Omicron Effect : ಶಾಲಾ ಕಾಲೇಜುಗಳ ಸಭೆ ಸಮಾರಂಭಗಳು ಜ.15ರ ವರೆಗೆ ಮುಂದೂಡಿಕೆ

ಇಡೀ ದೇಶವೇ ಕೊರೋನಾ ಹೆಮ್ಮಾರಿಯಿಂದ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಕೊರೊನಾ ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್ ದೇಶ ವಿದೇಶಗಳಲ್ಲಿ ಆವರಿಸಿಕೊಂಡು ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಒಮಿಕ್ರಾನ್ ತಡೆಗೆ ರಾಜ್ಯ ಸರ್ಕಾರ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಹೆಚ್ಚಳ, ವಿಮಾನ‌ ನಿಲ್ದಾಣಗಳಲ್ಲಿ ಬಿಗಿ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.

ಒಮಿಕ್ರಾನ್ ತಡೆಗೆ ಶಾಲಾ ಕಾಲೇಜುಗಳು ಕಾರ್ಯಕ್ರಮಗಳು ಮುಂದೂಡಿಕೆ

ಜಾಗತಿಕ ಎಚ್ಚರಿಕೆಯನ್ನು ಹುಟ್ಟುಹಾಕಿರುವ ಹೊಸ ರೂಪಾಂತರಿ ಒಮಿಕ್ರಾನ್ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯು ಮುಗಿದ ಬಳಿಕ ಮಾಹಿತಿ ನೀಡಿದ ಆರ್. ಅಶೋಕ್ ಕುಮಾರ್ ಅವರು ಜಗತ್ತಿನ ವಿವಿಧ ಭಾಗಗಳಲ್ಲಿ 400 ಒಮಿಕ್ರಾನ್ ಸೋಂಕು ಪ್ರಕರಣಗಳು ಕಂಡು ಬಂದಿವೆ. ಆದರೆ ಇವು ತೀವ್ರತರದ ಸ್ವರೂಪದ್ದು ಅಲ್ಲ ಎನ್ನುವ ವಿಷಯವನ್ನು ತಜ್ಞರು ತಿಳಿಸಿದ್ದಾರೆ. ಆದರೂ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಾತನಾಡಿದ್ದಾರೆ.

ಮದುವೆ ಸಮಾರಂಭಕ್ಕೆ 500 ಜನ ಮಾತ್ರ :

ಮದುವೆ ಸಮಾರಂಭಕ್ಕೆ 500 ಜನ ಮಾತ್ರ :

ಕರ್ನಾಟಕ ಸರ್ಕಾರವು ಕೊರೋನಾ ರೂಪಾಂತರಿ ಒಮಿಕ್ರಾನ್ ತಡೆಗೆ ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳಲ್ಲಿ ಒಂದಾದ ಮುದುವೆ, ವಿವಿಧ ಸಮಾರಂಭಗಳಿಗೆ 500 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಎರಡು ಡೋಸ್ ಲಸಿಕೆ ಕಡ್ಡಾಯ :

ಎರಡು ಡೋಸ್ ಲಸಿಕೆ ಕಡ್ಡಾಯ :

ಕೊರೋನಾ ರೂಪಾಂತರಿ ಒಮಿಕ್ರಾನ್ ತಡೆಗಾಗಿ ಚಿತ್ರಮಂದಿರ ಮತ್ತು ಮಾಲ್ ಗಳಿಗೆ ತೆರಳುವ ಮಂದಿಗಳು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರಬೇಕು ಹಾಗು ಶಾಲೆಗಗಳಿಗ ಮಕ್ಕಳನ್ನು ಬಿಡಲು ತೆರಳುವ ಪೋಷಕರು ಕೂಡ ಎರಡು ಡೋಸ್ ಲಸಿಕೆ ಪಡೆದಿರಬೇಕು ಎನ್ನುವ ನಿಯಮ ಜಾರಿ ಮಾಡಲಾಗಿದೆ.

ಶಾಲಾ ಕಾಲೇಜುಗಳ ಕಾರ್ಯಕ್ರಮಗಳು ಮುಂದೂಡಿಕೆ :

ಶಾಲಾ ಕಾಲೇಜುಗಳ ಕಾರ್ಯಕ್ರಮಗಳು ಮುಂದೂಡಿಕೆ :

ಕೊರೋನಾ ರೂಪಾಂತರಿ ಒಮಿಕ್ರಾನ್ ತಡೆಗೆ ಜಾರಿಗೊಳಿಸಿರುವ ಹೊಸ ನಿರ್ದೇಶನದ ಅನುಸಾರ ಶಾಲಾ ಕಾಲೇಜುಗಳಲ್ಲಿನ ಸಭೆ, ಸಮಾರಂಭಗಳು ಜನವರಿ 15ರ ವರೆಗೆ ಮುಂದೂಡಲಾಗುವುದು ಎಂದು ಕಂದಾಯ ಕಾರ್ಯದರ್ಶಿ ಆರ್ ಅಶೋಕ್ ಕುಮಾರ್ ಹೇಳಿದ್ದಾರೆ.

ಒಮಿಕ್ರಾನ್ ಸೋಂಕು ಪ್ರಕರಣ :

ಒಮಿಕ್ರಾನ್ ಸೋಂಕು ಪ್ರಕರಣ :

ಈ ಹಿಂದೆ ರಾಜ್ಯದಲ್ಲಿ 66 ವರ್ಷ ಮತ್ತು 46 ವರ್ಷ ವಯಸ್ಸಿನ ಇಬ್ಬರು ರೋಗಿಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದವು.

ಮೂಲಗಳ ಪ್ರಕಾರ 66 ವರ್ಷ ವಯಸ್ಸಿನವರು ದಕ್ಷಿಣ ಆಫ್ರಿಕಾ ಪ್ರವಾಸದ ಇತಿಹಾಸ ಹೊಂದಿರುವ ವಿದೇಶಿಗರಾಗಿದ್ದಾರೆ ಮತ್ತು 46 ವರ್ಷ ವಯಸ್ಸಿನವರು ಬೆಂಗಳೂರಿನಲ್ಲಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Karnataka Government postpones all events in education institutions till january 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X