ಪಿಯುಸಿ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ

ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಿರಲು ಮತ್ತು ಪೋಷಕರ ಹಾಗೂ ಸಾರ್ವಜನಿಕರ ಸಹಾಯಕ್ಕಾಗಿ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯದಲ್ಲಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲು ಕ್ಷಣಗಣನೆ ಶುರುವಾಗಿದೆ. ಇನ್ನು ಕೇವಲ ಎರಡು ದಿನಗಳು ಬಾಕಿ ಇದ್ದು ಎಲ್ಲೆಡೆ ಪರೀಕ್ಷೆ ತಯಾರಿ ಜೋರಾಗಿದೆ. ಇದರ ಜೊತೆಯಲ್ಲಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯವು ಪರೀಕ್ಷೆಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲು ಸಹಾಯವಾಣಿಯ ಸೇವೆ ಆರಂಭಿಸಿದೆ.

2017 ನೇ ಮಾರ್ಚ್ ದ್ವಿತೀಯ ಪಿಯುಸಿ ಪರೀಕ್ಷೆಗಳು ದಿನಾಂಕ 09 -03 -2017 ರಿಂದ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಿರಲು ಮತ್ತು ಪೋಷಕರ ಹಾಗೂ ಸಾರ್ವಜನಿಕರ ಸಹಾಯಕ್ಕಾಗಿ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯದಲ್ಲಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ದಿನಾಂಕ 06 -03 -2017 ರಿಂದ ಸಹಾಯವಾಣಿ ಸೇವೆ ಪ್ರಾರಂಭವಾಗಿದ್ದು, ದಿನದಲ್ಲಿ ಹನ್ನೆರಡು ಗಂಟೆಗಳ ಕಾಲ ಸಹಾಯವಾಣಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಪರೀಕ್ಷೆಗೆ ಸಂಬಂಧ ಮಾಹಿತಿಯನ್ನು ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅನುಕೂಲ ಪಡೆದುಕೊಳ್ಳಬಹುದಾಗಿದೆ.

ಸಹಾಯವಾಣಿ: 080 -23083900

ಕರೆ ಮಾಡಬಹುದಾದ ಸಮಯ

ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಗೆ ಸಹಾಯವಾಗಲೆಂದು ದಿನದಲ್ಲಿ ಹನ್ನೆರಡು ಗಂಟೆ ಕಾರ್ಯನಿರ್ವಸುವಂತೆ ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ 08 :00 ರಿಂದ ಸಂಜೆ 08 :00 ರವರೆಗೆ.

ಸಹಾಯವಾಣಿ ಸೇವೆ

ರಾಜ್ಯಾದ್ಯಂತ ಒಟ್ಟು 998 ಕೇಂದ್ರಗಳಲ್ಲಿ ಪಿಯು ಪರೀಕ್ಷೆಯು ನಡೆಯಲಿದೆ. ಈ ಬಾರಿ ಒಟ್ಟು 6,84,247 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪಿಯು ಪರೀಕ್ಷಾ ಸಮಯದಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದೆಂದು ಶಿಕ್ಷಣ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಪರೀಕ್ಷೆಯ ಸಕಲ ಸಿದ್ದತೆಗಳು ನಡೆದಿದ್ದು ಸೂಕ್ಷ್ಮ ಮತ್ತು ಆತೀ ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಪರೀಕ್ಷೆಗೆ ಬಿಗಿ ಭದ್ರತೆ

ಕಳೆದ ಬಾರಿ ದ್ವಿತೀಯ ಪಿಯುಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ‌ ಪ್ರಕರಣ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಈ ನಿಟ್ಟಿನಲ್ಲಿ ಇದೀಗ ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಸಂಗ್ರಹಣೆಗೆ ಇನ್ನಷ್ಟು ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ಸ್ಟ್ರಾಂಗ್ ರೂಂಗೆ ತೆರಳುವ ಸಿಬ್ಬಂದಿಗೆ ಬಯೋಮೆಟ್ರಿಕ್ ಅಳವಡಿಸಲು ನಿರ್ಧರಿಸಿದೆ.

ಸ್ಟ್ರಾಂಗ್ ರೂಂ ಇರುವ ಆವರಣಕ್ಕೆ ಹೆಚ್ಚಿನ‌ ಭದ್ರತೆ‌ ಒದಗಿಸಲು ತೀರ್ಮಾನಿಸಲಾಗಿದೆ‌. ಅಲ್ಲದೇ ಸ್ಟ್ರಾಂಗ್ ಒಳಗೆ ಮತ್ತು ‌ಹೊರಗೆ ಸಿಸಿಟಿವಿ ಅಳವಡಿಸಲಾಗುತ್ತದೆ.

ಸಾಮೂಹಿಕ ನಕಲು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಶನ್ ಸಿಸ್ಟ್ಂ ಅಳವಡಿಸಿಕೊಂಡಿದೆ. ಆ ಪ್ರಕಾರ ಅದೇ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅದೇ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವಂತಿಲ್ಲ ಎಂಬ ನಿಯಮ ರೂಪಿಸಲಾಗಿದೆ.

ಈ ಬಾರಿ ಯಾವುದೇ ವೈಫಲ್ಯಗಳಿಲ್ಲದೇ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಸಾಕಷ್ಟು ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ.

ಇದನ್ನು ಗಮನಿಸಿ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರಮಗಳು

For Quick Alerts
ALLOW NOTIFICATIONS  
For Daily Alerts

English summary
helpline service by department of pre university board for students, parents and public
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X