ದ್ವಿತೀಯ ಪಿಯುಸಿ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳು

Posted By:

ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ರಾಜ್ಯಕ್ಕೆ ಪ್ರಥಮ ಪಡೆದು ಎಲ್ಲರ ಗಮನ ಸೆಳೆದ ಪ್ರತಿಭಾನ್ವಿತರ ಪರಿಚಯ ಇಲ್ಲಿದೆ. ಪ್ರತಿ ಬಾರಿಯಂತೆ ಈ ಬಾರಿಯು ವಿದ್ಯಾರ್ಥಿನಿಯರದ್ದೇ ಫಲಿತಾಂಶದಲ್ಲಿ ಸಿಂಹಪಾಲಿದ್ದು, ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕೂಡ ವಿದ್ಯಾರ್ಥಿನಿಯರೇ.

ವಿಜ್ಞಾನ ವಿಭಾಗದಲ್ಲಿ ಇಬ್ಬರು ಪ್ರಥಮ

ಈ ಬಾರಿಯ ವಿಜ್ಞಾನ ವಿಷಯದಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ತುಮಕೂರು ಮೂಲಕ ಸೃಜನಾ ಮತ್ತ ಉಡುಪಿಯ ರಾಧಿಕಾ ಪೈ ಮೊದಲ ಸ್ಥಾನಗಳಿಸಿದ ವಿದ್ಯಾರ್ಥಿನಿಯರು.

ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದವರು

ತುಮಕೂರು ಮೂಲದ ಸೃಜನಾ ಎನ್. 596 (600) ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದು, ಈಕೆ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಭಾಷಾ ವಿಷಯಗಳಿಗೆ ಹೊರತು ಪಡಿಸಿದರೆ ಉಳಿದೆಲ್ಲ ವಿಷಯಗಳಲ್ಲೂ ಸೃಜನಾ ನೂರಕ್ಕೆ ನೂರು ಅಂಕ ಗಳಿಸಿ ಟಾಪರ್ ಆಗಿದ್ದಾರೆ.

ಈಕೆ ಗಳಿಸಿದ ಅಂಕಗಳು: ಭೌತಶಾಸ್ತ್ರ-100, ರಸಾಯನ ಶಾಸ್ತ್ರ- 100 , ಗಣಿತ- 100, ಕಂಪ್ಯೂಟರ್ ಸೈನ್ಸ್- 100, ಹಿಂದಿ- 99, ಇಂಗ್ಲಿಶ್- 97.

ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದವರು

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಾಧಿಕಾ ಪೈ ಸಹ ವಿಜ್ಞಾನ ವಿಭಾಗದಲ್ಲಿ 596 (600) ಅಂಕ ಗಳಿಸಿ ಟಾಪರ್ ಆಗಿದ್ದಾರೆ. ಇವರು ಗಂಗೊಳ್ಳಿಯ ಸರಸ್ವತಿ ಕಾಲೇಜು ವಿದ್ಯಾರ್ಥಿನಿ.

600ಕ್ಕೆ 596 ಅಂಕ ಗಳಿಸಿರುವ ರಾಧಿಕಾ, ವಿಜ್ಞಾನದ ನಾಲ್ಕೂ ವಿಷಯಗಳಲ್ಲಿ 100 ಅಂಕ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಸಂಸ್ಕೃತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ತಲಾ 98 ಅಂಕ ಪಡೆದಿದ್ದಾರೆ. ರಾಧಿಕಾ ಮುಂದೆ ಇಂಜಿನಿಯರ್ ಆಗಬೇಕೆಂಬ ಕನಸು.

ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದವರು

ಕಲಾ ವಿಭಾಗದಲ್ಲಿಪ್ರಥಮ ಸ್ಥಾನ ಪಡೆದ ಚೈತ್ರಾ ಕಲಾ ವಿಭಾಗದಲ್ಲಿ ಬಳ್ಳಾರಿಯ ಕೊಟ್ಟೂರಿನ ಇಂದು ಪಿ.ಯು.ಕಾಲೇಜಿನಲ್ಲಿ ಓದುತ್ತಿದ್ದ ಚೈತ್ರಾ, 589 (600) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ದಿನಕ್ಕೆ 9 ಗಂಟೆ ಅಭ್ಯಾಸ ಮಾಡುತ್ತಿದ್ದ ಚೈತ್ರಾ ಐಚ್ಛಿಕ ಕನ್ನಡ, ರಾಜ್ಯಶಾಸ್ತ್ರ, ಇತಿಹಾಸ ಮತ್ತು ಶಿಕ್ಷಣ ಸಂಯೋಜನೆಯಲ್ಲಿ ಮೊದಲ ಪಿಯುಸಿಗೆ ಸೇರುವಾಗಲೇ ಚೈತ್ರಾ ಕಾಲೇಜಿಗೇ ಟಾಪರ್‌ ಆಗಬೇಕೆಂದು ನಿರ್ಧರಿಸಿದ್ದರು. ಅವರಿಗೆ ಕೆಎಎಸ್‌ ಅಧಿಕಾರಿಯಾಗಬೇಕೆಂಬ ಆಸೆ.

ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದವರು

ವಾಣಿಜ್ಯ ವಿಭಾಗದಲ್ಲಿ ಪಿ.ಜಿ.ಶ್ರೀನಿಧಿಗೆ ಪ್ರಥಮ ಸ್ಥಾನ ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಆರ್ ಎನ್ ಎಸ್ ಕಾಲೇಜಿನ ಪಿ.ಜಿ.ಶ್ರೀನಿಧಿ 595 (600) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮುಂದೆ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಓದನ್ನು ಮುಂದುವರೆಸಬೇಕೆಂಬ ಆಶಯ ಹೊಂದಿದ್ದಾರೆ.

English summary
Girls once again outperformed boys in the Class XII Board examination.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia