ಆಯುಷ್ ಪಿಜಿ ಕೋರ್ಸ್-2017: ಮುಂದುವರಿದ ಆನ್ಲೈನ್ ಸೀಟು ಹಂಚಿಕೆ

Posted By:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2017-18 ನೇ ಸಾಲಿನ ಆಯುಷ್ ಪಿಜಿ ಕೋರ್ಸುಗಳ ಮುಂದುವರಿದ ಆನ್ಲೈನ್ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ನವೆಂಬರ್ 17 ರಂದು ಸೀಟು ಹಂಚಿಕೆಯ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅರ್ಹ ಅಭ್ಯರ್ಥಿಗಳು ಸೀಟು ಹಂಚಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಆಯುಷ್ ಪಿಜಿ ಕೋರ್ಸ್ ಸೀಟು ಹಂಚಿಕೆ

ದಾಖಲಾತಿ ಪರಿಶೀಲನೆ ಮಾಡಿಸಿಕೊಂಡಿರುವ ಅಭ್ಯರ್ಥಿಗಳು ಇಚ್ಛೆ/ಆಯ್ಕೆ ದಾಖಲಿಸಲು ಅರ್ಹರಾಗಿದ್ದು, ಈಗಾಗಲೇ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಹಾಗೂ ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿರುವ ಅಭ್ಯರ್ತಿಗಳು ಈ ಸುತ್ತಿನಲ್ಲಿ ಭಾಗವಹಿಸುವಂತಿಲ್ಲ.

ಈ ಹಿಂದೆ ದಾಖಲಿಸಿದ್ದರೂ ಮತ್ತೆ ಹೊಸದಾಗಿ ಆಯ್ಕೆ/ಇಚ್ಛೆ ದಾಖಲಿಸುವಂತೆ ಸೂಚನೆಯಲ್ಲಿ ತಿಳಿಸಲಾಗಿದೆ.

ವೇಳಾಪಟ್ಟಿ

  • ಅರ್ಹ ಅಭ್ಯರ್ಥಿಗಳು ದಾಖಲಾತಿ ಸಲ್ಲಿಸಲು ನವೆಂಬರ್ 17 ಕೊನೆಯ ದಿನ.
  • ನವೆಂಬರ್ 17ರ ಮಧ್ಯಾಹ್ನ 2 ಗಂಟೆ ನಂತರ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆಯಾಗಲಿದೆ.
  • ಅಭ್ಯರ್ಥಿಗಳು ನವೆಂಬರ್ 17 ರ ಸಂಜೆ 4 ಗಂಟೆಯಿಂದ ನವೆಂಬರ್ 20 ರ ಬೆಳಗ್ಗೆ 10 ಗಂಟೆಯವರೆಗೆ ಆಪ್ಷನ್ ಎಂಟ್ರಿ ಮಾಡಬಹುದಾಗಿದೆ.
  • ನವೆಂಬರ್ 20 ರ ಮಧ್ಯಾಹ್ನ 2 ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ.
  • ನವೆಂಬರ್ 21 ಮತ್ತು 22 ರಂದು ಪ್ರವೇಶ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
  • ಕಾಲೇಜು ಪ್ರವೇಶಕ್ಕೆ ನವೆಂಬರ್ 22 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
KEA is conducting the extended round of online seat allotment to PG AYUSH Courses for the year 20L7-18 from November 17.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia