NVS CBT Admit Card 2022 : ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?

ನವೋದಯ ವಿದ್ಯಾಲಯ ಸಮಿತಿ ನೇಮಕಾತಿಯ ವಿವಿಧ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇದೀಗ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಎನ್‌ವಿಎಸ್ ನೇಮಕಾತಿಯ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ 1925 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಜನವರಿ 12,2022 ರಿಂದ ಫೆಬ್ರವರಿ 10,2022ರ ರಾತ್ರಿ 11:59ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ದ್ವಿತೀಯ ಪಿಯುಸಿ, ಪದವಿ, ಡಿಪ್ಲೋಮಾ, 10ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.

ನವೋದಯ ವಿದ್ಯಾಲಯ ಸಮಿತಿ ನೇಮಕಾತಿಯ ವಿವಿಧ ಹುದ್ದೆಗಳಿಗೆ ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದರು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000/- ರಿಂದ 2,09,200/-ರೂಗಳ ವರೆಗೆ ವೇತನ ನೀಡಲಾಗುವುದು.

ನವೋದಯ ವಿದ್ಯಾಲಯ ಸಮಿತಿ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆ, ಲಿಖಿತ ಪರೀಕ್ಷೆ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಅದರ ಅನ್ವಯ ಮಾರ್ಚ್ 8 ರಿಂದ ಮಾರ್ಚ್ 13,2022ರ ವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಪರೀಕ್ಷಾ ಪ್ರವೇಶ ಪತ್ರವನ್ನು ಪ್ರಕಟ ಮಾಡಲಾಗಿದೆ. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ನೋಡಿ.

ಎನ್‌ವಿಎಸ್ ವಿವಿಧ ಹುದ್ದೆಗಳ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?:

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://navodaya.gov.in/nvs/en/Home1 ಗೆ ಭೇಟಿ ನೀಡಿ.
ಸ್ಟೆಪ್ 2 : ನಂತರ ಅಲ್ಲಿ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3 : ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ
ಸ್ಟೆಪ್ 4 : ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ನೇರವಾಗಿ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Navodaya vidyalaya samiti released computer based test admit card 2022 for various posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X