ಮೂರರ ಮುಂದೆ‌ ಏಳು ಸೊನ್ನೆ - ಕರ್ವಾಲೋ ಕಾದಂಬರಿ ಆಧಾರಿತ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮ

ನಮ್ಮ ನಾಡಿನ ಹೆಸರಾಂತ ಸಾಹಿತಿಗಳಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 80ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿಗಾಗಿ (08-ಸೆಪ್ಟೆಂಬರ್-1938) "ಪೂರ್ಣಚಂದ್ರ ತೇಜಸ್ವಿ Poornachandra Tejaswi" (www.facebook.com/PCTejaswi) ಫೇಸ್‌ಬುಕ್ ಪುಟದವರು "ಮೂರರ ಮುಂದೆ‌ ಏಳು ಸೊನ್ನೆ" ಕರ್ವಾಲೋ ಕಾದಂಬರಿ ಆಧಾರಿತ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.

ಮೂರರ ಮುಂದೆ‌ ಏಳು ಸೊನ್ನೆ - ಕರ್ವಾಲೋ ಕಾದಂಬರಿ ಆಧಾರಿತ ಆನ್‌ಲೈನ್ ರಸಪ್ರಶ್ನೆ  ಕಾರ್ಯಕ್ರಮ

 

1980ರಲ್ಲಿ ಮೊದಲ ಮುದ್ರಣ ಕಂಡ "ಕರ್ವಾಲೊ" ಕಾದಂಬರಿ ಇಡೀ ಕನ್ನಡ ಸಾಹಿತ್ಯದಲ್ಲೇ ಒಂದು ವಿಶೇಷವಾದ ಕಾದಂಬರಿ. ಅದರಲ್ಲಿರುವ ಒಂದೊಂದು ಪಾತ್ರಗಳು ಓದುಗರ‌ ನಡುವೆ ಬೆರೆತು ನಮ್ಮ ನಡುವೆಯೇ ನಿತ್ಯವೂ ಸುಳಿದಾಡುವ ಪಾತ್ರಗಳಂತಾಗಿವೆ. ಇಲ್ಲಿ ಮಂದಣ್ಣ, ಕರ್ವಾಲೊ, ಬಿರಿಯಾನಿ ಕರಿಯಪ್ಪ, ಪ್ಯಾರ, ನಾರ್ವೆ ರಾಮಯ್ಯ, ಪ್ರಭಾಕರ, ಕಿವಿ, ಲಕ್ಷ್ಮಣ ಎಲ್ಲರೂ ವಿಶೇಷ. ಜೀವ ವಿಕಾಸದಲ್ಲಿ "ಮೂರರ ಮುಂದೆ ಏಳು ಸೊನ್ನೆ" ಹಾಕಿದಾಗ ಆಗುವಷ್ಟು ವರ್ಷಗಳ ಹಿಂದಿನಿಂದಲೂ ಬದುಕಿ ಬರುತ್ತಿರುವ ಹಾರುವ ಓತಿಯನ್ನ ಹುಡುಕಿ ಹೋಗುವ ಈ ಪಾತ್ರಗಳನ್ನ ತೇಜಸ್ವಿಯವರು ಅದ್ಭುತವಾಗಿ‌ ಚಿತ್ರಿಸಿದ್ದಾರೆ.

ಕರ್ವಾಲೊ ಜೊತೆಗೆ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕಿರಗೂರಿನ ಗಯ್ಯಾಳಿಗಳು, ತಬರನ ಕತೆ, ನಿಗೂಢ ಮನುಷ್ಯರು, ಅಣ್ಣನ ನೆನಪು, ಮಾಯಾಲೋಕ ಇನ್ನೂ ಅನೇಕ ಕಾದಂಬರಿಗಳನ್ನ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡುವುದರ ಜೊತೆಗೆ ಕನ್ನಡ ಭಾಷೆ, ಕರ್ನಾಟಕ, ಪರಿಸರ, ರಾಜಕೀಯ, ರೈತ ಹೋರಾಟಗಳ ಬಗ್ಗೆ ಲೇಖನಗಳನ್ನ ಬರೆದು ಕನ್ನಡ ನಾಡಿನ ಜನರಲ್ಲಿ ಮೊದಲಿಂದಲೂ ಅರಿವು ಮೂಡಿಸುತ್ತಾ ಬಂದ ತೇಜಸ್ವಿಯವರ ಬರಹಗಳು ಹಲವಾರು ಜನರ ಮೇಲೆ ಪ್ರಭಾವ ಬೀರಿ ಹೊಸ ಚಿಂತನೆಗಳಿಗೆ ದಾರಿ‌ಮಾಡಿಕೊಟ್ಟಿದೆ.

ಸೆಪ್ಟೆಂಬರ್ 8, 2018 ಕ್ಕೆ‌ ಅವರ 80ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುವ ಮತ್ತು ಈ ಸಂದರ್ಭದಲ್ಲಿ ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳುವ ಸಲುವಾಗಿ ಆನ್ಲೈನ್ ‌ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೀವು ಇರುವಲ್ಲಿಯೆ ಕುಳಿತು ಮೊಬೈಲ್, ಲ್ಯಾಪ್ ಟ್ಯಾಪ್, ಕಂಪ್ಯೂಟರ್ ಬಳಸಿ ಕ್ವಿಜ್ ತೆಗೆದುಕೊಳ್ಳಬಹುದು.

ದಿನಾಂಕ: 05-ಸೆಪ್ಟೆಂಬರ್-2018, ಬುಧವಾರ

ಸಮಯ: ಸಂಜೆ 4 ರಿಂದ 4.30 ರವರೆಗೆ

ಆನ್ಲೈನ್ ರಸಪ್ರಶ್ನೆಯ ಲಿಂಕನ್ನು ಸೆಪ್ಟೆಂಬರ್ 5 ರಂದು ಸಂಜೆ 3.30 ಕ್ಕೆ www.facebook.com/PCTejaswi ಪುಟ ಮತ್ತು

 

https://nammatejaswi.wordpress.com ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ನಂತರ ಸರಿಯಾಗಿ 4 ಗಂಟೆಗೆ ಲಿಂಕ್ ಸಕ್ರಿಯವಾಗಿ‌ ಕ್ವಿಜ್ ಪ್ರಾರಂಭವಾಗುತ್ತದೆ‌. ರಸಪ್ರಶ್ನೆಯಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಗುವುದು.

ಕ್ವಿಜ್ ಬಗ್ಗೆ:

 • 1. ಒಟ್ಟು ಪ್ರಶ್ನೆಗಳು‌ - 30 (ಕರ್ವಾಲೋ ಕಾದಂಬರಿಯಿಂದ 20 ಪ್ರಶ್ನೆಗಳು ಮತ್ತು ತೇಜಸ್ವಿ ಜೀವನಕ್ಕೆ ಸಂಬಂಧಿಸಿದ ‌10 ಪ್ರಶ್ನೆಗಳು). ಒಟ್ಟು ಅಂಕಗಳು 35.
 • 2. ‎ಸಮಯ: 30 ನಿಮಿಷಗಳು
 • 3. ಈ ಕ್ವಿಜ್ ಸಂಪೂರ್ಣ ಆನ್ಲೈಲ್ ಆಗಿದ್ದು ಒಬ್ಬರಿಗೆ ಒಂದು ಬಾರಿ‌ ಮಾತ್ರ ಕ್ವಿಜ್‌ನಲ್ಲಿ ಭಾಗವಹಿಸಲು‌ ಅವಕಾಶವಿರುತ್ತದೆ.
 • 4. ನೀವು ಇರುವಲ್ಲಿಯೆ ಕುಳಿತು ಮೊಬೈಲ್, ಲ್ಯಾಪ್ ಟ್ಯಾಪ್, ಕಂಪ್ಯೂಟರ್ ಬಳಸಿ ಕ್ವಿಜ್ ತೆಗೆದುಕೊಳ್ಳಬಹುದು.
 • 5. ‎ಪ್ರಶ್ನೆಗಳು ಕನ್ನಡದಲ್ಲಿ ಮಾತ್ರ ಇರುತ್ತವೆ. (ಉತ್ತರ ಬರೆಯುವಾಗ ನೀವು ಕನ್ನಡ ಅಥವಾ ಇಂಗ್ಲೀಷ್ ‌ಲಿಪಿ ಬಳಸಬಹುದು).

ಕ್ವಿಜ್‌ನಲ್ಲಿ ಭಾಗವಹಿಸುವುದು ಹೇಗೆ?

 • 1. ನಿಮ್ಮ ಮೊಬೈಲ್ / ಕಂಪ್ಯೂಟರ್ / ಲ್ಯಾಪ್‌ಟಾಪ್‌ನಲ್ಲಿ ಬ್ರೌಸರ್ (Browser) ತೆರೆಯಿರಿ
 • 2. ಬುಧವಾರ ಸಂಜೆ 3.30ಕ್ಕೆ‌ ಸರಿಯಾಗಿ ‎www.facebook.com/PCTejaswi ಮತ್ತು https://nammatejaswi.wordpress.com ನಾವು‌ ಕ್ವಿಜ್ ಲಿಂಕ್ ಹಾಕಿರುತ್ತೇವೆ. ಅದರ‌ ಮೇಲೆ ಕ್ಲಿಕ್ ಮಾಡಿ. ಆ ಸಮಯದಲ್ಲಿ ನಿಮಗೆ "ರಸಪ್ರಶ್ನೆ 4 ಗಂಟೆಗೆ ಪ್ರಾರಂಭವಾಗಲಿದೆ. ದಯಮಾಡಿ ಕಾಯಿರಿ" ಎಂಬ ಸಂದೇಶ ಕಾಣಿಸುತ್ತದೆ.
 • 3. ‎ಸಂಜೆ 4 ಗಂಟೆಗೆ ಸರಿಯಾಗಿ‌ ಲಿಂಕ್ ಸಕ್ರಿಯವಾಗಿ ಕ್ವಿಜ್ ಪ್ರಾರಂಭವಾಗುತ್ತದೆ.
 • 4. ಕ್ವಿಜ್ ಫಾರ್ಮ್‌ನಲ್ಲಿ ಮೊದಲು ನಿಮ್ಮ ವಿವರ (ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ) ತುಂಬಬೇಕು.
 • 5. ‎ನಂತರ "Next" ಮೇಲೆ ಕ್ಲಿಕ್ ಮಾಡಿದ ಮೇಲೆ ಪ್ರಶ್ನೆಗಳು ಕಾಣಿಸುತ್ತವೆ. ಪ್ರತೀ ಪ್ರಶ್ನೆಯ ಬಲಭಾಗದಲ್ಲಿ ಹಾಕಲಾಗಿರುತ್ತದೆ. ಮೊದಲ ಸೆಕ್ಷನ್ ನಲ್ಲಿ 20 ಪ್ರಶ್ನೆಗಳಗೆ ಉತ್ತರಿಸಿದ ನಂತರ ಮತ್ತೆ "Next" ಮೇಲೆ‌ ಕ್ಲಿಕ್ ಮಾಡಿ.
 • 6. ಎರಡನೇ ಸೆಕ್ಷನ್ ನಲ್ಲಿರುವ 10 ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮರೆಯದೆ "Submit" ಮೇಲೆ ಕ್ಲಿಕ್ ಮಾಡಿ. ಕೊನೆಯಲ್ಲಿ ನಿಮಗೆ "ಧನ್ಯವಾದ" ತಿಳಿಸುವ ಸಂದೇಶ ಕಾಣಿಸುತ್ತದೆ. ಅಲ್ಲಿಗೆ ನಿಮ್ಮ ಕೆಲಸ ಮುಗಿದಂತೆ, ಕ್ವಿಜ್ ನಮಗೆ ತಲುಪುತ್ತದೆ.

ಹೆಚ್ವಿನ ಮಾಹಿತಿಗೆ ಸಂಪರ್ಕಿಸಿ:

9986819255‬ / 9980296974 ‪

www.facebook.com/PCTejaswi

https://nammatejaswi.wordpress.com

kppoornachandratejaswi@gmail.com

For Quick Alerts
ALLOW NOTIFICATIONS  
For Daily Alerts

English summary
Poorna Chandra Thejaswi Facebook Page conducting a quize competition about karwalo novel. This competition held under murara munde elu sonne title. this quize link will open today evening at four o clock.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more