ಪಿಡಿಒ ಮತ್ತು ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ತಾತ್ಕಾಲಿಕ ಅರ್ಹತಾ ಪಟ್ಟಿ

Posted By:

ಜನವರಿ ತಿಂಗಳಲ್ಲಿ ನಡೆದಿದ್ದ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮತ್ತು ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ

ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ), 809 ಗ್ರಾಮ ಪಂಚಾಯತಿ ಕಾರ್ಯದರ್ಶಿ ಒಟ್ಟು 1624 ಹುದ್ದೆಗಳಿಗೆ 29 ಜನವರಿ 2017 ಭಾನುವಾರದಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಸ್ಪರ್ಧೆ ನಡೆಸಲಾಗಿತ್ತು. 1624 ಹುದ್ದೆಗಳಿಗೆ ಸುಮಾರು 362899 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

 ತಾತ್ಕಾಲಿಕ ಅರ್ಹತಾ ಪಟ್ಟಿ

ಮೆರಿಟ್ ಲಿಸ್ಟ್ ಪಡೆಯುವ ವಿಧಾನ

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ವಿಳಾಶಕ್ಕೆ ಭೇಟಿ ನೀಡಿ
  • ಬಲಭಾಗದಲ್ಲಿ ಕಾಣುವ ಪಿಡಿಒ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಪಿಡಿಒ ಪರೀಕ್ಷೆಗೆ ಸಂಬಂಧಿಸಿದ ಪುಟ ತೆರೆದುಕೊಳ್ಳುವುದು
  • ಆಯ್ಕೆ ಪಟ್ಟಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ಫೈಲ್ ತೆರೆದುಕೊಳ್ಳುವುದು

ಕೀ ಉತ್ತರಗಳು

ಪಿಡಿಒ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳು ಕೂಡ ವೆಬ್ಸೈಟ್ ನಲ್ಲಿ ಲಭ್ಯವಿದ್ದು ಅಭ್ಯರ್ಥಿಗಳು ಗಮನಿಸಬಹುದಾಗಿದೆ.

ಪರೀಕ್ಷೆ ವಿವರ

  • ಮೊದಲ ಪತ್ರಿಕೆ 29 ಜನವರಿ 2017 ರಂದು ಬೆಳಿಗ್ಗೆ 10.30 ರಿಂದ 12.30ರ ವರೆಗೆ  ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್ ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆದಿತ್ತು.
  • ಎರಡನೇ ಪ್ರತಿಕೆ ಮದ್ಯಾಹ್ನ 2.30 ರಿಂದ ಸಂಜೆ 4.30 ರ ವರೆಗೆ 'ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಜ್ಞಾನ- ಕರ್ನಾಟಕ ಗ್ರಾಮ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಹಾಗೂ ನಿಯಮಗಳು ಮತ್ತು ತಿದ್ದುಪಡಿಗಳು' ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಪತ್ರಿಕೆ ಪರೀಕ್ಷೆ ನಡೆದಿದ್ದವು.

ಹೆಚ್ಚಿನ ಮಾಹಿತಿಗಾಗಿ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ kea.kar,nic.in ಗೆ ಭೇಟಿ ನೀಡಿ.

English summary
Panchayath Development Officer (pdo) provisional merit list has been announced

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia