ಕರ್ನಾಟಕ ಪಿಜಿಸಿಟಿ 2017ರ ಪ್ರವೇಶ ಪತ್ರಗಳು ಲಭ್ಯವಿದ್ದು, ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೊದಲ ವರ್ಷದ ಮತ್ತು ಎರಡನೇ ವರ್ಷದ ಲ್ಯಾಟರಲ್ ಪ್ರವೇಶಕ್ಕಾಗಿ ಪರೀಕ್ಷಾ ಪ್ರಾಧಿಕಾರವು ಪಿಜಿಸಿಇಟಿ ನಡೆಸುತ್ತಿದ್ದು ಜುಲೈ 1 ರಿಂದ ಪರೀಕ್ಷೆಗಳು ಆರಂಭವಾಗಲಿವೆ.
ಎಂಬಿಎ/ಎಂಸಿಎ/ಎಂಇ/ಎಂ.ಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸುಗಳ ಮೊದಲನೇ ವರ್ಷದ/ಮೊದನೇ ಸೆಮಿಸ್ಟರ್ ಮತ್ತು ಎಂಸಿಎ ಎರಡನೇ ವರ್ಷದ ಲ್ಯಾಟರಲ್ ಪ್ರವೇಶ ಬಯಸುವ ಅಭ್ಯರ್ಥಿಗಳಿಗಾಗಿ ಪರೀಕ್ಷೆಗಳು ನಡೆಯುತ್ತಿವೆ.
ಪ್ರವೇಶ ಪತ್ರ ಪಡೆಯುವ ವಿಧಾನ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ 'ಕೆಇಎ' ವೆಬ್ಸೈಟ್ ಗೆ ಭೇಟಿ ನೀಡಿ
- ಬಲಭಾಗದಲ್ಲಿ ಕಾಣುವ ಪಿಜಿಸಿಇಟಿ 2017 ಕ್ಲಿಕ್ ಮಾಡಿ
- 'Download Hall Ticket' ಕ್ಲಿಕ್ ಮಾಡಿ
- ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ
- ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ
ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷೆ ನಡೆಯುವ ದಿನಾಂಕ ಮತ್ತು ಸಮಯ
- ಎಂಇ/ಎಂ.ಟೆಕ್/ಎಂ.ಆರ್ಕ್ ಕೋರ್ಸುಗಳಿಗೆ ದಿನಾಂಕ 01-07-2017 ಬೆಳಿಗ್ಗೆ 10.30 ರಿಂದ 12.30
- ಟೈಪ್ ಎ: ಮಧ್ಯಾಹ್ನ 2.30 ರಿಂದ 4.30
- ಎಂಸಿಎ ಕೋರ್ಸಿಗೆ ದಿನಾಂಕ 02-07-2017 ಬೆಳಿಗ್ಗೆ 10.30 ರಿಂದ 12.30
- ಎಂಬಿಎ ಕೋರ್ಸಿಗೆ ದಿನಾಂಕ 02-07-2017 ಮಧ್ಯಾಹ್ನ 2.30 ರಿಂದ 4.30
ಸೂಚನೆ
- ಅಭ್ಯರ್ಥಿಗಳು ಪಿಜಿಸಿಇಟಿ ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಕೊಂಡೊಯ್ಯುವುದು.
- ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ತೊಂದರೆಯಾದಲ್ಲಿ ಪರೀಕ್ಷಾ ಪ್ರಾಧಿಕಾರವನ್ನು ಭೇಟಿಯಾಗಲು ಸೂಚಿಸಿದೆ.
For Quick Alerts
For Daily Alerts