Swami Vivekananda Speech : ಸ್ವಾಮಿವಿವೇಕಾನಂದರ ಸುಪ್ರಸಿದ್ಧ ಭಾಷಣಕ್ಕೆ ಇಂದಿಗೆ 127 ವರ್ಷಗಳ ಸಂಭ್ರಮ

ಸ್ವಾಮಿವಿವೇಕಾನಂದರ ಸುಪ್ರಸಿದ್ದ ಚಿಕಾಗೋ ಭಾಷಣ ಇಂದಿಗೆ 127 ವರ್ಷಗಳು ಪೂರೈಸಿವೆ. ಸ್ವಾಮಿವಿವೇಕಾನಂದರು 1893ರಲ್ಲಿ ಅಮೇರಿಕಾದ ಶಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಸ್ಮರಿಸುವಂತದ್ದು. ಭಾಷಣ ಮಾಡುವಾಗ ಅಮೇರಿಕಾದ ಸಹೋದರ ಮತ್ತು ಸಹೋದರಿಯರು ಎಂದು ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಇದು ವಿಶ್ವದೆಲ್ಲೆಡೆ ಸಂಚಲನ ಮೂಡಿಸಿತ್ತು. ಬನ್ನಿ ಶಿಕಾಗೋ ಭಾಷಣದ ಸಾರವನ್ನು ಒಮ್ಮೆ ನೋಡೋಣ.

 

ಸ್ವಾಮಿ ವಿವೇಕಾನಂದರ ನಿಜವಾದ ಹೆಸರು ನರೇಂದ್ರನಾಥ ದತ್ತ, ಸ್ವಾಮಿ ವಿವೇಕಾನಂದರು ಜನಿಸಿದ್ದು 12 ಜನವರಿ 1863 ರಂದು ಕೋಲ್ಕತ್ತಾದಲ್ಲಿ. ಸ್ವಾಮಿ ವಿವೇಕಾನಂದರ ತಾಯಿಯ ಹೆಸರು ಭುವನೇಶ್ವರಿ ದೇವಿ ಮತ್ತು ತಂದೆಯ ಹೆಸರು ವಿಶ್ವನಾಥ ದತ್ತ. ಸ್ವಾಮಿ ವಿವೇಕಾನಂದರ ಗುರುಗಳ ಹೆಸರು ರಾಮಕೃಷ್ಣ. ಸ್ವಾಮಿ ವಿವೇಕಾನಂದರ ಸಹೋದರನ ಹೆಸರು ಭೂಪೇಂದ್ರನಾಥ ದತ್ತ. ಸ್ವಾಮಿ ವಿವೇಕಾನಂದರು 4 ಜುಲೈ 1902ರಂದು ಬೇಲೂರು ಮಠ, ಹೌರಾದಲ್ಲಿ ನಿಧನರಾದರು.

ಸ್ವಾಮಿ ವಿವೇಕಾನಂದರು 19ನೇ ಶತಮಾನದ ಅತೀಂದ್ರಿಯ ರಾಮಕೃಷ್ಣರ ಮುಖ್ಯ ಶಿಷ್ಯ ಮತ್ತು ರಾಮಕೃಷ್ಣ ಮಿಷನ್ ಸ್ಥಾಪಕರು. ಪಶ್ಚಿಮದಲ್ಲಿ ವೇದಾಂತ ಮತ್ತು ಯೋಗದ ಪರಿಚಯದಲ್ಲಿ ಸ್ವಾಮಿ ವಿವೇಕಾನಂದರನ್ನು ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿದೆ ಮತ್ತು ಹಿಂದೂ ಧರ್ಮವನ್ನು ವಿಶ್ವ ಧರ್ಮವಾಗಿ ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

 
ಚಿಕಾಗೋ ಭಾಷಣಕ್ಕೆ ಇಂದಿಗೆ 127 ವರ್ಷಗಳ ಸಂಭ್ರಮ

ಅಮೆರಿಕದ ಸಹೋದರಿ ಮತ್ತು ಸಹೋದರರೇ,

ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳನ್ನು ಸಲ್ಲಿಸಲು ಪ್ರಯತ್ನಿಸುರುವ ಈ ಸಮಯದಲ್ಲಿ ನನ್ನ ಹೃದಯ ಹೆಚ್ಚು ಸಂತೋಷದಿಂದ ತುಂಬಿ ತುಳುಕುತ್ತಿದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸನ್ಯಾಸಿಗಳ ಸಂಘದ ಪರವಾಗಿ ನಿಮಗೆ ಧನ್ಯವಾದಗಳನ್ನುಕೋರುತ್ತೇನೆ. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ವಂದನೆಗಳನ್ನು ಅರ್ಪಿಸುತ್ತೇನೆ. ಹಿಂದೂ ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯಾನುಕೋಟಿ ಜನರ ಪರವಾಗಿ ನಿಮಗೆ ವಂದನೆಗಳನ್ನು ಸಲ್ಲಿಸುತ್ತೇನೆ.

ಇದೇ ವೇದಿಕೆಯ ಮೇಲೆ ಕೆಲವು ಭಾಷಣಕಾರರು, ಪೂರ್ವ ದೇಶಗಳಿಂದ ಬಂದಿರುವ ಪ್ರತಿನಿಧಿಗಳು ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿಗೆ ಒಯ್ಯುವ ಗೌರವಕ್ಕೆ ಪಾತ್ರರಾಗುವವರು ಅವರಿಗೂ ನಾನು ವಂದನೆಗಳನ್ನು ಅರ್ಪಿಸುತ್ತೇನೆ. ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನೂ ಜನತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಯಾವ ವರ್ಷ ರೋಮನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳ ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು. ಅವರಿಗೆ ಆಶ್ರಯ ನೀಡಿದ ದೇಶದವನು ನಾನು ಎಂಬ ಹೆಮ್ಮೆ ನನ್ನದು ಝೊರತೂಷ್ಟ್ರ ರಾಷ್ಟ್ರ ನಿರಾಶ್ರಿತರಿಗೆ ಆಶ್ರಯ ನೀಡಿ ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಸೋದರರೆ, ಬಾಲ್ಯದಿಂದಲೂ ನಾನು ನೆನಪಿಸಿಕೊಂಡ ಒಂದು ಸ್ತೋತ್ರದ ಕೆಲವು ಸಾಲುಗಳನ್ನು ನಾನು ನಿಮ್ಮ ಮುಂದೆ ಹೇಳುತ್ತೆನೆ. "ಬೇರೆ ಬೇರೆ ಕಡೆಗಳಲ್ಲಿ ಹುಟ್ಟೈದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವಾನ್ ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ ನೇರವಾಗಿಯೋ ವಕ್ರವಾಗಿಯೋ ಏರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವೂ ನಿನ್ನೆದೆಗೆ ಕರೆದೊಯ್ಯುತ್ತವೆ".

"ಯಾರೇ ಆಗಲಿ, ಯಾವುದೇ ರೂಪದಲ್ಲೇ ಆಗಲಿ ನಾನು ಅವರನ್ನು ಸ್ವೀಕರಿಸುತ್ತೇನೆ. ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿಬಂದು ನನ್ನನ್ನೇ ಸೇರಲು ಪ್ರಯತ್ನಿಸುವ ಅನೇಕರಿದ್ದಾರೆ" ಎಂಬ ಗೀತೆಯ ಆದ್ಭುತ ತತ್ತ್ವದ ಸಥ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು. ಸಂಕುಚಿತ ಪಂಥಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಇವು ಈ ಸುಂದರ ಪೃಥ್ವಿಯನ್ನು ಬಹುಕಾಲದಿಂದ ಬಾಧಿಸುತ್ತಿವೆ. ಇವು ಈ ಭುಮಿಯನ್ನು ಹಿಂಸೆಯಿಂದ ತುಂಬಿಸಿವೆ , ಮತ್ತೆ ಮತ್ತೆ ನರ ರಕ್ತದಿಂದ ಮುಳುಗಿಸಿವೆ. ನಾಗರಿಕತೆಯನ್ನು ನಾಶಗೊಳಿಸಿವೆ, ರಾಷ್ಟ್ರರಾಷ್ಟ್ರಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಈ ಭಯಂಕರ (ಧರ್ಮಾಂಧತೆಯ) ರಾಕ್ಷಸರು ಇಲ್ಲದೆಯೇ ಇದ್ದಿದ್ದರೆ ಮಾನವ ಸಮಾಜ ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಮುಂದುವರಿದಿರುತ್ತಿತ್ತು. ಈ ಸಮಾವೇಶದ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಬಾರಿಸಿದ ಗಂಟೆಯು ಎಲ್ಲಾ ಮತಾಂಧತೆಯ ಸಾವಿನ ಘಂಟೆಯಾಗಲಿ, ಖಡ್ಗದಿಂದ ಅಥವಾ ಪೆನ್ನಿನಿಂದ ಎಲ್ಲಾ ಕಿರುಕುಳಗಳು ಮತ್ತು ಅದೇ ರೀತಿಯಲ್ಲಿ ಸಾಗುತ್ತಿರುವ ವ್ಯಕ್ತಿಗಳ ನಡುವಿನ ಎಲ್ಲಾ ದಾನವಿಲ್ಲದ ಭಾವನೆಗಳಾಗಲಿ ಎಂದು ನಾನು ಆಶಿಸುತ್ತೇನೆ.

For Quick Alerts
ALLOW NOTIFICATIONS  
For Daily Alerts

English summary
In 1893 at world parliament of religions chicago, Swami vivekananda's chicago speech completed 127 years today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X