ಭಾರತದ ಪ್ರಥಮ ಪ್ರಜೆ ರಾಮನಾಥ್ ಕೋವಿಂದ್ ನಡೆದು ಬಂದ ಹಾದಿ

Posted By:

ಭಾರತದ 14ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಆಯ್ಕೆಯಾಗಿದ್ದಾರೆ. ರೈತ ಕುಟುಂಬದಿಂದ ಕೋವಿಂದ್ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವದಿಂದ ಇಂದು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಕೋವಿಂದ್ ರಾಷ್ಟ್ರಪತಿ ಹುದ್ದೆಗೇರಿದ ಎರಡನೇ ದಲಿತ ಸಮುದಾಯದ ವ್ಯಕ್ತಿ ಕೂಡ.

ರಾಮನಾಥ್ ಕೋವಿಂದ್ ಜೀವನ ಪರಿಚಯ

ಕಾನ್ಪುರ ಮೂಲದ ರೈತ ಕುಟುಂಬದಿಂದ ಬಂದಿರುವ ಕೋವಿಂದ್ ಅವರು ಅಕ್ಟೋಬರ್ 1, 1945ರಂದು ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ದೇರಾಪುರ್ ದ ಪರೌಂಖ್ ಗ್ರಾಮದಲ್ಲಿ ಜನಿಸಿದರು.

ಕಾನ್ಪುರ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಮತ್ತು ಕಾನೂನು ವಿಷಯದಲ್ಲಿ ಪದವೀಧರಾಗಿರುವ ಇವರು 1977ರಿಂದ 1979 ವರೆಗೆ ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪರಿಚಯ

ಐಎಎಸ್ ನಲ್ಲಿ ತೇರ್ಗಡೆ

ಕಾನ್ಪುರ್ ಕಾಲೇಜಿನಿಂದ ಕಾನೂನಿನಲ್ಲಿ ಪದವಿ ಪಡೆದ ನಂತರ, ಕೋವಿಂದ್ ಸಿವಿಲ್ ಸರ್ವೀಸಸ್ ಪರೀಕ್ಷೆಗಾಗಿ ತಯಾರಿ ಮಾಡಲು ದೆಹಲಿಗೆ ಹೋದರು. ಈ ಪರೀಕ್ಷೆಯನ್ನು ಅವರ ಮೂರನೆಯ ಪ್ರಯತ್ನದಲ್ಲೇ ಮುಗಿಸಿದರು.

ಐಎಎಸ್ ತ್ಯಜಿಸಿ ವಕೀಲಿ ವೃತ್ತಿ

ಐಎಎಸ್ ಮುಗಿಸಿದರು ಮೈತ್ರಿ ಸೇವೆಗಾಗಿ ಆಯ್ಕೆಯಾಗಿ ಕಾನೂನನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.

ವಕೀಲಿ ವೃತ್ತಿ ಮೂಲಕ ಸಮಾಜ ಸೇವೆ

1971 ರಲ್ಲಿ ಶ್ರೀ ಕೋವಿಂದ್ ಅವರು ದೆಹಲಿಯ ಬಾರ್ ಕೌನ್ಸಿಲ್ನೊಂದಿಗೆ ವಕೀಲರಾಗಿ ಸೇರಿಕೊಂಡರು. ಶ್ರೀ ಕೋವಿಂದ್ ಅವರು ದೆಹಲಿಯ ಫ್ರೀ ಲೀಗಲ್ ಏಡ್ ಸೊಸೈಟಿಯ ಅಡಿಯಲ್ಲಿ ಅಲ್ಪಸಂಖ್ಯಾತರು ಮತ್ತು ಬಡವರನ್ನೂ ಒಳಗೊಂಡಂತೆ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ನೆರವು ನೀಡಿದರು.

ಕೋವಿಂದ್ 1978 ರಲ್ಲಿ ಭಾರತದ ಸುಪ್ರೀಂ ಕೋರ್ಟ್ನ ವಕೀಲರಾಗಿದ್ದರು. ಅವರು 1977-78ರ ಅವಧಿಯಲ್ಲಿ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿಯವರ ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸಿದರು.

ಕೋವಿಂದ್ ಅವರು 1977 ರಿಂದ 1979 ರವರೆಗೂ ದೆಹಲಿ ಹೈಕೋರ್ಟ್ನಲ್ಲಿ ಕೇಂದ್ರೀಯ ಸರ್ಕಾರದ ಅಡ್ವೊಕೇಟ್ ಸೇರಿದಂತೆ ಇತರ ಪ್ರತಿಷ್ಠಿತ ಸ್ಥಾನಗಳನ್ನು ಹೊಂದಿದ್ದಾರೆ. 1980 ರಿಂದ 1993 ರವರೆಗೂ ಒಂದು ದಶಕಕ್ಕೂ ಹೆಚ್ಚು ಕಾಲ ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರಕಾರ ನಿಯೋಜಿತ ಸಲಹೆಗಾರರಾಗಿದ್ದರು.

ಶ್ರೀ ಕೋವಿಂದ್ 1980 ರಿಂದ 1993ರ ವರೆಗೆ ಸುಪ್ರೀಂಕೋರ್ಟ್‍ನಲ್ಲಿ ಕೇಂದ್ರ ಸರ್ಕಾರ ಸ್ಥಾಯಿ ಸಮಿತಿಯಲ್ಲಿದ್ದರು. 1998 ರಿಂದ 2002 ರವರೆಗು ಬಿಜೆಪಿ ದಲಿತ್‌ ಮೋರ್ಚಾದ ಅಧ್ಯಕ್ಷರಾಗಿದ್ದರು. 1994-2000 ಮತ್ತು 2000-2006 ಈ ಎರಡು ಅವಧಿಗೆ ಇವರು ಉತ್ತರ ಪ್ರದೇಶದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು.

ಕೋವಿಂದ್ ರ ರಾಜಕೀಯ ಬದಕು

ಉತ್ತರ ಪ್ರದೇಶದ ದಲಿತ ನಾಯಕರಾಗಿರುವ ಕೋವಿಂದ್ ಅವರಿಗೆ ಈಗ 71 ವರ್ಷ. ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಹೊಂದಿರದ ಕೋವಿಂದ್ ಅನೇಕ ಜವಾಬ್ದಾರಿಯುದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಂಸದೀಯ ಸಮಿತಿ ಸದಸ್ಯರಾಗಿ ಅನುಭವ ಹೊಂದಿದ್ದಾರೆ.

  • ಗೃಹ ವ್ಯವಹಾರದ ಸಂಸದೀಯ ಸಮಿತಿ
  • ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಮಿತಿ
  • ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಮಿತಿ
  • ಪರಿಶಿಷ್ಟ ಜಾತಿ/ ಪಂಗಡ ಸಮಿತಿ
  • ಕಾನೂನು ಹಾಗೂ ನ್ಯಾಯ ಸಮಿತಿ
  • ರಾಜ್ಯಸಭಾ ಸಮಿತಿ ಅಧ್ಯಕ್ಷರಾಗಿದ್ದರು.
  • ಬಿಹಾರದ ರಾಜ್ಯಪಾಲರಾಗಿದ್ದ ಸೇವೆ ಸಲ್ಲಿಸಿದ್ದಾರೆ.

English summary
Ram Nath Kovind has been elected as 14th President of India. Here is his brief profile.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia