ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Posted By:

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ರಾಜ್ಯದ ಎಲ್ಲ ಸರಕಾರಿ ಶಾಲೆಗಳಿಗೆ ಸೌರ ಶಕ್ತಿಯ ಮೂಲಕ ವಿದ್ಯುತ್

ನಾಲ್ಕು ದಿನಗಳ ಕಾಲ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳ ಮಾಹಿತಿಗಾಗಿ ವಿಷಯವಾರು ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಕಟಣಿಯಲ್ಲಿ ತಿಳಿಸಲಾಗಿದೆ.

ಪರೀಕ್ಷೆಗಳು ನಡೆಯುವ ದಿನಾಂಕ: 23-02-2018, 24-02-2018, 25-02-2018 ಮತ್ತು 26-02-2018

ಎನ್‌ಎಂಡಿಸಿ: 169 ಹುದ್ದೆಗಳ ನೇಮಕಾತಿ

ಪಿಯು ಉಪನ್ಯಾಸಕರ ನೇಮಕಾತಿ

ಪರೀಕ್ಷೆಗಳನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಉಪನ್ಯಾಸಕರ ಹುದ್ದೆಗಳ ನೇಮಕಾತಿಯನ್ನು ಈ ಕೆಳಕಂಡ ವಿಷಯಗಳಿಗೆ ನಡೆಸಲಾಗುವುದು

ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮರಾಠಿ, ಉರ್ದು, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ವ್ಯವಹಾರ ಅಧ್ಯಯನ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ, ಗಣಕವಿಜ್ಙಾನ ಮತ್ತು ಶಿಕ್ಷಣ.ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆಗಳು

ಕಡ್ಡಾಯ ಪ್ರಶ್ನೆಪತ್ರಿಕೆಗಳು

ಪ್ರಶ್ನೆಪತ್ರಿಕೆ 1

ಕನ್ನಡ: 150 ಅಂಕಗಳು-ಮೂರು ಗಂಟೆಗಳು ಅವಧಿ (ಎಸ್ ಎಸ್ ಎಲ್ ಸಿ ಮಟ್ಟದಲ್ಲಿ ಕನ್ನಡ ಪ್ರಥಮ ಭಾಷೆಗೆ ಸಮಾನವಾದ)

ಪ್ರಶ್ನೆಪತ್ರಿಕೆ 2

ಐಚ್ಛಿಕ ವಿಷಯದ ಪ್ರಶ್ನೆಪತ್ರಿಕೆ 1 ಮತ್ತು 2 ತಲಾ 150 ಅಂಕಗಳು-ಪ್ರತಿ ಪತ್ರಿಕೆಗೆ 3 ಗಂಟೆಗಳ ಕಾಲಾವಧಿಯದ್ದಾಗಿರುತ್ತದೆ.

ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಅಭ್ಯರ್ಥಿಯಿಂದ ನಿರೀಕ್ಷಿಸಬಹುದಾದ ಜ್ಞಾನವನ್ನು ಪರೀಕ್ಷಿಸುವ ರೀತಿಯ ಪ್ರಶ್ನೆಗಳು- ಮಲ್ಟಿಪಲ್ ಚಾಯ್ಸ್ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ.

ಮೌಲ್ಯಮಾಪನವು ನಕಾರಾತ್ಮಕ ಮೌಲ್ಯಮಾಪನ ಮಾದರಿಯದ್ದಾಗಿರುತ್ತದೆ (ನೆಗೆಟಿವ್ ವ್ಯಾಲ್ಯುಯೇಷನ್).

ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಈ ನಿರ್ದಿಷ್ಟ ಪತ್ರಿಕೆಗಳಲ್ಲಿ ಕನಿಷ್ಠ ಅಂಕದ ಮಿತಿ ಇರುವುದಿಲ್ಲ. ಆದರೆ ಎಲ್ಲಾ ಅಭ್ಯರ್ಥಿಗಳು ಕನ್ನಡ ಮತ್ತು ಇತರ ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

ಸ್ನಾತಕೋತ್ತರ ಪದವಿಯಲ್ಲಿ ಪಡೆದಿರುವ ಅಂಕಗಳನ್ನು ಹುದ್ದೆಯ ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು.

ಪಠ್ಯಕ್ರಮ

ಪ್ರಶ್ನೆಪತ್ರಿಕೆ (ಐಚ್ಛಿಕ ವಿಷಯಗಳು) ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ರಚಿಸಿರುವ ವಿಷಯ ತಜ್ಞರ ಸಮಿತಿಯು ವಿನ್ಯಾಸಗೊಳಿಸಿರುವ ವಿಷಯವಾರು ಪಠ್ಯಕ್ರಮ ವಿವರಗಳನ್ನು ಕೆಇಎ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಸೂಚನೆ

1ನೇ ಕಡ್ಡಾಯ ಪ್ರಶ್ನೆಪತ್ರಿಕೆ ಅರ್ಹತಾ ಪರೀಕ್ಷೆಯಾಗಿದ್ದು ಕನಿಷ್ಠ ೫೦ ಅಂಕಗಳನ್ನು ಗಳಿಸಿದವರು ಮಾತ್ರ ಅರ್ಹತೆಗಳಿಸುತ್ತಾರೆ. ಆದರೆ, ಈ ಕಡ್ಡಾಯ ಪರೀಕ್ಷೆಗಳ ಅಂಕವನ್ನು ಆಯ್ಕೆಯ ಮೆರಿಟ್ ಪಟ್ಟಿ ನಿರ್ಧಾರಕ್ಕೆ ಪರಿಗಣಿಸುವುದಿಲ್ಲ. ಕನ್ನಡ ಕಡ್ಡಾಯ ಪ್ರಶ್ನೆಪತ್ರಿಕೆ ಮಟ್ಟವು ಎಸ್ ಎಸ್ ಎಲ್ ಸಿ ಯಲ್ಲಿನ ಪ್ರಥಮ ಭಾಷೆ ಕನ್ನಡಕ್ಕೆ ಸಮಾನವಾಗಿರುತ್ತದೆ.

2ನೇ ಪ್ರಶ್ನೆಪತ್ರಿಕೆ ಸ್ನಾತಕೋತ್ತರ ಮಟ್ಟದ್ದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
The Karnataka Examination Authority has published a test schedule for recruitment of lecturer posts in government PU colleges.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia