ಅರ್ ಟಿ ಇ ಸೀಟು ನೀಡಲು ಖಾಸಗಿ ಶಾಲೆಗಳ ಕಳ್ಳಾಟ

Posted By:

ಶಿಕ್ಷಣ ಹಕ್ಕು ಕಾಯ್ದೆಯಡಿ ಬಡ ವಿದ್ಯಾರ್ಥಿಗಳಿಗೆ ಸೀಟು ನೀಡಲು ಖಾಸಗಿ ಶಾಲೆಗಳು ಹಿಂದೇಟು ಹಾಕುತ್ತಿರುವುದು ಎಲ್ಲೆಡೆ ಬಯಲಿಗೆ ಬಂದಿದೆ. ಆರ್ ಟಿ ಇ ಮೊದಲ ಸುತ್ತಿನ ಸೀಟು ಹಂಚಿಕೆ ಕಾರ್ಯ ಪೂರ್ಣಗೊಂಡಿದ್ದು ಶಾಲೆಗಳಲ್ಲಿ ಮಾತ್ರ ಸರಿಯಾಗಿ ದಾಖಲಾತಿಗಳೇ ಆಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳು ಆರ್ ಟಿ ಇ ಸೀಟುಗಳಿಗೂ ಶುಲ್ಕ ವಸೂಲಿ ಮಾಡುತ್ತ, ಪೋಷಕರನ್ನು ದಾರಿತಪ್ಪಿಸುತ್ತಿರುವ ಘಟನೆ ರಾಜ್ಯಾದ್ಯಂತ ನಡೆದಿದೆ. ಇದರಿಂದ ಬೇಸತ್ತ ಪೋಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಸಂಘಕ್ಕೆ ದಿನವು ದೂರುಗಳನ್ನು ಹೊತ್ತು ಬರುವಂತಾಗಿದೆ. 

ಖಾಸಗಿ ಶಾಲೆಗಳ ಚಾಣಾಕ್ಷತನದಿಂದ ಬೇಸತ್ತ ಅನೇಕ ಪೋಷಕರು ದುಡ್ಡು ನೀಡಿ ಸೀಟ್ ಪಡೆದಿರುವ ಮಾಹಿತಿ ಕೂಡ ಲಭ್ಯವಾಗಿದ್ದು, ಖಾಸಗಿ ಶಾಲೆಗಳು ಮಾತ್ರ ತಪ್ಪನ್ನು ಮರೆಮಾಚಲು ನಾನಾ ಪ್ರಯತ್ನ ಪಡುತ್ತಿವೆ.

ಖಾಸಗಿ ಶಾಲೆಗಳ ಕಳ್ಳಾಟ

ಆರ್ ಟಿ ಇ ಕಾಯ್ದೆಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ರೂಲ್ಸುಗಳನ್ನು ಮಾಡಿ ಶುಲ್ಕ ವಸೂಲಿ ಮಾಡುತ್ತಿವೆ.

ಸರ್ಕಾರವೂ ದೂರುಗಳ ವಿಚಾರಣಗೆ ಅಧಿಕಾರಿಗಳ ಸಮಿತಿಯನ್ನ ನೇಮಕ ಮಾಡದಿರುವುದನ್ನೇ ಖಾಸಗಿ ಶಾಲೆಗಳು ವರದಾನ ಮಾಡಿಕೊಂಡಿವೆ.

ಸುಳ್ಳು ದಾಖಲೆ ತೋರಿಸುವ ಶಾಲೆಗಳು

ಆರ್ ಟಿ ಇ ಆಧಾರದಲ್ಲಿ ಮಗುವನ್ನು ಎಲ್ ಕೆ ಜಿ ಅಥವಾ 1 ನೇ ತರಗತಿ ಅಡ್ಮೀಶನ್ ಮಾಡಿಸಲು ಕರೆದುಕೊಂಡು ಹೋದರೆ ಖಾಸಗಿ ಸಂಸ್ಥೆಗಳು ಒಳಕ್ಕೆ ಬಿಟ್ಟುಕೊಳ್ಳುದೆ, ರಿಸಪ್ಶನ್ ನಲ್ಲಿಯೇ ಸಲ್ಲದ ಕಾರಣ ಹೇಳಿ ಹಿಂದಕ್ಕೆ ಕಳುಹಿಸಲಾಗುತ್ತದೆ.ಅಲ್ಲದೇ ಆರ್ ಟಿ ಇ ಮೂಲಕ ಸೀಟು ಕೇಳಲು ಹೋದವರನ್ನು ಕೀಳಾಗಿ ನೋಡಲಾಗುತ್ತಿದೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.

ಇನ್ನು ಕೆಲವು ಕಡೆ ನಿಮ್ಮದೇ ಕೊನೆ ಸೀಟು, ಬಾಕಿ ಉಳಿದಿದೆ. ಆರ್ ಟಿ ಇ ಅಡಿ ಸೀಟು ಪಡೆದವರು ನಿನ್ನೆಯೇ ಅಡ್ಮಿಷನ್ ಮಾಡಿ ಹೋಗಿದ್ದಾರೆ. ಬೇಕಾದರೆ ನೋಡಿ ಎಂದು ಸುಳ್ಳು ದಾಖಲೆ ತೋರಿಸುವ ಕೆಲಸವು ಆಗುತ್ತಿದೆ.

ಹಣ ಕೊಟ್ಟು ದಾಖಲು ಮಾಡುತ್ತಿರುವ ಪೋಷಕರು

ಹಲವು ಖಾಸಗಿ ಶಾಲೆಗಳು ಆರ್ ಟಿ ಇ ಸೀಟಿಗೂ ಸಾವಿರಾರು ರೂಗಳನ್ನು ಪೋಷಕರಿಂದ ಸುಲಿಗೆ ಮಾಡುತ್ತಿವೆ. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಪೋಷಕರು ಮಣಿದು ಖಾಸಗಿ ಶಾಲೆಗಳು ಕೇಳಿದಷ್ಟು ಹಣ ನೀಡಿ ಸೇರಿಸುತ್ತಿದ್ದಾರೆ.

English summary
some private schools are demanding fees from parents of rte students.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia