ಯು.ಪಿ.ಎಸ್.ಸಿ. ಹುದ್ದೆಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ

ಯು.ಪಿ.ಎಸ್.ಸಿ. ಹುದ್ದೆಗಳಿಗೆ ನೆಡೆಯುವ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

2017-18 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೆಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಯು.ಪಿ.ಎಸ್.ಸಿ. ಹುದ್ದೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಪ್ರವೇಶ ಪರೀಕ್ಷೆ ನಡೆಸದೇ, ನೇರವಾಗಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡುವ ಸಂಬಂಧ ಆಯ್ಕೆ ಮಾಡಿ ಉಚಿತವಾಗಿ ಗರಿಷ್ಟ 9 ತಿಂಗಳ 2 ಅವಧಿಯಲ್ಲಿ (2 ವರ್ಷ) ತರಬೇತಿಯನ್ನು ನೀಡಲಾಗುವುದು.

ಯು.ಪಿ.ಎಸ್.ಸಿ. ಹುದ್ದೆಗಳಿಗೆ ನೆಡೆಯುವ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸದರಿ ಅಭ್ಯರ್ಥಿಗಳಿಗೆ ಶಿಷ್ಯವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು.

ಯು.ಪಿ.ಎಸ್.ಸಿ. ಉಚಿತ ತರಬೇತಿ

ವಿವರ

  • ಕೋರ್ಸ್‍ನ ವಿವರ: ಕೇಂದ್ರ ಲೋಕ ಸೇವಾ ಆಯೋಗವು ನೆಡೆಸುವ (ಐ.ಎ.ಎಸ್ ಮತ್ತು ಎ&ಬಿ ವೃಂದದ ಹುದ್ದೆಗಳಿಗೆ) 2017ನೇ ಸಾಲಿನ ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿ.
  • ತರಬೇತಿ ಅವಧಿ: ಗರಿಷ್ಟ 9 ತಿಂಗಳ 2 ಅವಧಿಯಲ್ಲಿ (2 ವರ್ಷ)
  • ವಯಸ್ಸು: 21 ರಿಂದ 35 ವರ್ಷ ( 20.06.2017 ಕ್ಕೆ )
  • ವಿದ್ಯಾರ್ಹತೆ ಅಭ್ಯರ್ಥಿಯು ಪದವಿಯಲ್ಲಿ ಉತ್ತೀರ್ಣರಾಗಿರಬೇಕು
  • ಅಭ್ಯರ್ಥಿಯ ಸ್ವಂತ ಸ್ಥಳ: ಕರ್ನಾಟಕ ರಾಜ್ಯದವರಾಗಿರಬೇಕು
  • ಷರತ್ತು: ಅಭ್ಯರ್ಥಿಯು ಯು.ಪಿ.ಎಸ್.ಸಿ. ಹುದ್ದೆಗಳಿಗೆ ನೆಡೆಯುವ ಪರೀಕ್ಷೆಗಳಿಗೆವಿಧಿಸುವ ಎಲ್ಲ ನಿಬಂಧನೆಗಳನ್ನು ಪೂರೈಸತಕ್ಕದ್ದು
  • ವಾರ್ಷಿಕ ಆದಾಯ: ಅಭ್ಯರ್ಥಿಯ ಹಾಗೂ ಆತನ /ಆಕೆಯ ತಂದೆ, ತಾಯಿ, ಪೋಷಕರ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 6.00 ಲಕ್ಷ ಮೀರಿರಬಾರದು.
  • ಅರ್ಜಿ ಸಲ್ಲಿಸುವ ವೆಬ್‍ಸೈಟ್ ವಿಳಾಸ: www.sw.kar.nic.in
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-07-2017 ಸಂಜೆ 5.30ರ ವರೆಗೆ

ಜುಲೈ ಪ್ರಥಮ ವಾರದಲ್ಲಿ ನಡೆಯುವ ಸಂದರ್ಶನಕ್ಕೆ ಈ ಕೆಳಗಿನ ಮೂಲ ಹಾಗೂ ದೃಡೀಕೃತ ಮಾಹಿತಿಯೊಂದಿಗೆ ಹಾಜರಾಗುವುದು.

• 10 ನೇ ತರಗತಿ ಅಂಕಪಟ್ಟಿ.
• ಡಿಗ್ರಿ ಪ್ರಮಾಣ ಪತ್ರ.
• ಜಾತಿ ಪ್ರಮಾಣ ಪತ್ರ.
• ಇತ್ತೀಚಿನ ಆದಾಯ ಪ್ರಮಾಣ ಪತ್ರ.
• 3 ಭಾವಚಿತ್ರ.
• ತಂದೆ / ತಾಯಿ ಸರ್ಕಾರಿ ಉದ್ಯೋಗದಲ್ಲಿದ್ದರೇ ವೇತನ ಪ್ರಮಾಣ ಪತ್ರ ನೀಡುವುದು.
• ಯು.ಪಿ.ಎಸ್.ಸಿ. ಪ್ರಿಲೀಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮೈನ್ಸ್ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ.
• ಕೆ.ಎ.ಎಸ್. ಮೈನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿರುವ ಪತ್ರದ ಪ್ರತಿ.

ಸೂಚನೆ

2017-18ನೇ ಸಾಲಿನಿಂದ ಯು.ಪಿ.ಎಸ್.ಸಿ. ನಡೆಸುವ ಪ್ರಿಲೀಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ / ಕೆ.ಪಿ.ಎಸ್.ಸಿ. ಕಾಲಕಾಲಕ್ಕೆ ನಡೆಸುವ ಕೆ.ಎ.ಎಸ್. ಮೇನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿಯ 150 ಹಾಗೂ ಪರಿಶಿಷ್ಟ ಪಂಗಡದ 50 ಒಟ್ಟು ಅಭ್ಯರ್ಥಿಗಳಿಗೆ 9 ತಿಂಗಳು + 9 ತಿಂಗಳು 2 ಅವಧಿಗೆ (2 ವರ್ಷ) ಯು.ಪಿ.ಎಸ್.ಸಿ. ಪರೀಕ್ಷಾ ಪೂರ್ವ ತರಬೇತಿಗಾಗಿ ದೆಹಲಿಯಲ್ಲಿರುವ ಅರ್ಹ ತರಬೇತಿ ಸಂಸ್ಥೆಗಳಿಗೆ ಪ್ರವೇಶ ಪರೀಕ್ಷೆ ನಡೆಸದೇ, ನೇರವಾಗಿ ತರಬೇತಿ ಸಂಸ್ಥೆಗಳಿಗೆ ನಿಯೋಜಿಸಲಾಗುವುದು.

ತರಬೇತಿ ಅವಧಿಯಲ್ಲಿ ವಸತಿ ಸೌಲಭ್ಯವನ್ನು ನೀಡಲಾಗುವುದಿಲ್ಲ. ಸರ್ಕಾರಿ ಆದೇಶ ಪ್ರಕಾರ ಶಿಷ್ಯವೇತನವನ್ನು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್. ಮೂಲಕ ಪಾವತಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ sw.kar.nic.in ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
SOCIAL WELFARE DEPARTMENT invites Online Application For UPSC Coaching For those Who have cleared UPSC Prelims or KAS Mains Previously -2017-18
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X