PM Mod's Pariksha Pe Charcha 2021: ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಬೇಡ

2021ನೇ ಸಾಲಿನ ಪರೀಕ್ಷಾ ಪೇ ಚರ್ಚಾ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2021ನೇ ಸಾಲಿನ ಪರೀಕ್ಷಾ ಪೇ ಚರ್ಚಾ ಅನ್ನು ವಿದ್ಯಾರ್ಥಿಗಳೊಂದಿಗೆ ನಡೆಸಿದ್ದಾರೆ. ಈ ಬಾರಿ ಪೋಷಕರು ಮತ್ತು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಪಡುವುದು ಬೇಡ, ಪರೀಕ್ಷೆಗಳು ಅಚಾನಕ್ ಆಗಿ ಬರುವುದಿಲ್ಲ ಹಾಗೆಯೇ ಪರೀಕ್ಷೆಯೇ ಜೀವನದಲ್ಲಿ ಕೊನೆಯ ಅವಕಾಶ ಅಲ್ಲ ಎಂದು ಹೇಳಿದ್ದಾರೆ.

ಮೊನೆಯಷ್ಟೇ ಏಪ್ರಿಲ್ 07 ರಂದು ಸಂಜೆ 7 ಗಂಟೆಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ ಅವರು, " ಹೊಸ ಮಾದರಿಯಲ್ಲಿ, ವಿವಿಧ ವಿಷಯಗಳಲ್ಲಿ ಹಲವು ಕುತೂಹಲಕರ ಪ್ರಶ್ನೆಗಳೊಂದಿಗೆ, ಪರೀಕ್ಷಾರ್ಥಿಗಳು, ಅವರ ಪೋಷಕರು, ಶಿಕ್ಷಕರೊಂದಿಗೆ ಚರ್ಚಿಸಲಾಗುತ್ತದೆ" ಎಂದು ತಿಳಿಸಿದ್ದರು.

ಪರೀಕ್ಷಾ ಪೇ ಚರ್ಚಾ 2021 ಒಂದು ಕಾರ್ಯಕ್ರಮವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ರವರು ನಡೆಸಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡುವ ಮೂಲಕ ಮುಂಬರುವ ಪರೀಗಳ ಕುರಿತು ಸಲಹೆಗಳನ್ನು ನೀಡಿದ್ದಾರೆ.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಪಿಪಿಸಿ 2021 ಸ್ಪರ್ಧೆಗೆ ಅರ್ಜಿಯನ್ನು ಯಾವುದಾದರೂ ಒಂದು ಥೀಮ್‌ನಲ್ಲಿ ಸಬ್‌ಮಿಟ್‌ ಮಾಡುವ ಮೂಲಕ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಪಿಪಿಸಿ ವೆಬ್‌ಸೈಟ್‌ನಲ್ಲಿ ತಮ್ಮ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ನೀಡಲಾಗಿತ್ತು.

ಪರೀಕ್ಷಾ ಪೇ ಚರ್ಚಾ 2021 ನಾಲ್ಕನೇ ಎಡಿಷನ್‌ ಅಗಿದ್ದು, ವರ್ಚುವಲಿ ನಡೆಸಲಾಗಿದೆ. ಮಾರ್ಚ್‌ 14 ರವರೆಗೆ ರಿಜಿಸ್ಟ್ರೇಷನ್‌ ಪಡೆಯಲು ಅವಕಾಶ ನೀಡಲಾಗಿತ್ತು. ಈ ಬಾರಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ 10.39 ವಿದ್ಯಾರ್ಥಿಗಳು ರಿಜಿಸ್ಟ್ರೇಷನ್ ಪಡೆದಿದ್ದಾರೆ. ಅಲ್ಲದೇ 2.62 ಶಿಕ್ಷಕರು, 93,000 ಪೋಷಕರು ರಿಜಿಸ್ಟ್ರೇಷನ್ ಪಡೆದಿದ್ದಾರೆ. ಪರೀಕ್ಷಾ ಪೇ ಚರ್ಚಾ 2021 ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳು ಮೋದಿಯೊಂದಿಗೆ ನೇರವಾಗಿ ಚರ್ಚಿಸಲು, ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
PM narendra modi's anual interaction with students 'pariksha pe charcha' today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X