ಪಿಡಿಒ ನೇಮಕಾತಿ: ದಾಖಲೆ ಪರಿಶೀಲನೆ ದಿನಾಂಕ ಮುಂದೂಡಿಕೆ

Posted By:

ಗ್ರಾಮ ಪಂಚಾಯಿತಿ ಅಭಿವೃದ್ದಿ ಹಾಗೂ ಕಾರ್ಯದರ್ಶಿ ಗ್ರೇಡ್-1 ವೃ೦ದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಕಾರ್ಯವನ್ನು ಮುಂದೂಡಲಾಗಿದೆ.

ಅಂತಿಮ ಪಟ್ಟಿಯನ್ನು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಕರ್ನಾಟಕ ನ್ಯಾಯಮಂಡಳಿ ಮಧ್ಯಂತರ ಆದೇಶ ಹಿನ್ನಲೆಯಲ್ಲಿ ದಿನಾಂಕವನ್ನು ಮುಂದೂಡಲಾಗಿದೆ.

ಈ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ದಿನಾಂಕ 16-08-2017ರಿಂದ 19-08-17ರ ವರೆಗೆ ಪರಿಶೀಲನೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ಪಿಡಿಒ ನೇಮಕಾತಿ
ಆದರೆ, ಕರ್ನಾಟಕ ನ್ಯಾಯಮಂಡಳಿ ಮಧ್ಯಂತರ ಆದೇಶ ಹಿನ್ನಲೆಯಲ್ಲಿ ದಾಖಲಾತಿ ಪರಿಶೀಲನೆ ದಿನಾಂಕವನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

815 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು 809 ಗ್ರಾಮ ಪ೦ಚಾಯಿತಿ ಕಾರ್ಯದರ್ಶಿ ಗ್ರೇಡ್‍-1 ಹುದ್ದೆಗಳಿಗೆ 2016 ಸೆಪ್ಟೆಂಬರ್ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜ.29 ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳ ಎರಡು ಪತ್ರಿಕೆಗಳಿಗೆ ಪರೀಕ್ಷೆ ನಡೆಸಿತ್ತು.ವರಾಜ್ಯದ 785 ಕೇಂದ್ರಗಳಲ್ಲಿ ಒಟ್ಟು 3,63,136 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು

ಮೂಲ ದಾಖಲಾತಿ ಪರಿಶೀಲನೆ ದಿನಾಂಕವನ್ನು ಮುಂದೂಡಿರುವ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಈ ಹುದ್ದೆಗಳ ಅಂತಿಮ ಪಟ್ಟಿ ಸೇರಿದಂತೆ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

English summary
The Karnataka Examinations Authority (KEA) postponed of Grama panchayat secretary and Panchayat development officer (PDO) posts eligible candidates document verification date.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia