ಎನ್‌ಟಿಎ ಮೂಲಕ ವರ್ಷದಲ್ಲಿ ಎರಡು ಬಾರಿ ಜೆಇಇ ಮತ್ತು ನೀಟ್

ಎನ್‌ಟಿಎ 2019ರಿಂದ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಸಿಬಿಎಸ್‌ಇ ನಡೆಸುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳನ್ನು ಆರಂಭದಲ್ಲಿ ಎನ್‌ಟಿಎ ನಡೆಸಲಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮೂಲಕ ವರ್ಷದಲ್ಲಿ ಎರಡು ಬಾರಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗಳನ್ನು (ಎನ್‌ಇಇಟಿ) ಆನ್‌ಲೈನ್‌ ಮೂಲಕ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 'ಎನ್‌ಟಿಎ' ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 'ಎನ್‌ಟಿಎ' ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಈ ಹಿಂದೆಯೂ ವರ್ಷಕ್ಕೆ ಎರಡು ಬಾರಿ ಜೆಇಇ ಪರೀಕ್ಷೆ ನಡೆಸುವಂತೆ ಬೇಡಿಕೆ ಇತ್ತಾದರೂ ಅದು ಜಾರಿಗೆ ಬಂದಿರಲಿಲ್ಲ. ಈ ಪದ್ಧತಿಯು ಯಾವ ಸಾಲಿನಿಂದ ಅನುಷ್ಠಾನವಾಗಲಿದೆ ಎಂಬುದನ್ನು ಸರ್ಕಾರ ಖಚಿತಪಡಿಸಿಲ್ಲ.

2018 ರಲ್ಲಿ ಬಿಎಸ್ಸಿಯ ಈ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ2018 ರಲ್ಲಿ ಬಿಎಸ್ಸಿಯ ಈ ಕೋರ್ಸ್ ಗಳಿಗೆ ಹೆಚ್ಚು ಬೇಡಿಕೆ

ವರ್ಷಕ್ಕೆ ಎರಡು ಬಾರಿ ಜೆಇಇ ಮತ್ತು ನೀಟ್

ಐಐಟಿಗಳ ಪ್ರವೇಶಕ್ಕೆ ನಡೆಸುವ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (ಜೆಇಇ) ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅನ್ನು ಕಳೆದ ಕೆಲವು ವರ್ಷಗಳಿಂದ ಕೇಂದ್ರ ಪ್ರೌಢ ಶಿಕ್ಷಣಾ ಮಂಡಳಿ (ಸಿಬಿಎಸ್‌ಇ) ಆಯೋಜಿಸುತ್ತಿದೆ.

ಎನ್‌ಇಇಟಿ, ಜೆಇಇ ಮುಖ್ಯ ಪರೀಕ್ಷೆ ಸೇರಿದಂತೆ ವಿವಿಧ ಒಂಬತ್ತು ಪ್ರವೇಶ ಪರೀಕ್ಷೆಗಳು ಮತ್ತು ಕೆಲ ನೇಮಕಾತಿ ಪರೀಕ್ಷೆಗಳನ್ನೂ ಸಿಬಿಎಸ್‌ಇ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದೆ. ತನ್ನ ಅಧೀನದಲ್ಲಿರುವ 18,000 ಶಾಲೆಗಳ ನಿರ್ವಹಣೆ-ಮೇಲ್ವಿಚಾರಣೆಗೆ ಅಡಚಣೆಯಾಗುತ್ತಿದೆ. ಹೀಗಾಗಿ ಈ ಪರೀಕ್ಷೆಗಳ ಹೊಣೆಯಿಂದ ಬಿಡುಗಡೆ ಮಾಡಬೇಕು ಎಂದುಕೇಂದ್ರ ಸರ್ಕಾರಕ್ಕೆ ಸಿಬಿಎಸ್‌ಇ ಮನವಿ ಸಲ್ಲಿಸಿತ್ತು.

ಎನ್‌ಟಿಎ 2019ರಿಂದ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಸಿಬಿಎಸ್‌ಇ ನಡೆಸುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳನ್ನು ಆರಂಭದಲ್ಲಿ ಎನ್‌ಟಿಎ ನಡೆಸಲಿದೆ. ಕ್ರಮೇಣ ಇತರ ಪ್ರವೇಶ ಪರೀಕ್ಷೆಗಳನ್ನು ಹಂತ ಹಂತವಾಗಿ ಅದು ನಡೆಸಿಕೊಂಡು ಹೋಗಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗಳ ಜವಾಬ್ದಾರಿಯನ್ನೂ ನಂತರದ ದಿನಗಳಲ್ಲಿ ಎನ್‌ಟಿಎ ವಹಿಸಿಕೊಳ್ಳಲಿದೆ.

ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿ ಎಂಬ ಉದ್ದೇಶದಿಂದ ವರ್ಷಕ್ಕೆ ಕನಿಷ್ಠ ಎರಡು ಬಾರಿ ಆನ್‌ಲೈನ್‌ ಮೂಲಕ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಖಾತೆ ಸಚಿವ ಉಪೇಂದ್ರ ಕುಶ್ವಾಹ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
With the introduction of NTA, NEET - the national level medical entrance exam - and JEE - national level engineering entrance exam - might be conducted twice a year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X