Nobel Prize 2021 Winners : 2021ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ

ನೊಬೆಲ್ ಪ್ರಶಸ್ತಿ 2021 ವಿಜೇತರ ಪಟ್ಟಿ: 2021ನೇ ಸಾಲಿನ ವಿವಿಧ ನೊಬೆಲ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಭಾರಿ ಶಾಂತಿ, ರಸಾಯನಶಾಸ್ತ್ರ, ಭೌತಶಾಸ್ತ್ರ, ಸಾಹಿತ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆಗೈದ ಅಭ್ಯರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

 
2021ರ  ನೊಬೆಲ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ರಿಲೀಸ್

ನೊಬೆಲ್ ಪ್ರಶಸ್ತಿಗಳನ್ನು ನಾರ್ವೇಜಿಯನ್ ನೊಬೆಲ್ ಸಮಿತಿ, ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ.

1895 ರಲ್ಲಿ ಆಲ್ಫ್ರೆಡ್ ನೊಬೆಲ್ ಅವರು ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿದರು. ಈ ಪ್ರಶಸ್ತಿಗಳನ್ನು ನೊಬೆಲ್ ಪ್ರತಿಷ್ಠಾನದಿಂದ ನೀಡಲಿದ್ದು, 1901 ರಿಂದ ಈ ವರೆಗೂ 608 ಬಾರಿ ನೀಡಲಾಗಿದೆ. ಸ್ವೀಡನ್ ಮತ್ತು ನಾರ್ವೆಯ ನೊಬೆಲ್ ಸಮಿತಿಗಳು ಪ್ರತಿ ವಿಭಾಗದಲ್ಲಿ ಯಾರು ಬಹುಮಾನಗಳನ್ನು ಪಡೆಯುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ.

ನೊಬೆಲ್ ಪ್ರಶಸ್ತಿ 2021 ವಿಜೇತರ ಪಟ್ಟಿ :

ನೊಬೆಲ್ ಪ್ರಶಸ್ತಿ ವಿಭಾಗ : ವಿಜೇತರ ಹೆಸರು
ಭೌತಶಾಸ್ತ್ರ : ಸೈಕುರೊ ಮನಾಬೆ ಮತ್ತು ಕ್ಲಾಸ್ ಹ್ಯಾಸೆಲ್ಮನ್ - ಭೂಮಿಯ ಹವಾಮಾನದ ಭೌತಿಕ ಮಾದರಿಗಾಗಿ, ವ್ಯತ್ಯಾಸವನ್ನು ಪರಿಮಾಣಿಸಲು ಮತ್ತು ಜಾಗತಿಕ ತಾಪಮಾನ ಅಂದಾಜು ಸಂಶೋಧನೆಗೆ ನೀಡಲಾಗಿದೆ.

ಜಾರ್ಜಿಯೊ ಪ್ಯಾರಿಸಿ - ಪರಮಾಣುಗಳಿಂದ ಗ್ರಹಗಳ ಮಾಪಕಗಳವರೆಗೆ ಭೌತಿಕ ವ್ಯವಸ್ಥೆಯಲ್ಲಿನ ಅಸ್ವಸ್ಥತೆ ಮತ್ತು ಏರಿಳಿತಗಳ ಪರಸ್ಪರ ಪತ್ತೆಗಾಗಿ ನೀಡಲಾಗಿದೆ.

ರಸಾಯನಶಾಸ್ತ್ರ : ಡೇವಿಡ್ ಡಬ್ಲ್ಯೂಸಿ ಮ್ಯಾಕ್‌ಮಿಲನ್‌ - ಆಣ್ವಿಕ ನಿರ್ಮಾಣಕ್ಕಾಗಿ ನಿಖರವಾದ ಹೊಸ ಉಪಕರಣ ಆರ್ಗನೊಕಟಾಲಿಸಿಸ್ ಅಭಿವೃದ್ಧಿಪಡಿಸುವಿಕೆಗೆ.

ಶರೀರಶಾಸ್ತ್ರ ಅಥವಾ ವೈದ್ಯಕೀಯ : ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ - ದೇಹದ ತಾಪಮಾನ ಮತ್ತು ಸ್ಪರ್ಷದ ಗ್ರಾಹಕಗಳ ಬಗ್ಗೆ ಸಂಶೋಧನೆಗೆ ಪ್ರಶಸ್ತಿ ಲಭಿಸಿದೆ.

 

ಸಾಹಿತ್ಯ : ಅಬ್ದುಲ್​ರಜಾಕ್ ಗುರ್ನಾಹ್‌ - ಲ್ಫ್ ದೇಶಗಳಲ್ಲಿನ ನಿರಾಶ್ರಿತರ ಮೇಲೆ ವಸಾಹತು ಶಾಹಿಯ ಪರಿಣಾಮ ಮತ್ತು ಅವರ ಸಂಸ್ಕೃತಿಯಲ್ಲಿ ಒಳನುಸುಳುವಿಕೆಯ ಕುರಿತು ರಾಜಿಯಿಲ್ಲದ ಮತ್ತು ಉದಾತ್ತವಾದ ಸಾಹಿತ್ಯ ಸೃಷ್ಟಿ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ಶಾಂತಿ : ಮರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ - ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಅವರ ಪ್ರಯತ್ನಗಳಿಗಾಗಿ.

ನೊಬೆಲ್ ಪ್ರಶಸ್ತಿ ವಿಜೇತರು ಎಷ್ಟು ಹಣವನ್ನು ಪಡೆಯುತ್ತಾರೆ? :

ನೊಬೆಲ್ ಪ್ರಶಸ್ತಿ ವಿಜೇತರು ಆಲ್ಫ್ರೆಡ್ ನೊಬೆಲ್ ಅವರ ಚಿತ್ರ ಮತ್ತು ಮೊತ್ತದೊಂದಿಗೆ ಪದಕವನ್ನು ಪಡೆಯುತ್ತಾರೆ. ಬಹುಮಾನದ ಮೊತ್ತವು ಪ್ರತಿ ವರ್ಷ ಬದಲಾಗುತ್ತದೆ. ಮಾನವೀಯ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕಾರಣಗಳಿಗಾಗಿ ಲಾಭ ಪಡೆಯಲು ಸ್ವೀಕೃತದಾರರು ತಮ್ಮ ನೊಬೆಲ್ ಬಹುಮಾನದ ಹಣವನ್ನು ದಾನ ಮಾಡುವುದು ಸಾಮಾನ್ಯವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Nobel prize 2021 announced for chemistry, physics, literature, peace and medicine categories. Here is the list.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X