ದ್ವಿತೀಯ ಪಿಯುಸಿ: 2018ರ ಪರೀಕ್ಷೆಗೆ ನೂತನ ಪಠ್ಯಕ್ರಮ

Posted By:

ದ್ವಿತೀಯ ಪಿಯುಸಿ ಹಳೆಯ ಪಠ್ಯಕ್ರಮದಲ್ಲಿ ಅನುತ್ತೀರ್ಣರಾಗಿ ವಿದ್ಯಾರ್ಥಿಗಳು ಹಳೆಯ ಪಠ್ಯಕ್ರಮದಲ್ಲಿಯೇ ಪರೀಕ್ಷೆ ಬರೆಯಲು ಹೆಚ್ಚಿನ ಅವಕಾಶ ನೀಡುವುದರ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಸುತ್ತೋಲೆ ಪ್ರಕಟಿಸಿದೆ.

ದ್ವಿತೀಯ ಪಿಯುಸಿ ವಿಜ್ಞಾನದ (ಪಿಸಿಎಂಬಿ) ವಿಷಯಗಳಲ್ಲಿ ಹಳೆಯ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು 2017ರ ವಾರ್ಷಿಕ ಪರೀಕ್ಷೆಯು ಕೊನೆಯ ಅವಕಾಶವಾಗಿತ್ತು. ಆದರೆ ವಿದ್ಯಾರ್ಥಿಗಳ ಬೇಡಿಕೆ ಮೇರೆಗೆ ಜುಲೈ 2017ರ ಪೂರಕ ಪರೀಕ್ಷೆಗೂ ಹಳೆಯ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ದ್ವಿತೀಯ ಪಿಯುಸಿ ಪಿಸಿಎಂಬಿ ವಿಷಯಗಳಲ್ಲಿ ಹೊಸ ಪಠ್ಯಕ್ರಮದಲ್ಲಿಯೇ ಪರೀಕ್ಷೆ ಬರೆಯಬೇಕಾಗುತ್ತದೆ.

 2018ರ ಪಿಯುಸಿ ಪರೀಕ್ಷೆಗೆ ನೂತನ ಪಠ್ಯಕ್ರಮ

ಹಳೆಯ ಪಠ್ಯಕ್ರಮದ ಪಿಸಿಬಿ ವಿಷಯಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು 10 ಅಂಕಗಳು ಹಾಗೂ ತಾತ್ವಿಕ ಪರೀಕ್ಷೆಗಳನ್ನು 90 ಅಂಕಗಳಿಗೆ ನಡೆಸಲಾಗಿತ್ತು. ಹಳೆಯ ಪಠ್ಯಕ್ರಮದ ಪಿಸಿಎಂಬಿ ವಿಷಯಗಳಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಹೊಸಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಬೇಕಿದ್ದು, ಪ್ರಾಯೋಗಿಕ ಪರೀಕ್ಷೆಯನ್ನು ಪುನಃ ಬರೆಯಲು ಅವಕಾಶವಿರುವುದಿಲ್ಲ.

ಐಚ್ಛಿಕ ವಿಷಯಗಳಲ್ಲಿ ತಾತ್ವಿಕ ಪರೀಕ್ಷೆ ಬರೆದು ಇಲಾಖೆಯ ನಿಯಮದ ಪ್ರಕಾರ ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕಾಗುತ್ತದೆ. ಈಗಿನ ನಿಯಮದಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ 70 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಳೆಯ ಪಠ್ಯಕ್ರಮದಲ್ಲಿ ಪಿಸಿಬಿ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಯ 10 ಅಂಕಗಳು ಹಾಗೂ ತಾತ್ವಿಕ ಪರೀಕ್ಷೆಯ 70 ಅಂಕಗಳು ಸೇರಿದಂತೆ ಒಟ್ಟು 80 ಅಂಕಗಳಿಗೆ, ವಿದ್ಯಾರ್ಥಿ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕಗಳನ್ನು 100 ಅಂಕಗಳಿಗೆ ಪರಿವರ್ತಿಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲಾಗುವುದು.

ಪಿಸಿಎಂಬಿ ಬಿಟ್ಟು ಉಳಿದ ವಿಷಯಗಳಾದ ಕಲಾ, ವಾಣಿಜ್ಯ, ಭಾಷೆ, ಗೃಹ ವಿಜ್ಞಾನ, ಕಂಪ್ಯೂಟರ್‌ ಸೈನ್ಸ್‌, ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್‌ ಪರೀಕ್ಷೆಗಳನ್ನು ಹಳೆಯ ಪಠ್ಯಕ್ರಮದಲ್ಲಿಯೇ ಬರೆಯಲು ಅವಕಾಶ ನೀಡಲಾಗಿದೆ.

English summary
Provision to allow Old Syllabus students to write PUC exam for candidates failed in old syllabus upto 2018 July.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia