NTA UGC NET Provisional Answer Key : ಎನ್‌ಇಟಿ ತಾತ್ಕಾಲಿಕ ಕೀ ಉತ್ತರ ಪ್ರಕಟ.. ಅ.20ರೊಳಗೆ ಆಕ್ಷೇಪಣೆ ಸಲ್ಲಿಸಿ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ಯುಜಿಸಿ ಎನ್‌ಇಟಿ ಡಿಸೆಂಬರ್ 2021 ಮತ್ತು ಜೂನ್ 2022 ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.

 

ಯುಜಿಸಿ ಎನ್‌ಇಟಿ ಡಿಸೆಂಬರ್ 2021 ಮತ್ತು ಜೂನ್ 2022ರ ಪರೀಕ್ಷೆಗಳನ್ನು ನಾಲ್ಕು ಫೇಸ್‌ಗಳಲ್ಲಿ ನಡೆಸಲಾಗಿತ್ತು. ಇದೀಗ ಫೇಸ್ I, ಫೇಸ್ II ಮತ್ತು ಫೇಸ್ IIIರ ತಾತ್ಕಾಲಿಕ ಕೀ ಉತ್ತರ ಜೊತೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಎನ್‌ಇಟಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳು ಪ್ರಕಟ

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ತಾವು ಬರೆದ ಉತ್ತರ ಪತ್ರಿಕೆ ಜೊತೆಗೆ ತಾತ್ಕಾಲಿಕ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳಿಗೆ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ಪ್ರತಿ ಪ್ರಶ್ನೆಗೆ 200/-ರೂ ಅನ್ನು ಆನ್‌ಲೈನ್‌ ನಲ್ಲಿ ಪಾವತಿಸುವ ಮೂಲಕ ಅಕ್ಟೊಬರ್ 20,2022ರ ರಾತ್ರಿ 11:50ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.

 

ಅಭ್ಯರ್ಥಿಗಳು ತಾತ್ಕಾಲಿಕ ಕೀ ಉತ್ತರ ವೀಕ್ಷಿಸುವುದು ಮತ್ತು ಆಕ್ಷೇಪಣೆ ಸಲ್ಲಿಸುವುದು ಹೇಗೆ? :

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಎನ್‌ಟಿಎ ಅಧಿಕೃತ ವೆಬ್‌ಸೈಟ್‌ https://nta.ac.in/ ಗೆ ಭೇಟಿ ನೀಡಿ.

ಸ್ಟೆಪ್ 2: ನಂತರ ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಹಾಗೂ ಸೆಕ್ಯುರಿಟಿ ಪಿನ್ ನೀಡಿ ಸಬ್‌ಮಿಟ್ ಮಾಡಿ.

ಸ್ಟೆಪ್ 3: ಅಭ್ಯರ್ಥಿಯು "View Question Paper" ಮೇಲೆ ಕ್ಲಿಕ್ ಮಾಡಿ ನಂತರ ಕೀ ಉತ್ತರ ವೀಕ್ಷಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು "Click to view/challenge answer key" ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸ್ಟೆಪ್ 4: ನಂತರ ಕೀ ಉತ್ತರಗಳನ್ನು ವೀಕ್ಷಿಸಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.

ಅಭ್ಯರ್ಥಿಗಳು ನೇರವಾಗಿ ಕೀ ಉತ್ತರ ವೀಕ್ಷಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
NTA released UGC NET december 2021 and june 2022 provisional answer key and raise objections before October 20.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X