ಕೆಪಿಎಸ್ಸಿ: ಹತ್ತು ಲಕ್ಷ ದಾಟಿದ ಅರ್ಜಿಗಳ ಸಂಖ್ಯೆ, ಇನ್ನು 1000 ಹುದ್ದೆಗಳಿಗೆ ಅವಕಾಶ!

Posted By:

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳಿಗೆ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಮತ್ತಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಬಂದಿದೆ.

ಅರ್ಜಿಗಳ ಪರಿಶೀಲನೆ ಸಂಪೂರ್ಣ ಮುಗಿದಿದ್ದು ಇನ್ನು ಸಾವಿರ ಹುದ್ದೆಗಳಿಗೆ ಪ್ರಸ್ತಾವನೆ ಬಂದಿದೆ. ವಿವಿಧ ಇಲಾಖೆಗಳಿಂದ ಒಟ್ಟು 500 ಎಫ್‌ಡಿಎ ಮತ್ತು 400 ಎಸ್‌ಡಿಎ ಹುದ್ದೆಗಳನ್ನು ತುಂಬುವಂತೆ ಪ್ರಸ್ತಾವನೆ ಬಂದಿದ್ದು, ಇದೆ ತಿಂಗಳಲ್ಲಿ ಮತ್ತೊಂದು ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ 2,000 ಖಾಲಿ ಹುದ್ದೆಗಳಿಗೆ ಬರೋಬ್ಬರಿ 15 ಲಕ್ಷ ಅರ್ಜಿಗಳು ಸಲ್ಲಿಕೆಯಾಗಬಹುದೆಂದು ಲೆಕ್ಕ ಅಂದಾಜಿಸಲಾಗಿದೆ.

ಎಫ್ ಡಿ ಎ, ಎಸ್ ಡಿ ಎ ಪರೀಕ್ಷೆ ಪಾಸ್ ಆಗಲು ಸುಲಭ ವಿಧಾನ

ಕೆಪಿಎಸ್ಸಿ: 1058 ಹುದ್ದೆಗಳಿಗೆ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳು!

507 ಎಫ್‌ಡಿಎ ಮತ್ತು 551 ಎಸ್‌ಡಿಎ ಸೇರಿ ಒಟ್ಟು 1058 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾಯಿಸಲಾಗಿತ್ತು. ಈವರೆಗೂ 10,62,739 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ಪೈಕಿ 10,16,959 ಅರ್ಹ ಮತ್ತು 45,780 ಅನರ್ಹ ಅರ್ಜಿಗಳಾಗಿವೆ.

ಎಫ್‌ಡಿಎ ಹುದ್ದೆಗೆ ಒಟ್ಟು 4,26,730 ಅರ್ಜಿಗಳು ಸಲ್ಲಿಕೆಯಾಗಿದ್ದು. ಅದರಲ್ಲಿ 4,09,271 ಮಾತ್ರ ಅರ್ಹ ಅರ್ಜಿಗಳಾಗಿವೆ. ಉಳಿದ 17,459 ಅರ್ಜಿಗಳು ಅನರ್ಹಗೊಂಡಿವೆ.

ಎಸ್‌ಡಿಎ ಹುದ್ದೆಗೆ ಒಟ್ಟು 6,36,009 ಅರ್ಜಿಗಳು ಸಲ್ಲಿಕೆಯಾಗಿದ್ದು. ಅದರಲ್ಲಿ 6,07,688 ಮಾತ್ರ ಅರ್ಹ ಅರ್ಜಿಗಳಾಗಿವೆ. ಉಳಿದ 28,321 ಅರ್ಜಿಗಳು ಅನರ್ಹಗೊಂಡಿವೆ.

ಕೆಪಿಎಸ್ಸಿ: ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಹೇಗಿರುತ್ತೆ ಗೊತ್ತಾ?

ಶುಲ್ಕ ಕಟ್ಟದ ಕಾರಣ ಅರ್ಜಿಗಳನ್ನು ಅನರ್ಹಗೊಳಿಸಿದ್ದು, ಅರ್ಜಿಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಇದೀಗ, ಮತ್ತೆ ವಿವಿಧ ಇಲಾಖೆಗಳಿಂದ ಒಟ್ಟು 500 ಎಫ್‌ಡಿಎ ಮತ್ತು 400 ಎಸ್‌ಡಿಎ ಹುದ್ದೆಗಳನ್ನು ತುಂಬುವಂತೆ ಪ್ರಸ್ತಾವನೆ ಬಂದಿದೆ. 500ಕ್ಕೂ ಹೆಚ್ಚು ಹುದ್ದೆಗಳಿಗೆ ಪ್ರಸ್ತಾವನೆ ಬಂದಾಗ ಮತ್ತೊಮ್ಮೆ ತಿದ್ದುಪಡಿ ಅಧಿಸೂಚನೆ ಹೊರಡಿಸಲು ಅವಕಾಶವಿದೆ. ಈ ಹಿಂದೆ ಅರ್ಜಿ ಆಹ್ವಾನಿಸಿದಾಗ ಹುದ್ದೆಗಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಹಲವರು ಅರ್ಜಿ ಸಲ್ಲಿಸದೇ ಇರುವ ಸಾಧ್ಯತೆಯೂ ಇದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

ಈ ಹೆಚ್ಚುವರಿ ಹುದ್ದೆಗಳನ್ನೂ ಸೇರಿಸಿ ಇದೇ 22 ಅಥವಾ 23ರಂದು ಮತ್ತೊಂದು ಅಧಿಸೂಚನೆ ಹೊರಡಿಸಿ, ಉದ್ಯೋಗಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು 15 ದಿನಗಳ ಕಾಲವಕಾಶ ನೀಡಲಾಗುವುದು. ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಕಟ್ಟದ ಕಾರಣಕ್ಕೆ ಅನರ್ಹಗೊಂಡಿರುವ ಅಭ್ಯರ್ಥಿಗಳಿಗೆ ಈ ತಿದ್ದುಪಡಿ ಅಧಿಸೂಚನೆಯ ಮೂಲಕ ಶುಲ್ಕ ತುಂಬಲು ಮತ್ತೊಂದು ಅವಕಾಶ ನೀಡಲಾಗುವುದು.

ಮುಂದಿನ ವರ್ಷ ಜನವರಿ ಅಂತ್ಯ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

English summary
Over 10 lakh applications have been submitted to the post of FDA and SDA of the KPSC.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia