ಪ್ರತಿಷ್ಠಿತ ಆಕ್ಸ್​ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ 70 ಭಾರತೀಯ ಪದಗಳು

Posted By:

ಪ್ರತಿಷ್ಠಿತ ಆಕ್ಸ್​ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ (ಒಇಡಿ)ಅಣ್ಣ, ಅಚ್ಛಾ, ಬಾಪು, ಬಡಾ ದಿನ್, ಬಚ್ಚಾ, ಸೂರ್ಯ ನಮಸ್ಕಾರ ಸೇರಿದಂತೆ ಭಾರತೀಯರ ಬಳಸುವ 70 ಪದಗಳನ್ನು ಸೇರಿಸಲಾಗಿದೆ.

ಕನ್ನಡ, ತೆಲುಗು, ತಮಿಳು, ಉರ್ದು, ಹಿಂದಿ ಮತ್ತು ಗುಜರಾತಿ ಭಾಷೆಗಳ ದಿನನಿತ್ಯ ಬಳಕೆಯ ಹೊಸ ಪದಗಳನ್ನು ಕಳೆದ ತಿಂಗಳು ನಿಘಂಟಿಗೆ ಸೇರಿಸಲಾಗಿದೆ.

ಆಕ್ಸ್​ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ಭಾರತೀಯ ಪದಗಳು

ವಿವಿಧ ಭಾಷೆಗಳಲ್ಲಿ ಒಂದೇ ಪದ ಬೇರೆ ಅರ್ಥದಿಂದ ಬಳಕೆಯಲ್ಲಿರುವುದು ನಿಘಂಟು ಸಂಶೋಧಕರ ಗಮನಕ್ಕೆ ಬಂದಿತ್ತು. ಹಾಗಾಗಿ ಭಾರತೀಯರ ಬಳಸುವ 70 ಪದಗಳನ್ನು ಸೇರಿಸಿದ್ದೇವೆ ಎಂದು ಒಇಡಿ ವರ್ಲ್ಡ್ ಇಂಗ್ಲಿಷ್ ಸಂಪಾದಕ ಡ್ಯಾನಿಕಾ ಸಲಾಝುರ್ ಹೇಳಿದ್ದಾರೆ.

ವಯಸ್ಸು, ಲಿಂಗ ಮತ್ತು ಕುಟುಂಬದಲ್ಲಿನ ಸ್ಥಾನ ಆಧರಿಸಿ ಭಾರತೀಯ ಭಾಷೆಗಳಲ್ಲಿ ಒಂದೇ ಪದಕ್ಕೆ ವಿವಿಧ ಅರ್ಥಗಳನ್ನು ನೀಡಲಾಗಿದೆ. ಇಂಥ ಪದಗಳಿಗೆ ಸಮನಾರ್ಥಕ ಇಂಗ್ಲಿಷ್ ಪದ ಬಳಕೆ ಕಷ್ಟಸಾಧ್ಯ. ಹಾಗಾಗಿ ಭಾರತೀಯ ಭಾಷೆಗಳ ಪದಗಳನ್ನೆ ಇಂಗ್ಲಿಷ್​ನಲ್ಲಿ ಬರೆದು ನೀಡಿದ್ದೇವೆ' ಎಂದು ಡ್ಯಾನಿಕಾ ತಿಳಿಸಿದ್ದಾರೆ.

ಹೊಸ ಪದ ಸೇರ್ಪಡೆ

ಮಾರ್ಚ್, ಜೂನ್, ಸೆಪ್ಟೆಂಬರ್ ಮತ್ತು ಡಿಸೆಂಬರ್​ನಲ್ಲಿ ಹೊಸ ಪದಗಳ ಸೇರ್ಪಡೆ ಅಭ್ಯಾಸವನ್ನು ಆಕ್ಸ್​ಫರ್ಡ್ ಇಂಗ್ಲಿಷ್ ನಿಘಂಟು ಮುದ್ರಣ ಸಂಸ್ಥೆ 'ಆಕ್ಸ್​ಫರ್ಡ್ ಯೂನಿವರ್ಸಿಟಿ ಪ್ರೆಸ್ ' ಪಾಲಿಸಿಕೊಂಡು ಬಂದಿದೆ. ಕಳೆದ ಸೆಪ್ಟೆಂಬರ್​ನಲ್ಲಿ ನಿಘಂಟಿಗೆ ಸುಮಾರು 1 ಸಾವಿರ ಪದಗಳು, ಭಾವಾರ್ಥಗಳು ಮತ್ತು ಉಪವಿಭಾಗಗಳನ್ನು ಸೇರಿಸಿ ಉನ್ನತೀಕರಿಸಲಾಗಿತ್ತು. ಸುಮಾರು 900 ಭಾರತೀಯರು ಬಳಸುವ ಪದಗಳು ಈಗಾಗಲೇ ಆಕ್ಸ್​ಫರ್ಡ್ ನಿಘಂಟಿನಲ್ಲಿವೆ.

ಪದಗಳ ಆಯ್ಕೆ ಪ್ರಕ್ರಿಯೆ

ಕ್ರೀಡೆ, ರಾಜಕೀಯ, ವ್ಯಾಪಾರ, ಶಿಕ್ಷಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನರು ಬಳಸುವ ಪದಗಳ ಮೇಲೆ ಭಾಷಾ ಪ್ರಯೋಗ ತಜ್ಞರು ನಿಗಾ ಇರಿಸಿರುತ್ತಾರೆ. ಹೆಚ್ಚು ಅಥವಾ ಕಡಿಮೆ ಜನಪ್ರಿಯತೆ, ಪ್ರಾದೇಶಿಕವಾಗಿ ಬಳಕೆ ಪ್ರಮಾಣ ಆಧರಿಸಿ ಸಂಗ್ರಹಾಗಾರದಿಂದ ಪದಗಳನ್ನು ಪುನರಾಯ್ಕೆ ಮಾಡಲಾಗುತ್ತದೆ. ಅದಲ್ಲದೇ ಪ್ರೆಸ್​ನಿಂದ ಭಾಷೆಗಳ ಅಧ್ಯಯನಕ್ಕೆ ರೀಡರ್​ಗಳನ್ನು ನೇಮಿಸಿ ನಿರಂತರ ಪದಗಳ ಬಳಕೆ ಮತ್ತು ಕಡೆಗಣಿಸುವಿಕೆ ಪರಿಶೀಲಿಸಲಾಗುತ್ತದೆ. ಎಂದು ಆಕ್ಸ್​ಫರ್ಡ್ ವಿವಿ ಪ್ರೆಸ್ ಆಯ್ಕೆ ಪ್ರಕ್ರಿಯೆ ಬಹಿರಂಗಪಡಿಸಿದೆ.

ಪ್ರಸ್ತುತ ಆಕ್ಸ್​ಫರ್ಡ್ ವಿವಿ ಪ್ರೆಸ್​ನಲ್ಲಿನ ಪದ ಸಂಗ್ರಹಾಗಾರದಲ್ಲಿ 10 ಶತಕೋಟಿ ನೂತನ ಪದಗಳಿವೆ.

English summary
From endearing words like ‘Abba’ and ‘Anna’ to Indian delicacies like ‘gulab jamun’ and ‘vada’ can now be found in the Oxford English Dictionary (OED).As per the latest list of inclusions, 70 new Indian words from Telugu, Urdu, Tamil, Hindi and Gujarati languages have been added to the dictionary.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia