ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದು, ಪರೀಕ್ಷೆಯ ಬಗೆಗೆ ಇರುವ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳುವ ಸಲುವಾಗಿ ಪ್ರಧಾನಿ ಮೋದಿಯವರೊಂದಿಗೆ ಪರೀಕ್ಷಾ ಪೇ ಚರ್ಚಾ 2020ದಲ್ಲಿ ಪಾಲ್ಗೋಳ್ಳುವ ಅವಕಾಶ.
ಈ ಭಾರಿ ವಿಶೇಷ ಏನಂದ್ರೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಮತ್ತು ಶಿಕ್ಷಕರು ಕೂಡ ಈ ಸಂವಾದದಲ್ಲಿ ಪಾಲ್ಗೊಳ್ಳಬಹುದು. ಹಾಗಿದ್ರೆ ಇನ್ಯಾಕೆ ತಡ ಈ ಕೂಡಲೇ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಿ. ಪರೀಕ್ಷಾ ಪೇ ಚರ್ಚಾ 2020 ಯಾವಾಗ ಎಲ್ಲಿ ನಡೆಯುತ್ತೆ? ಮತ್ತು ಇದಕ್ಕೆ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಪರೀಕ್ಷಾ ಪೇ ಚರ್ಚಾ 2020 ಯಾವಾಗ?:
ಪ್ರಧಾನಿ ನರೇಂದ್ರ ಮೋದಿ ಯೊಂದಿಗಿನ ಮೂರನೇ ಆವೃತ್ತಿಯ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ಇರುವ ಗೊಂದಲ ಮತ್ತು ಆತಂಕಗಳನ್ನು ದೂರ ಮಾಡುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು. ಪರೀಕ್ಷಾ ಪೇ ಚರ್ಚಾ 2020 ಜನವರಿ ತಿಂಗಳ ಮೂರನೇ ವಾರದಲ್ಲಿ ನಡೆಸಲಾಗುತ್ತದೆ.

ಯಾರೆಲ್ಲಾ ರಿಜಿಸ್ಟರ್ ಮಾಡಿಕೊಳ್ಳಬಹುದು?:
ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಹತ್ತರ ಘಟ್ಟಗಳಾದ ಬೋರ್ಡ್ ಪರೀಕ್ಷೆಗಳಲ್ಲಿ ಎದುರಾಗುವ ಗೊಂದಲ ಮತ್ತು ಆತಂಕಗಳ ಬಗೆಗೆ ಚರ್ಚಿಸುವ ಈ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು.

ಆಯ್ಕೆ ಪ್ರಕ್ರಿಯೆ:
ವಿದ್ಯಾರ್ಥಿಗಳಿಗೆ ಕೇಳಲಾಗಿರುವ ವಿಷಯಗಳಿಗೆ ಸಂಬಂಧಪಟ್ಟಂತೆ ಬಂದಂತಹ ಬರಹಗಳನ್ನು ಗಮನಿಸಿ ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳು ಜನವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಬಹುದು.

ರಿಜಿಸ್ಟರ್ ಮಾಡುವುದು ಹೇಗೆ:
ವಿದ್ಯಾರ್ಥಿಯು ಅಧಿಕೃತ ವೆಬ್‌ಸೈಟ್ https://www.mygov.in/task/pariksha-pe-charcha-2020/ ನಲ್ಲಿ ನೀಡಲಾಗಿರುವ 5 ವಿಷಯಗಳಲ್ಲಿ ಯಾವುದಾದರು ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು 1500 ಪದಗಳಿಗೆ ಮೀರದಂತೆ ಬರೆದು ಕಳುಹಿಸಬೇಕು. ಹಾಗೆಯೇ ವಿದ್ಯಾರ್ಥಿಗಳು ಪ್ರಧಾನಿ ಮೋದಿಗೆ ಯಾವುದಾದರು ಪ್ರಶ್ನೆ ಕೇಳಬೇಕೆಂದಿದ್ದಲ್ಲಿ, ಪ್ರಶ್ನೆಯನ್ನು 500 ಪದಗಳಿಗೆ ಮೀರದಂತೆ ಬರೆದು ಡಿಸೆಂಬರ್ 23,2019ರೊಳಗೆ ಸಲ್ಲಿಸಬೇಕಿರುತ್ತದೆ.

ಈ ಐದು ಪ್ರಮುಖ ವಿಷಯಗಳು:
ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಇಲ್ಲಿ ನೀಡಲಾಗಿರುವ ಈ ಐದು ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಮೋದಿಯವರ ಜೊತೆ ಸಂವಾದದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಬಹುದು.
ಸಂವಾದ ನಡೆಸಲಾಗುವ ಐದು ವಿಷಯಗಳು:
1. ಕೃತಜ್ಞತೆ ಎಂಬುದು ಅದ್ಭುತ
2. ನಿಮ್ಮ ಭವಿಷ್ಯ ನಿಮ್ಮ ಆಕಾಂಕ್ಷೆಗಳ ಮೇಲೆ ಅವಲಂಭಿತವಾಗಿರುತ್ತದೆ.
3. ಪರೀಕ್ಷೆಗಳನ್ನು ಪರೀಕ್ಷಿಸಲಾಗುತ್ತದೆ.
4. ನಮ್ಮ ಕರ್ತವ್ಯಗಳು, ನೀವು ತೆಗೆದುಕೊಳ್ಳುವಿಕೆ
5. ಸಮತೋಲನವು ಪ್ರಯೋಜನಕಾರಿ