 ರಂದು ಎನ್ಇಟಿ 2017 ರ ನವೆಂಬರ್ ತಿಂಗಳಿನ ಪರೀಕ್ಷೆಯ ಪರಿಷ್ಕೃತ ಅಧಸೂಚನೆಯನ್ನು ಹೊರಡಿಸುವುದಾಗಿ ಸಿಬಿಎಸ್ಇ ತಿಳಿಸಿತ್ತು. ಆದರೆ ಈವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಈ ಹಿಂದೆ ಪ್ರಕಟಿಸಲಾಗಿದ್ದ ಅಧಿಸೂಚನೆಯಂತೆ ನವೆಂಬರ್ ತಿಂಗಳ ಎನ್ಇಟಿ ಪರೀಕ್ಷೆಯು ನವೆಂಬರ್ 05 (ಭಾನುವಾರ) ರಂದು ನಡೆಸಲು ಸಿಬಿಎಸ್ಇ ನಿರ್ಧರಿಸಿತ್ತು. ಅಭ್ಯರ್ಥಿಗಳು ಆಗಸ್ಟ್ 1 ರ ನಂತರ ಅನ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಕಟವಾಗದ ಎನ್ಇಟಿ 2017 ರ ಅಧಿಸೂಚನೆ

ಎನ್‌ಇಟಿ ಪರೀಕ್ಷೆ

ಸರ್ಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತಾ ಪರೀಕ್ಷೆ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ತೇರ್ಗಡೆಯಾಗಿರಬೇಕು.

ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮೂಲಕ ವರ್ಷಕ್ಕೆ ಎರಡು ಬಾರಿ ಎನ್‌ಇಟಿ ನಡೆಯುತ್ತದೆ. ಅಲ್ಲದೆ ಕೆಲ ರಾಜ್ಯಗಳು ವರ್ಷ, ಎರಡು ವರ್ಷಕ್ಕೊಮ್ಮೆ ಎಸ್‌ಎಲ್‌ಇಟಿ (ಸ್ಲೆಟ್‌) ನಡೆಸುತ್ತವೆ. ಆರು ತಿಂಗಳಿಗೊಮ್ಮೆ ನಡೆಯುವ ಎನ್‌ಇಟಿಯನ್ನು ದೇಶದಾದ್ಯಂತ ಸರಾಸರಿ 7 ಲಕ್ಷ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಸ್ಲೆಟ್‌ ಪರೀಕ್ಷೆಗೂ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ.

ಎನ್ಇಟಿ ಪರೀಕ್ಷಾ ವಿಧಾನ

ಎನ್ಇಟಿ ಪರೀಕ್ಷೆಯು ಒಟ್ಟು ಮೂರು ಪತ್ರಿಕೆಗಳನ್ನು ಒಳಗೊಂಡಿದ್ದು 350 ಅಂಕಗಳಿಗೆ ನಡೆಸಲಾಗುವುದು.

  • ಮೊದಲ ಪತ್ರಿಕೆ 60 ಪ್ರಶ್ನೆಗಳನ್ನೊಳಗೊಂಡಿದ್ದು 50 ಪ್ರಶ್ನೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಈ ಪತ್ರಿಕೆಯು ಸಾಮಾನ್ಯ ಪತ್ರಿಕೆಯಾಗಿದ್ದು ಲಾಜಿಕ್, ರೀಸನಿಂಗ್, ಮೆಂಟಲ್ ಎಬಿಲಿಟಿ ಸೇರಿದಂತೆ ಹತ್ತು ವಿವಿಧ ವಿಷಯಗಳ ಬಗ್ಗೆ ಕೇಳಲಾಗುವುದು.
  • ಎರಡನೇ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.
  • ಮೂರನೇ ಪತ್ರಿಕೆಯು 75 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ತೇರ್ಗಡೆ ವಿಧಾನ

ಯುಜಿಸಿ ನಿಯಮಾವಳಿಯಂತೆ ಶೇಕಡವಾರಿನ (ಕಟ್ ಆಫ್ ಪರ್ಸೆಂಟೇಜ್) ಮೂಲಕ ಅಭ್ಯರ್ಥಿಗಳ ಫಲಿತಾಂಶ ಘೋಷಿಸಲಾಗುತ್ತದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01-08-2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-08-2017
ಪರೀಕ್ಷೆ ನಡೆಯುವ ದಿನಾಂಕ: 05-11-2017

ಹೆಚ್ಚಿನ ವಿವರಗಳಿಗಾಗಿ cbsenet.nic.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
The Central Board of Secondary Education (CBSE) has not yet issued the notification for the UGC NET 2017. The notification was expected on Monday.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X