ಯುಕೆ ಮತ್ತು ಐರ್ಲೆಂಡ್ ನಲ್ಲಿ ಆಕ್ಯುಪೇಷನಲ್ ಇಂಗ್ಲೀಷ್ ಟೆಸ್ಟ್ (ಒಇಟಿ) ನೋಂದಾವಣಿಗೆ ಅನುಮೋದನೆ

Posted By:

ವಿದೇಶದಲ್ಲಿ  ಕೆಲಸ ಮಾಡಲು ಬಯಸುವ ನರ್ಸ್‌ ಮತ್ತು ಮಿಡ್ ವೈಫ ಗಳಿಗೆ ಆಕ್ಯುಪೇಷನಲ್ ಇಂಗ್ಲೀಷ್ ಟೆಸ್ಟ್ (ಒಇಟಿ) ತೆಗೆದುಕೊಳ್ಳಲು ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ್ ನೋಂದಾವಣಿಗೆ ಯುಕೆ ಮತ್ತು ಐರ್ಲೆಂಡ್ ನಲ್ಲಿ ಅನುಮೋದನೆ ಸಿಕ್ಕಿದೆ.

ಒಇಟಿ ಅನ್ನು ಜನವರಿ 2ರಿಂದ ನರ್ಸಿಂಗ್ ಮತ್ತು ಮಿಡ್ ವೈಫರಿ ಕೌನ್ಸಿಲ್, ಯುಕೆ (ಎನ್ಎಂಸಿ) ಯು, ತರಬೇತಿ ಪಡೆದಿರುವ ವಿದೇಶಿ ನರ್ಸ್ ಗಳು ಮತ್ತು ಮಿಡ್ ವೈಫ್ ಗಳ ನೋಂದಾವಣೆ ಪ್ರಕ್ರಿಯೆಯಲ್ಲಿ, ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯ ಪ್ರಮಾಣಕ ಎಂಬುದಾಗಿ ಅನುಮೋದಿಸಿದೆ.

ಯುಕೆ ಮತ್ತು ಐರ್ಲೆಂಡ್ ನಲ್ಲಿ ಒಇಟಿ ಅನುಮೋದನೆ

ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ್ (ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಒಂದು ಭಾಗ) ಮತ್ತು ಕೇಂಬ್ರಿಡ್ಜ್ ಬಾಕ್ಸ್ ಹಿಲ್ ಲ್ಯಾಂಗ್ವೇಜ ಅಸೆಸ್ಮೆಂಟ್, ಅರೋಗ್ಯ ಸೇವಾ ಕ್ಷೇತ್ರದಲ್ಲಿನ ವೃತ್ತಿಪರರಿಗಾಗಿ ನೀಡುವ ಆಕ್ಯುಪೇಷನಲ್ ಇಂಗ್ಲೀಷ್ ಟೆಸ್ಟ್ ಇದಾಗಿದೆ.

ಯುಕೆ, ಐರ್ಲೆಂಡ್ ಸೇರಿದಂತೆ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದುಬೈ ಮತ್ತು ಸಿಂಗಾಪುರದ ಬೋರ್ಡ್ಗಳು ಮತ್ತು ಕೌನ್ಸಿಲ್ಗಳು ಕೂಡ ಅನುಮೋದಿಸಿದ್ದು, ಅಭ್ಯರ್ಥಿಗಳಿಗೆ ಒಇಟಿ ಸಹಕಾರಿಯಾಗಲಿದೆ.

ಒಇಟಿ ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಕೊಚ್ಚಿನ್, ಅಹ್ಮದಾಬಾದ್, ಅಮೃತ್ಸರ್, ಚಂಢೀಗಡ್, ಹೈದರಾಬಾದ್, ಕೊಲ್ಕತ್ತಾ, ಚೆನ್ನೈ, ಮುಂಬೈ, ಹೊಸದಿಲ್ಲಿ, ತಿರುವನಂತಪುರಂ.

ಇದಲ್ಲದೇ ಒಇಟಿ ಪರೀಕ್ಷಾ ಕೇಂದ್ರಗಳು 40 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಲಭ್ಯವಿದ್ದು, ಪ್ರತಿ ತಿಂಗಳು ಪರೀಕ್ಷೆಗಳು ನಡೆಯುತ್ತಿರುತ್ತವೆ.

ಒಇಟಿ

ಆಕ್ಯುಪೇಷನಲ್ ಇಂಗ್ಲೀಷ್ ಟೆಸ್ಟ್ (ಒಇಟಿ) ಯು ಪ್ರಮಾಣಕ ಇಂಗ್ಲೀಷ್ ಪರೀಕ್ಷೆ ಆಗಿದ್ದು, ಕೇಂಬ್ರಿಡ್ಜ್ ಬಾಕ್ಸ್ ಹಿಲ್ ಇನ್ಸ್ಟಿಟ್ಯೂಟ್ ಮತ್ತು ಕೇಂಬ್ರಿಡ್ಜ್ ಇಂಗ್ಲೀಷ್ ಜಂಟಿಯಾಗಿ ನಡೆಸುತ್ತಿದೆ. ವಿಶೇಷವಾಗಿ ಈ ಕ್ಷೇತ್ರಕ್ಕಾಗಿಯೇ ಅಭಿವೃದ್ದಿಪಡಿಸಲಾಗಿದೆ. ತಮ್ಮ ವೃತ್ತಿಯನ್ನು ನೋಂದಾವಣೆ ಮಾಡಿಕೊಂಡು ವಿದೇಶ ಉದ್ಯೋಗ ಪಡೆಯಲು ಬಯಸುವವರಿಗೆ ಸಹಕಾರಿಯಾಗಿದೆ.

ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಗ್ಲೀಷ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಒಂದು ಭಾಗವಾಗಿದ್ದು, ನೂರಕ್ಕೂ ಹೆಚ್ಚು ವರ್ಷಗಳಿಂದ ಇಂಗ್ಲೀಷ್ ಭಾಷೆ ಕಲಿಸುತ್ತಾ ಬಂದಿದೆ. ಬಾಕ್ಸ್ ಹಿಲ್ ಆಸ್ಟ್ರೇಲಿಯಾ ಮತ್ತು ಜಗತ್ತೀನಾದ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಔದ್ಯೋಗಿಕ ಮತ್ತು ಉನ್ನತ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿದೆ.

ಯುಕೆ ಮತ್ತು ಐರ್ಲೆಂಡ್ ನಲ್ಲಿ ಅನುಮೋದನೆ ದೊರೆತಿರುವುದರಿಂದ ಈ ದೇಶಗಳಲ್ಲಿ ಉದ್ಯೋಗದ ಹುಡುಕಾಟದಲ್ಲಿರುವ ದಾದಿಯರಿಗೆ ಬೇಡಿಕೆ ಹೆಚ್ಚಿದೆ ಎಂದು ಇದರ ಪ್ರಾದೇಶಿಕ ನಿರ್ದೇಶಕರಾದ ಟಿ.ಕೆ ಅರುಣಾಚಲಂ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The Occupational English Test (OET) for healthcare professionals, offered by Cambridge Assessment English (Part of the University of Cambridge) and Cambridge Boxhill Language Assessment, is now accepted by UK and Ireland.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia