ಎಲ್ಲ ಸರ್ಕಾರಿ ಶಾಲೆಗಳಲ್ಲಿ 'ಆಪರೇಷನ್‌ ಡಿಜಿಟಲ್‌ ಬೋರ್ಡ್‌'

Posted By:

ದೇಶದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಲು ಸ್ಮಾರ್ಟ್‌ ಬೋರ್ಡ್‌ಗಳನ್ನು ಅಳವಡಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

ಆನ್‌ಲೈನ್‌ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್‌ಗಳ ಶಿಕ್ಷಣಕ್ಕೆ ಅನುಮತಿ

'ಆಪರೇಷನ್‌ ಡಿಜಿಟಲ್‌ ಬೋರ್ಡ್‌' ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಿವೆ' ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಯುಪಿಎಸ್‌ಸಿ: 23 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

 'ಆಪರೇಷನ್‌ ಡಿಜಿಟಲ್‌ ಬೋರ್ಡ್‌'

ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ ಸೇರಿದಂತೆ ಮಾಹಿತಿ- ಸಂವಹನ- ತಂತ್ರಜ್ಞಾನದ ಇನ್ನಿತರ ಸಲಕರಣೆಗಳನ್ನು ನೀಡುವ ಸಚಿವಾಲಯದ ನಿರ್ಧಾರಕ್ಕೆ ಕೇಂದ್ರದ ಶಿಕ್ಷಣ ಸಲಹಾ ಮಂಡಳಿಯು (ಸಿಎಬಿಇ) ಒಪ್ಪಿಗೆ ನೀಡಿದ್ದು, ಕಾರ್ಪೊರೇಟ್ ಸಂಸ್ಥೆಗಳ ನೆರವಿನಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

'ಶಿಕ್ಷಣದ ಗುಣಮಟ್ಟ ವೃದ್ಧಿಯಾಗಲು ಇದು ನೆರವಾಗಲಿದೆ. ಡಿಜಿಟಲ್ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಚಿತ್ರ ಸಹಿತ ಸುಲಭವಾಗಿ ಅರ್ಥವಾಗುವ ರೀತಿ ಶಿಕ್ಷಣ ಒದಗಿಸಬಹುದು. ಶ್ರವಣ ಮಾಧ್ಯಮಕ್ಕಿಂತ ದೃಶ್ಯ-ಶ್ರವಣ ಮಾಧ್ಯಮದಿಂದ ಮಕ್ಕಳ ಕಲಿಕೆಯು ಪರಿಣಾಮಕಾರಿಯಾಗುತ್ತದೆ. ಆಸಕ್ತಿಕರ ವಿಧಾನಗಳಿಂದ ಮಕ್ಕಳಿಗೆ ಎಲ್ಲ ರೀತಿಯ ಮಾಹಿತಿ ಒದಗಿಸುವುದು ಇದರ ಉದ್ದೇಶ. ಇದರಿಂದ ಶಿಕ್ಷಕರ ಹೊಣೆಗಾರಿಕೆ ಹೆಚ್ಚಾಗಲಿದೆ' ಎಂದು ವಿವರಣೆ ನೀಡಿದ್ದಾರೆ.

ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿಯಲ್ಲಿ ಇಂಡಿಯಾ ಐಎನ್‌ಸಿ ಕಂಪನಿಯ ನೆರವು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದರ ಅನುಷ್ಠಾನಕ್ಕೆ, ಸಮುದಾಯ ಸಹಭಾಗಿತ್ವದ ಮೂಲಕವೂ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

English summary
The Centre and state governments had resolved to launch "operation digital board" and also to initiate a scheme to identify out of school children from September 2018.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia