ಪಿಯು ಶಿಕ್ಷಕರ ಕೊರತೆ: ಕಾಮರ್ಸ್ ಕಲಿಸಲು ಶಿಕ್ಷಕರೇ ಇಲ್ಲ

Posted By:

ಕಾಮರ್ಸ್ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಇದ್ದು, ವರ್ಷದಿಂದ ವರ್ಷಕ್ಕೆ ಕಾಮರ್ಸ್ ಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಅದನ್ನು ಕಲಿಸಲು ಶಿಕ್ಷಕರೇ ಇಲ್ಲದಂತಾಗಿದೆ.

ಯುವಕರಿಗೆ ಭಾರತೀಯ ಸೇನೆಯಲ್ಲಿ ಉತ್ತಮ ಕೆರಿಯರ್

ರಾಜ್ಯದಲ್ಲಿನ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಾಣಿಜ್ಯ ಶಿಕ್ಷಕರ ಕೊರತೆ ಸಾಕಷ್ಟಿದ್ದು, ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎನ್ನುವುದು ಪ್ರಶ್ನೆಯಾಗಿದೆ.

ಕರ್ನಾಟಕ ರಾಜ್ಯದ ಕಾರಾಗ್ರಹ ಇಲಾಖೆಯಲ್ಲಿ 1102 ಹುದ್ದೆಗಳ ನೇಮಕಾತಿ

ಕಾಮರ್ಸ್ ಶಿಕ್ಷಕರ ಕೊರತೆ

ಪದವಿ ಪೂರ್ವ ಶಿಕ್ಷಣ ಮಂಡಳಿ ಮಾಹಿತಿ ಪ್ರಕಾರ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಐನೂರಕ್ಕೂ ಹೆಚ್ಚಿನ ವಾಣಿಜ್ಯ ಶಿಕ್ಷಕರ ಕೊರತೆ ಇದೆ. ಹೀಗಿದ್ದರೂ ಶಿಕ್ಷರ ನೇಮಕಾತಿ ಆಗದಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ.

ಹುದ್ದೆಗಳ ವಿವರ

ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಒಟ್ಟು 2605 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ವಾಣಿಜ್ಯ ವಿಭಾಗದಲ್ಲೇ ಹೆಚ್ಚಿನ ಹುದ್ದೆಗಳು ಖಾಲಿ ಇವೆ.

  • ಕಾಮರ್ಸ್-559
  • ಕನ್ನಡ-322
  • ಎಕನಾಮಿಕ್ಸ್-241
  • ಇಂಗ್ಲಿಷ್-222
  • ಪೊಲಿಟಿಕಲ್ ಸೈನ್ಸ್-219
  • ಸೋಷಿಯಾಲಜಿ-215
  • ಇತಿಹಾಸ-206
  • ಗಣಿತ-130
  • ಜೀವಶಾಸ್ತ್ರ-110
  • ಭೌತಶಾಸ್ತ್ರ-98

ಹಲವಾರು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕಿದೆ. ಆದ್ದರಿಂದ ಪ್ರಾಥಮಿಕ ತರಗತಿಗಳಿಂದಲೇ ಇದನ್ನು ಸರಿಪಡಿಸುತ್ತಾ ನಂತರ ಉನ್ನತ ಮಟ್ಟಕ್ಕೆ ಬರುವುದು ಸೂಕ್ತ. ನಮ್ಮ ನೂತನ ಶಿಕ್ಷಣ ನೀತಿ ಕೂಡ ಇದೆ ಆಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ತನ್ವಿರ್ ಸೇಠ್ ಹೇಳಿದ್ದಾರೆ.

ಪ್ರೌಢಶಾಲಾ ಶಿಕ್ಷಕರನ್ನು ಅವರ ವಿದ್ಯಾರ್ಹತೆ ಮೇರೆಗೆ ಪಿಯು ಕಾಲೇಜಿಗೆ ನೇಮಕ ಮಾಡಿಕೊಳ್ಳಲಾಗುವುದು, ಅದರಂತೆ ಪ್ರಾಥಮಿಕ ಹಂತದಿಂದ ಪರೀಕ್ಷೆಗಳನ್ನು ಆಯೋಜಿಸಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.

ಒಟ್ಟು 12000 ಉಪನ್ಯಾಸಕರ ಹುದ್ದೆಗಳು ಮಜೂರಾಗಿವೆ, ಅದರಲ್ಲಿ 2605 ಭರ್ತಿಯಾಗದೆ ಖಾಲಿ ಇರುವ ಹುದ್ದೆಗಳು, ಇದರ ಬಗ್ಗೆ ಪರಿಶೀಲಿಸಿ ವಿಜ್ಞಾನದ ಹುದ್ದೆಗಳ ಸಂಖ್ಯೆ ಕಡಿಮೆ ಮಾಡಿ ವಾಣಿಜ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ಸಂಭದಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ನೇಮಕಾತಿ ಪ್ರಕ್ರಿಯೆ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಬರುವ ಶೈಕ್ಷಣಿಕ ವರ್ಷದಲ್ಲಿ ನೇಮಕಾತಿಯನ್ನು ಪೂರ್ಣಗೊಳಿಸುವುದಾಗಿ ಮಂಡಳಿ ತಿಳಿಸಿದೆ.

English summary
There has been a huge demand for commerce stream, but the Pre-University Education (PUE) department is struggling to fill vacant faculty positions for commerce subjects.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia